Wednesday, December 4, 2024
Homeರಾಜ್ಯವಿದ್ಯುತ್ ಕಂಬದಿಂದ ಬಿದ್ದು ಲೈನ್‍ಮನ್ ಸಾವು

ವಿದ್ಯುತ್ ಕಂಬದಿಂದ ಬಿದ್ದು ಲೈನ್‍ಮನ್ ಸಾವು

ಹಾಸನ,ಫೆ.22- ವಿದ್ಯುತ್ ಲೈನ್ ದುರಸ್ತಿ ಕಾರ್ಯಾಚರಣೆ ವೇಳೆ ಕಂಬದಿಂದ ಬಿದ್ದು ಪ್ರೊಬೆಶನರಿ ಲೈನ್‍ಮನ್ ಮೃತಪಟ್ಟಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಳ್ಳಿತಿಮ್ಲಾಪುರ ಗ್ರಾಮದ ರಂಗನಾಥ್ (32) ಮೃತಪಟ್ಟ ಲೈನ್‍ಮನ್.

ಕಳೆದ 2 ವರ್ಷಗಳಿಂದ ಪೆಪ್ರೊಬೆಶನರಿ ಲೈನ್‍ಮನ್ ಆಗಿ ಹಾಸನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಗರದ ಹೊರವಲಯದ ಶ್ರೀನಗರದಲ್ಲಿ ಲೋಡ್‍ಶೆಡ್ಡಿಂಗ್ ವೇಳೆ ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದಾಗಲೇ ತಲೆಸುತ್ತು ಬಂದಿದ್ದು, ಆಯ ತಪ್ಪಿ ಕಂಬದಿಂದ ಚರಂಡಿಗೆ ಬಿದ್ದಿದ್ದಾರೆ. ಕೂಡಲೇ ಸಹದ್ಯೋಗಿಗಳು ಹಾಗೂ ಸ್ಥಳೀಯರು ರಂಗನಾಥ್‍ರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಶಿಕ್ಷಕರ ಕ್ಷೇತ್ರದ ಗೆಲುವು ಲೋಕಸಭೆಗೆ ದಿಕ್ಸೂಚಿ : ಸಿಎಂ

ರಂಗನಾಥ್‍ರವರ ಪತ್ನಿ ಗ್ರಾಮಲೆಕ್ಕಿಗರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ 7 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News