ಬೆಂಗಳೂರು,ನ.22- ರಾಜ್ಯ ಸರ್ಕಾರ 2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಇಂದು ಸಾರ್ವಜನಿಕರ ಮಾಹಿತಿಗಾಗಿ ಬಿಡುಗಡೆ ಮಾಡಿದೆ. ನಾನಾ ಹಬ್ಬಗಳು ಸೇರಿದಂತೆ 2025ರಲ್ಲಿ ಒಟ್ಟು 19 ದಿನ ರಜೆ ಘೋಷಿಸಲಾಗಿದೆ. ಇನ್ನು ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಹೆಚ್ಚಿನ ರಜೆಗಳಿವೆ.
ಭಾನುವಾರಗಳಂದು ಗಣರಾಜ್ಯೋತ್ಸವ (ಜ.26), ಯುಗಾದಿ(ಮಾ.30), ಮೊಹರಂ ಕಡೆ ದಿನ(ಜು.6), ಮಹಾಲಯ ಅಮವಾಸ್ಯೆ(ಸೆ.21) ಮತ್ತು ಎರಡನೇ ಶನಿವಾರದಂದು ಕನಕದಾಸ ಜಯಂತಿ(ನ.8) ಬರುತ್ತವೆ. ಹಾಗಾಗಿ, ಆ ರಜೆಗಳ ಬಗ್ಗೆ ಈ ಪಟ್ಟಿಯಲ್ಲಿ ನಮೂದಿಸಿಲ್ಲ.
ರಜಾ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದಾಗಿದೆ.
2025ನೇ ಸಾಲಿನ ಸರ್ಕಾರಿ ರಜಾ ದಿನಗಳು
ಜನವರಿ 14-ಮಂಗಳವಾರ ಉತ್ತರಾಯಣ ಪುಣ್ಯಕಾಲ,
ಮಕರ ಸಂಕ್ರಾಂತಿ
ಫೆಬ್ರವರಿ 26 ಬುಧವಾರ ಮಹಾಶಿವರಾತ್ರಿ
ಮಾರ್ಚ್ 31 ಸೋಮವಾರ
ಖುತುಬ್-ಎ-ರಂಜಾನ್
ಏಪ್ರಿಲ್ 10 ಗುರುವಾರ
ಮಹಾವೀರ ಜಯಂತಿ
ಏಪ್ರಿಲ್ 14 ಸೋಮವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ
ಏಪ್ರಿಲ್ 18 ಶುಕ್ರವಾರ ಗುಡ್ ಫ್ರೈಡೆ
ಏಪ್ರಿಲ್ 30 ಬುಧವಾರ, ಬಸವ ಜಯಂತಿ, ಅಕ್ಷಯ ತೃತೀಯ
ಮೇ 1 ಗುರುವಾರ ಕಾರ್ಮಿಕ ದಿನಾಚರಣೆ
ಜೂನ್ 7 ಶನಿವಾರ, ಬಕ್ರೀದ್
ಆಗಸ್ಟ್ 15 ಶುಕ್ರವಾರ
ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 27 ಬುಧವಾರ
ವರಸಿದ್ಧಿ ವಿನಾಯಕ ವ್ರತ
ಸೆಪ್ಟೆಂಬರ್ 5 ಶುಕ್ರವಾರ
ಈದ್-ಮಿಲಾದ್
ಅಕ್ಟೋಬರ್ 1 ಬುಧವಾರ ಮಹಾನವಮಿ, ಆಯುಧಪೂಜೆ, ವಿಜಯದಶಮಿ
ಅಕ್ಟೋಬರ್ 2 ಗುರುವಾರ
ಗಾಂಧಿ ಜಯಂತಿ
ಅಕ್ಟೋಬರ್ 7 ಮಂಗಳವಾರ, ವಾಲೀಕಿ ಜಯಂತಿ
ಅಕ್ಟೋಬರ್ 20 ಸೋಮವಾರ
ನರಕ ಚತುದರ್ಶಿ
ಅಕ್ಟೋಬರ್ 22 ಬುಧವಾರ ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 01 ಶನಿವಾರ
ಕನ್ನಡ ರಾಜೋತ್ಸವ
ಡಿಸೆಂಬರ್ 25 ಗುರುವಾರ, ಕ್ರಿಸ್ಮಸ್