Thursday, December 5, 2024
Homeಅಂತಾರಾಷ್ಟ್ರೀಯ | Internationalಗಯಾನಾದಲ್ಲಿ ರಾಮ ಭಜನೆ ಮಾಡಿದ ಪ್ರಧಾನಿ ಮೋದಿ

ಗಯಾನಾದಲ್ಲಿ ರಾಮ ಭಜನೆ ಮಾಡಿದ ಪ್ರಧಾನಿ ಮೋದಿ

PM Modi Enjoys "Ram Bhajan" In Guyana

ಗಯಾನಾ,ನ.22– ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗಯಾನಾದಲ್ಲಿ ರಾಮ ಭಜನೆ ಮಾಡಿ ಗಮನ ಸೆಳೆದಿದ್ದಾರೆ.ಐದು ದೇಶಗಳಿಗೆ ಮೂರು ದಿನಗಳ ಪ್ರವಾಸದಲ್ಲಿರುವ ಮೋದಿ ಅವರು ವಿದೇಶ ಪ್ರವಾಸದ ಕೊನೆಯ ದಿನದಂದು ಗಯಾನಾದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಗಯಾನಾದಲ್ಲಿರುವ ಮಹಾತ ಗಾಂಧಿಸಾರಕಕ್ಕೆ ತೆರಳಿ ರಾಷ್ಟ್ರಪಿತನಿಗೆ ನಮನ ಸಲ್ಲಿಸಿದರು. ಆಗ ಅಲ್ಲಿದ್ದ ಕೆಲವರು ರಾಮ ಭಜನೆ ಮಾಡುತ್ತಿದ್ದರು. ಭಜನೆ ಮಾಡುತ್ತಿದ್ದ ತಂಡದೊಂದಿಗೆ ಸೇರಿಕೊಂಡ ಮೋದಿ ಅವರು ತಾಳ ಹಾಕುವ ಮೂಲಕ ಭಜನೆ ಮಾಡಿ ಗಮನ ಸೆಳೆದರು.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಗಯಾನಾದ ಜಾರ್ಜ್ಟೌನ್ನಲ್ಲಿರುವ ಭಾರತೀಯ ಸಾರಕಕ್ಕೆ ಭೇಟಿ ನೀಡಿ, ಅಲ್ಲಿ ಸಸಿ ನೆಟ್ಟಿದ್ದಾರೆ. ಕಳೆದ 56 ವರ್ಷಗಳಲ್ಲಿ ಗಯಾನಾಗೆ ಭೇಟಿ ನೀಡಿದ ಏಕೈಕ ಭಾರತೀಯ ಪ್ರಧಾನಿ ಮೋದಿ ಆಗಿದ್ದಾರೆ. ಗಯಾನಾಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

RELATED ARTICLES

Latest News