ಸೂರತ್,ಏ,22-ತೀವ್ರ ಕುತೂಹಲ ಕೆರಳಿಸಿರುವ ಭಾರತದ ಲೋಕಸಭೆ ಚುನಾವಣೆ ನಡುವೆಯೇ ಬಿಜೆಪಿ ಖಾತೆ ತೆರೆದು ಶುಭಾರಂಭ ಮಾಡಿದೆ.ಗುಜರಾತ್‍ನ ಸೂರತ್‍ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿನ್ನೆ ನಾಮಪತ್ರಪರಿಶೀಲನೆ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೀಲೇಶ್ ಕುಂಭಾಣಿ ತಮ್ಮ ಪರವಾಗಿ ನಾಮಪತ್ರಕ್ಕೆ ಸಹಿ ಮಾಡಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಅವರ ನಾಮಪತ್ರ ತಿರಸ್ಕøತಗೊಳಿಸಿದ್ದರು. ಇದಾದ 24 ಗಂಟೆಯಲ್ಲಿ ನಡೆದ ಬೆಳವಣಿಗೆಯಲ್ಲಿ ಪಕ್ಷೇತರರು ಸೇರಿ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡರು.
ಇದರಿಂದಾಗಿ ಪರಮುಖೇಶ್ ದಲಾಲ್ ಅವರು ಸೂರತ್ ಲೋಕಸಭಾ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದರು.ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಹಲವಾರು ದೋಷಗಳು ಕಂಡು ಬಂದ ಹಿನ್ನಲೆಯಲ್ಲಿ ನಾಮಪತ್ರ ತಿರಸ್ಕಾರ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗೆ ಅಫಿಡವಿಟ್‍ನಲ್ಲಿ ಹೇಳಿದ್ದಾರೆ.
ಸೂರತ್ ಬಿಜೆಪಿ ಭದ್ರ ಕೋಟೆಯಾಗಿದ್ದು ಕೇಸರಿ ಪಡೆ ನಾಗಾಲೋಟ ಮುಂದುವರೆದಿದೆ ಸೂರತ್ ಕ್ಷೇತ್ರಕ್ಕೆ ಏ.22ಕ್ಕೆ ನಿಗದಿಯಾಗಿದ್ದ ಚುನಾವಣೆ ಈಗ ರದ್ದಾಗಿದೆ.ಕಾಂಗ್ರೆಸ್ ತಂತ್ರಗಾರಿಕೆ ವಿಫಲಗೊಂಡಿದೆ.ಬಿಜೆಪಿ ಪಾಳಯ ಹರ್ಷಗೊಂಡಿದ್ದು ಈ ಗೆಲವು ಪ್ರಧಾನಿ ಮೋದಿಗೆ ಸಲ್ಲುತ್ತದೆ ಎಂದು ಗುಜರಾತ್ ಸಿಎಂ ಹಾಗು ಪಕ್ಷದ ನಾಯಕರು ಹೇಳಿದ್ದಾರೆ.ಒಟ್ಟಾರೆ ಬಿಜೆಪಿಗೆ ಶುಭಾರಂಭವಂತೆ ಮೊದಲ ಗೆಲವು ಸಿಕ್ಕಿದ್ದು ಖಾತೆ ತೆರೆದಿದೆ