Sunday, May 5, 2024
Homeರಾಷ್ಟ್ರೀಯರೈಲಿನ ಖಾಲಿ ಕೋಚ್‍ನಿಂದ ಬರುತ್ತಿದ್ದ ಹೊಗೆ ನಿಯಂತ್ರಿಸುವ ವೇಳೆ ಕಾನ್ಸ್‌ಟೇಬಲ್‌ ಸಾವು

ರೈಲಿನ ಖಾಲಿ ಕೋಚ್‍ನಿಂದ ಬರುತ್ತಿದ್ದ ಹೊಗೆ ನಿಯಂತ್ರಿಸುವ ವೇಳೆ ಕಾನ್ಸ್‌ಟೇಬಲ್‌ ಸಾವು

ಮುಜಾಫರಪುರ್ (ಬಿಹಾರ), ಅ 22 – ಇಲ್ಲಿನ ಮುಜಾಫರಪುರ್ ರೈಲು ನಿಲ್ದಾಣದಲ್ಲಿ ರೈಲಿನ ಖಾಲಿ ಕೋಚ್‍ನಿಂದ ಬರುತ್ತಿದ್ದ ಹೊಗೆಯನ್ನು ನಿಯಂತ್ರಿಸುವ ವೇಳೆ ರೈಲ್ವೇ ರಕ್ಷಣಾ ಪಡೆ (ಆರ್‍ಪಿಎಫ್ ) ಕಾನ್ಸ್‌ಟೇಬಲ್‌ ಒಬ್ಬರು ಮೃತಪಟ್ಟಿದ್ದಾರೆ.

ಮೃತ ಆರ್‍ಪಿಎಫ್ ಕಾನ್‍ಸ್ಟೆಬಲ್‍ನನ್ನು ವಿನೋದ್ ಯಾದವ್ ಎಂದು ಗುರುತಿಸಲಾಗಿದೆ ಎಂದುಪೂರ್ವ ಮಧ್ಯ ರೈಲ್ವೆಯ ಸಿಪಿಆರ್‍ಒ ಬೀರೇಂದ್ರ ಕುಮಾರ್ ಅವರು ತಿಳಿಸಿದ್ದಾರೆ, ಬೆಳಿಗ್ಗೆ 7 ಗಂಟೆ ಸುಮಾರಿಗೆ ಮುಜಾಫರಪುರ್ ರೈಲು ನಿಲ್ದಾಣದಲ್ಲಿ ಖಾಲಿ ವಲ್ಸಾದ್-ಮುಜಾಫರಪುರ್ ರೈಲಿನ ಕೋಚ್‍ನಿಂದ ಹೊಗೆ ಹೊರ ಹೊಮ್ಮುತ್ತಿರುವುದನ್ನು ವಿನೋದ್ ಯಾದವ್ ಗಮನಿಸಿ ತಕ್ಷಣವೇ ಬೆಂಕಿ ನಿಯಂತ್ರಿಸುವ ಅಗ್ನಿಶಾಮಕ ಸಾಧನ ತೆರೆಯಲು ಪ್ರಯತ್ನಿಸಿದಾಗ, ಅದು ಸಿಡಿಯಿತು ಇದು ಅವರಿಗೆ ತೀವ್ರ ಗಾಯಗಳನ್ನು ಉಂಟುಮಾಡಿತು.

ಘಟನೆ ನಡೆದಾಗ ಇಡೀ ರೈಲು ಖಾಲಿಯಾಗಿತ್ತು ಎಂದು ಸಿಪಿಆರ್‍ಒ ತಿಳಿಸಿದ್ದಾರೆ, ರೈಲು ಮುಜಾಫರಪುರ್ ರೈಲು ನಿಲ್ದಾಣದಲ್ಲಿ ಕೊನೆಗೊಂಡಿತು.ಇದು ಬೆಂಕಿಯಲ್ಲ. ಇದು ಕೇವಲ ಕೋಚ್‍ನಿಂದ ಹೊಗೆ ಹೊರಹೊಮ್ಮುತ್ತಿದೆ. ಗಾಯಗೊಂಡ ಆರ್‍ಪಿಎ-ï ಕಾನ್‍ಸ್ಟೆಬಲ್ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಸಾವನ್ನಪ್ಪಿದರು. ಖಾಲಿ ಕೋಚ್‍ನಿಂದ ಹೊಗೆ ಹೊರಬಿತ್ತು. ಘಟನೆಯ ನಿಖರವಾದ ಕಾರಣವನ್ನು ತಕ್ಷಣವೇ ನಿಯಂತ್ರಣಕ್ಕೆ ತರಲಾಗುವುದು, ಘಟನೆಯ ಕಾರಣವನ್ನು ಖಚಿತಪಡಿಸಿಕೊಳ್ಳಲು ತನಿಖೆಗೆ ಆದೇಶಿಸಲಾಗುವುದು.

ಮುಜಾಫರಪುರ್ ರೈಲು ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮರೇಶ್ ಕುಮಾರ್ ಇದೊಂದು ಅತ್ಯಂತ ದುರಂತ ಘಟನೆ, ಘಟನೆಯ ನಿಖರವಾದ ಕಾರಣವನ್ನು ವಿಚಾರಣೆ ಮುಗಿದ ನಂತರ ತಿಳಿಯಬಹುದು. ಸ್ಥಳದಿಂದ ಸಂಗ್ರಹಿಸಲಾದ ಎಲ್ಲಾ ಸಾಕ್ಷ್ಯಗಳನ್ನು ಕಳುಹಿಸಲಾಗಿದೆ ಎಂದರು.

RELATED ARTICLES

Latest News