Friday, December 6, 2024
Homeರಾಜಕೀಯ | Politicsಲೋಕಸಭಾ ಚುನಾವಣೆಗೆ ಬಿಜೆಪಿಯಿಂದ 10 ಹೊಸ ಅಭ್ಯರ್ಥಿಗಳು ಕಣಕ್ಕೆ

ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ 10 ಹೊಸ ಅಭ್ಯರ್ಥಿಗಳು ಕಣಕ್ಕೆ

ಬೆಂಗಳೂರು,ಜ.29- ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಮಿಷನ್-25 ಗುರಿ ಇಟ್ಟುಕೊಂಡಿರುವ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಚಾಲನೆ ಕೊಟ್ಟಿದ್ದು, ಈ ಬಾರಿ 8ರಿಂದ 10 ಹೊಸ ಮುಖಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಆಡಳಿತ ವಿರೋಧಿ ಅಲೆ ಒಂದು ಕಡೆಯಾದರೆ 70ರಿಂದ 75 ವರ್ಷ ದಾಟಿದವರಿಗೆ ಟಿಕೆಟ್ ನೀಡದೆ ಶೈಕ್ಷಣಿಕ ಅರ್ಹತೆ, ವೈಯಕ್ತಿಕ ಹಿನ್ನಲೆ, ಮತದಾರರ ಜೊತೆ ಸಂಪರ್ಕ, ವರ್ಚಸ್ಸು ಆಧಾರದ ಮೇಲೆ ಟಿಕೆಟ್ ಘೋಷಣೆಯಾಗಲಿದೆ.

ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದು, ಪಕ್ಷದ ಸಂಘಟನೆ ಕುರಿತಂತೆ ಮಾಹಿತಿ ಪಡೆಯಲಿದ್ದಾರೆ. ರಾಜ್ಯಕ್ಕೆ ವರಿಷ್ಠರು ಆಗಮಿಸುವ ಮುನ್ನ 28 ಲೋಕಸಭಾ ಕ್ಷೇತ್ರಗಳಿಗೆ ಸಂಭವನೀಯ ಪಟ್ಟಿಯನ್ನು ಸಿದ್ದಪಡಿಸಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸುವಂತೆ ಸೂಚನೆ ಬಂದಿದೆ.ಹೀಗಾಗಿ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಮುಂದುವರೆದಿದೆ.

ಗೆಲ್ಲುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ಮುಂದಾಗಿರುವ ಬಿಜೆಪಿ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಹಾಗೂ ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದವರಿಗೂ ಮಣೆ ಹಾಕುವ ಸಾಧ್ಯತೆ ಇದೆ. ಕಳೆದ ವಾರ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕಲ್ಯಾಣ ಕರ್ನಾಟಕ ಪಕ್ಷದ ಶಾಸಕ ಜನಾರ್ಧನ ರೆಡ್ಡಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಮತ್ತು ಸ್ವಯಂ ನಿವೃತ್ತಿ ಪಡೆದವರನ್ನು ಪಕ್ಷಕ್ಕೆ ಆಹ್ವಾನಿಸಲಾಗಿದೆ.

ಈಗಾಗಲೇ ಚುನಾವಣೆಗೆ ಸ್ರ್ಪಸುವುದಿಲ್ಲ ಎಂದು ಹಾಲಿ ಸಂಸದರಾದ ವಿ.ಶ್ರೀನಿವಾಸ್ ಪ್ರಸಾದ್, ಬಚ್ಚೇಗೌಡ, ಜಿ.ಎಸ್.ಬಸವರಾಜ್, ದೇವೇಂದ್ರಪ್ಪ ಸೇರಿದಂತೆ ಕೆಲವರು ಪ್ರತಿನಿಸುವ ಲೋಕಸಭಾ ಕ್ಷೇತ್ರಗಳಿಗೆ ಹೊಸಮುಖಗಳನ್ನು ಕಣಕ್ಕಿಳಿಸುವ ಸಂಭವವಿದೆ. ಬಿಜೆಪಿಗೆ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಮ್ಮ ತವರು ಜಿಲ್ಲೆ ಧಾರವಾಡ ಇಲ್ಲವೇ ನೆರೆಯ ಹಾವೇರಿ ಜೊತೆಗೆ ಪಕ್ಕದ ಬೆಳಗಾವಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.

BIG NEWS : 7 ದಿನಗಳಲ್ಲಿ ಭಾರತದಾದ್ಯಂತ ಸಿಎಎ ಜಾರಿ : ಶಂತನೂ ಠಾಕೂರ್

ಸದ್ಯ ಧಾರವಾಡ ಕ್ಷೇತ್ರವನ್ನು ಹಾಲಿ ಸಚಿವ ಪ್ರಹ್ಲಾದ್ ಜೋಷಿ ಪ್ರತಿನಿಸುತ್ತಿದ್ದು, ಒಂದು ವೇಳೆ ಶೆಟ್ಟರ್ ಕಣಕ್ಕಿಳಿದರೆ ಜೋಷಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ಲೆಕ್ಕಾಚಾರವು ಬಿಜೆಪಿಯಲ್ಲಿದೆ. ಬೆಳಗಾವಿಯಲ್ಲಿ ಹಾಲಿ ಸಂಸದೆ ಮಂಗಳಾ ಸುರೇಶ್ ಬದಲಿಗೆ ಅವರ ಪುತ್ರಿ ಹಾಗೂ ಜಗದೀಶ್ ಶೆಟ್ಟರ್ ಸೊಸೆ ಶ್ರದ್ದಾ ಶೆಟ್ಟರ್‍ಗೆ ಟಿಕೆಟ್ ಕೊಡುವ ಬಗ್ಗೆ ಪಕ್ಷದ ವಲಯದಲ್ಲಿ ಚಿಂತನೆ ಇದೆ. ಇದೇ ಕ್ಷೇತ್ರದ ಮೇಲೆ ಮಾಜಿ ವಿಧಾನಪರಿಷತ್ ಸದಸ್ಯ ಮಹಂತೇಶ್ ಕವಟಗಿ ಮಠ ಕಣ್ಣಿಟ್ಟಿದ್ದಾರೆ.

ಚಿಕ್ಕೋಡಿಯಲ್ಲಿ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಬಹುತೇಕ ಮುಂದುವರೆಯುವುದು ಖಚಿತವಾಗಿದೆ. ಆದರೆ ಈ ಕ್ಷೇತ್ರದ ಮೇಲೆ ಮಾಜಿ ಸಚಿವ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸದಾ ಬೆಂಕಿ ಉಗುಳಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಡೋಲಾಯಮಾನವಾಗಿದೆ. ಅವರಿಗೆ ಆಡಳಿತ ವಿರೋ ಅಲೆ ಇರುವುದರಿಂದ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರು ಕೇಳಿಬರುತ್ತಿದೆ.

ದಕ್ಷಿಣ ಕನ್ನಡದಲ್ಲಿ ಹಾಲಿ ಸಂಸದ ನಳೀನ್‍ಕುಮಾರ್ ಕಟೀಲ್ ಆಡಳಿತ ವಿರೋ ಅಲೆ ಇರುವುದರಿಂದ ಸಂಘ ಪರಿವಾರದ ಪುತ್ತೀಲ, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಆರ್‍ಆರ್‍ಎಸ್ ಹಿನ್ನಲೆಯ ಇರುವ ಬ್ರಿಜೇಶ್ ಚೌತುಲ ಹೆಸರು ಮುಂಚೂಣಿಯಲ್ಲಿದೆ.

ಮೈಸೂರು-ಕೊಡುಗು ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಖಾತರಿಯಾಗಿದ್ದರೆ, ಪಕ್ಕದ ಚಾಮರಾಜನಗರದಲ್ಲಿ ಹಾಲಿ ಸಂಸದ ವಿ.ಶ್ರೀನಿವಾಸ್ ಅವರ ಅಳಿಯ ಡಾ.ಎನ್.ಎಸ್.ಮೋಹನ್ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಸಂಜಯ್ ಗಾಂಧಿ ಆಸ್ಪತ್ರೆಯ ಬೆನ್ನು ಹುರಿ ತಜ್ಞ ಹಾಗೂ ಪ್ರಾಧ್ಯಾಪಕರಾಗಿದ್ದ ಡಾ.ಎನ್.ಎಸ್.ಮೋಹನ್ ಅವರು ಚುನಾವಣೆಗೆ ಸ್ರ್ಪಧಿಸಲೆಂದೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.

ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಜೆಡಿಎಸ್‍ಗೆ ಬಿಟ್ಟುಕೊಡಲು ಬಿಜೆಪಿ ಸಮ್ಮತಿಸಿದೆ. ಚಿಕ್ಕಬಳ್ಳಾಪುರದಲ್ಲಿ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ ಸ್ರ್ಪಸುವುದಿಲ್ಲ ಎಂದು ಹೇಳಿರುವುದರಿಂದ ಈ ಕ್ಷೇತ್ರಕ್ಕೆ ಹಲವರ ಹೆಸರುಗಳು ಕೇಳಿಬರುತ್ತಿವೆ.

ಮಾಜಿ ಸಚಿವ ಡಾ.ಕೆ.ಸುಧಾಕರ್, ಯಲಹಂಕ ಶಾಸಕ ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್, ಮಾಜಿ ಸಚಿವ ಎಂಟಿಬಿ ನಾಗರಾಜ್ ಪುತ್ರ ನಿತೇಶ್, ಬುಡವನಹಳ್ಳಿ ಲೋಕೇಶ್ ಗೌಡ, ವಸಂತ್‍ಗೌಡ ಹೆಸರು ಚಾಲ್ತಿಯಲ್ಲಿವೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಹಲವರನ್ನು ಭೇಟಿ ಮಾಡುತ್ತಿರುವ ಸುಧಾಕರ್ ಕೊನೆ ಕ್ಷಣದಲ್ಲಿ ಈ ಕ್ಷೇತ್ರದಿಂದ ಅಭ್ಯರ್ಥಿಯಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಲೋಕಸಭೆಗೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ : ದಿಗ್ವಿಜಯ್‍ಸಿಂಗ್

ಕೋಲಾರ ಕ್ಷೇತ್ರಕ್ಕೆ ಜೆಡಿಎಸ್ ಪಟ್ಟು ಹಿಡಿದರೆ, ಹಾಲಿ ಸಂಸದ ಮುನಿಸ್ವಾಮಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ.
ಉಳಿದಂತೆ ಶಿವಮೊಗ್ಗ, ಚಿಕ್ಕಮಂಗಳೂರು, ಉಡುಪಿ, ಕಲಬುರಗಿ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್ ಕ್ಷೇತ್ರಗಳಿಗೆ ಹಾಲಿ ಅಭ್ಯರ್ಥಿಗಳೇ ಮುಂದುವರೆಯಲಿದ್ದಾರೆ.

ಸಂಭವನೀಯ ಅಭ್ಯರ್ಥಿಗಳು
ಚಿಕ್ಕೋಡಿ – ಅಣ್ಣಾ ಸಾಹೇಬ್ ಜೊಲ್ಲೆ
ಬೆಳಗಾವಿ- ಶ್ರದ್ದಾ ಶೆಟ್ಟರ್ /ಜಗದೀಶ್ ಶೆಟ್ಟರ್
ಬಾಗಲಕೋಟೆ – ಬಸನಗೌಡ ಪಾಟೀಲ್ ಯತ್ನಾಳ್
ಬಿಜಾಪುರ – ರಮೇಶ್ ಜಿಗಜಿಣಗಿ/
ಕಲಬುರಗಿ – ಡಾ.ಉಮೇಶ್ ಜಾಧವ್
ರಾಯಚೂರು – ಅಮರೇಶ್ ನಾಯಕ್/ರಾಜುಗೌಡ ನಾಯಕ್
ಬೀದರ್ – ಭಗವಂತ ಖೂಬಾ
ಕೊಪ್ಪಳ – ಜನಾರ್ಧನ ರೆಡ್ಡಿ/ ಕರಡಿ ಸಂಗಣ್ಣ
ಬಳ್ಳಾರಿ – ಬಿ.ಶ್ರೀರಾಮುಲು
ಹಾವೇರಿ – ಬಸವರಾಜ ಬೊಮ್ಮಾಯಿ/ಸಂದೀಪ್ ಪಾಟೀಲ್
ಧಾರವಾಡ – ಪ್ರಹ್ಲಾದ್ ಜೋಷಿ/ ಜಗದೀಶ್ ಶೆಟ್ಟರ್
ಉತ್ತರ ಕನ್ನಡ – ಅನಂತಕುಮಾರ್ ಹೆಗಡೆ/ ವಿಶ್ವೇಶ್ವರ ಹೆಗಡೆ ಕಾಗೇರಿ
ದಾವಣಗೆರೆ – ಜಿ.ಎಂ.ಸಿದ್ದೇಶ್/ಎಂ.ಪಿ.ರೇಣುಕಾಚಾರ್ಯ/ಡಾ.ರವಿಕುಮಾರ್
ಶಿವಮೊಗ್ಗ – ಬಿ.ವೈ.ರಾಘವೇಂದ್ರ
ಉಡುಪಿ-ಚಿಕ್ಕಮಗಳೂರು -ಶೋಭಾ ಕರಂದ್ಲಾಜೆ
ದಕ್ಷಿಣ ಕನ್ನಡ – ಬ್ರಿಜೇಶ್ ಚೌತುಲ/ಅರುಣ್ ಪುತ್ತೀಲ
ಚಿತ್ರದುರ್ಗ – ಎ.ನಾರಾಯಣಸ್ವಾಮಿ
ತುಮಕೂರು- ವಿ.ಸೋಮಣ್ಣ
ಮಂಡ್ಯ – ಜೆಡಿಎಸ್
ಮೈಸೂರು-ಕೊಡಗು – ಪ್ರತಾಪ್ ಸಿಂಹ
ಚಾಮರಾಜನಗರ -ಡಾ.ಎನ್.ಎಸ್.ಮೋಹನ್
ಬೆಂಗಳೂರು ಗ್ರಾಮಾಂತರ -ಜೆಡಿಎಸ್
ಬೆಂಗಳೂರು ಉತ್ತರ -ಡಿ.ವಿ.ಸದಾನಂದಗೌಡ
ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್/ಸುಮಲತಾ
ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ/ಜೈಶಂಕರ್
ಚಿಕ್ಕಬಳ್ಳಾಪುರ -ಡಾ.ಕೆ.ಸುಧಾಕರ್
ಕೋಲಾರ – ಮುನಿಸ್ವಾಮಿ/ ಜೆಡಿಎಸ್‍ಗೆ

RELATED ARTICLES

Latest News