Thursday, December 5, 2024
Homeರಾಜ್ಯಲೋಕ ಚುನಾವಣೆಗೆ ಸ್ಪರ್ಧೆ : ಅಡ್ಡಗೋಡೆ ಮೇಲೆ ದೀಪವಿಟ್ಟ ಡಿವಿಎಸ್

ಲೋಕ ಚುನಾವಣೆಗೆ ಸ್ಪರ್ಧೆ : ಅಡ್ಡಗೋಡೆ ಮೇಲೆ ದೀಪವಿಟ್ಟ ಡಿವಿಎಸ್

ಬೆಂಗಳೂರು,ಜ.1- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ರ್ಪಧಿಸುವ ಕುರಿತು ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದು ಹಾಲಿ ಸಂಸದ ಡಿ.ವಿ.ಸದಾನಂದ ಗೌಡ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಇಡೀ ಲೋಕಸಭಾ ಕ್ಷೇತ್ರದಲ್ಲಿ ಒಂದೇ ಒಂದು ಮತದಾರರು ನನ್ನನ್ನು ಬೇಡ ಎಂದಿಲ್ಲ. ವಿರೋಧಿಸಿಲ್ಲ. ನನಗೆ ಖುಷಿ ಇದೆ. ನೋಡೋಣ ಮುಂದೆ ಏನಾಗುತ್ತದೆ ಎಂದು ಸೂಚ್ಯವಾಗಿ ಹೇಳಿದರು. ನಾನು ಎಲ್ಲರ ಜೊತೆಯೂ ಸಂಬಂಧಗಳನ್ನು ಚೆನ್ನಾಗಿ ಇಟ್ಟುಕೊಂಡಿದ್ದೇನೆ. ನಾನು ಹಿಂದೆ ಮಾಧ್ಯಮಗಳೊಂದಿಗೆ ಮಾತನ್ನಾಡಿದ್ದೇನೆ. ನನ್ನ ಮನೆಯವರಿಗೆ ಸೀರೆ ತಂದುಕೊಟ್ಟಿದ್ದೇನೆ ಎಂದು ಹೇಳುವ ವ್ಯಕ್ತಿ ನಾನಲ್ಲ ಎಂದರು. ಅವರು ಉಟ್ಟ ಸೀರೆ ನಾನು ತಂದುಕೊಟ್ಟಿದ್ದು ಎಂದು ಹೇಳುವುದಲ್ಲ. ಈಗ ಸದ್ಯದ ಪರಿಸ್ಥಿತಿಯಲ್ಲಿ ಏನು ಹೇಳುವುದಿಲ್ಲ. ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದೇನೆ ಅಂದುಕೊಳ್ಳಬೇಡಿ. ಈಗ ನಾನು ಏನು ಹೇಳುವುದಿಲ್ಲ. ಮುಂದೆ ನೋಡೋಣ ಎಂದು ಪುನರುಚ್ಚರಿಸಿದರು.

ರಾಜಕಾರಣ ನಿಶ್ಚಯಗಳು, ನಿಲುವುಗಳು ಇರುತ್ತದೆ. ನಾನು 30 ವರ್ಷದ ರಾಜಕಾರಣ ನೋಡಿದ್ದೇನೆ. ಹೊಸಬರು ಬರಬೇಕೆಂದು ನಾನು ಬಯಸಿದ್ದು ನಿಜ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜಕಾರಣದಲ್ಲಿ ಕೆಲ ಬದಲಾವಣೆ ಆಗಿದೆ. ಈಗ ನನ್ನ ಮೇಲೆ ಒತ್ತಡ ಬರುತ್ತಿದೆ. ಬಸವರಾಜ ಬೊಮ್ಮಾಯಿ, ದಾಸರಹಳ್ಳಿ ಶಾಸಕರು, ಕೆ.ಆರ್. ಪುರಂ ಶಾಸಕರು, ಬ್ಯಾಟರಾಯನಪುರದ ಸ್ಥಳೀಯರು ಹಾಗೂ ಸೋಮಶೇಖರ್ ಕೂಡ ನನ್ನ ಪರ ಇದ್ದಾರೆ ಎಂದು ಹೇಳಿದರು.

ರಾಮ ಒಬ್ಬರಿಗೆ ಸೇರಿದವನಲ್ಲ ಎಂಬ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿದ ಗೌಡರು, ಪರಮೇಶ್ವರ್ ಅವರಿಗೆ ಈಗ ಒಳ್ಳೆಯ ಬುದ್ಧಿ ಬಂದಿದೆ. ಅವರಿಗೆ ರಾಮ ಒಳ್ಳೆಯದು ಮಾಡಲಿ. ಅವರು ಕೂಡ ಬರಲೀ ಎಂದು ವ್ಯಂಗ್ಯವಾಡಿದರು.

ರಾಮ ಜನ್ಮಭೂಮಿ ಕರ ಸೇವಕರ ಮೇಲೆ ಸರ್ಕಾರ ಸೇಡು: ಅಶೋಕ್

ಪಕ್ಷದಲ್ಲಿ ವಿ.ಸೋಮಣ್ಣ ಅಸಮಾಧಾನಕ್ಕೆ ಸಂಬಂಧಿಸಿದಂತೆ ಇದು ಸಹಜ. ಈಗ ಹೊಸ ತಂಡ ಬಂದಿದೆ. ಸದ್ಯ ಹೊಸ ವರ್ಷದ ಸಂಭ್ರಮಾಚರಣೆಗೆ ಮಗನಿಗೆ ಅಪ್ಪ ಹೊಗಬೇಡ ಎನ್ನುತ್ತಾರೆ. 500 ಕೇಳಿದರೆ 150 ರೂ. ಕೊಡುತ್ತೇನೆ ಎಂದಾಗ, ಸ್ವಲ್ಪ ಅಸಮಾಧಾನ ಆಗುತ್ತದೆ. ಸೋಮಣ್ಣರ ವಿಚಾರದಲ್ಲಿ ಆಗಿರುವುದು ಅದೇ. ಸೋಮಣ್ಣ ಅವರು ಗೋವಿಂದರಾಜನಗರ ಬಿಟ್ಟು ಬೇರೆ ಕಡೆ ಹೋಗಿ, ಹಿನ್ನಡೆ ಅನುಭವಿಸಿದ್ದಾರೆ. ಹೀಗಾಗಿ, ಸ್ವಲ್ಪ ಬೇಸರ ಆಗಿದೆ. ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ವಿ.ಸೋಮಣ್ಣ ಸರ್ಧೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿ.ಸೋಮಣ್ಣನವರೇ ನನಗೆ ಕರೆ ಮಾಡಿ ಮಾತನ್ನಾಡಿದ್ದಾರೆ. ನೀವೇ ಬೆಂಗಳೂರು ಉತ್ತರಕ್ಕೆ ನಿಲ್ಲಬೇಕೆಂದರು. ಹಲವು ಮಂದಿ ನಿಮ್ಮ ನಿರ್ಧಾರ ಸರಿಯಲ್ಲ ಎಂದಿದ್ದಾರೆ. ಬೇರೆ ಯಾರಾದರೂ ಹೇಳಿದ್ದರೆ ಒಪ್ಪಬಹುದು. ನೀವು ಹೀಗೆ ಹೇಳಬಾರದಿತ್ತು ಎನ್ನುತ್ತಿದ್ದಾರೆ. ಖುದ್ದು ಸೋಮಣ್ಣನವರೇ ನೀವೇ ನಿಲ್ಲಬೇಕು ಎಂದಾಗ, ಅವರು ಬಂದು ಸರ್ಧೆ ಮಾಡುತ್ತಾರೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.

RELATED ARTICLES

Latest News