Tuesday, April 16, 2024
Homeರಾಷ್ಟ್ರೀಯಬಿಜೆಪಿ ಸೇರಿದ ಕಮಲ್ ನಾಥ್ ಆಪ್ತ, ಛಿಂದ್‍ವಾರಾ ನಗರ ಮೇಯರ್

ಬಿಜೆಪಿ ಸೇರಿದ ಕಮಲ್ ನಾಥ್ ಆಪ್ತ, ಛಿಂದ್‍ವಾರಾ ನಗರ ಮೇಯರ್

ಭೋಪಾಲ್, ಎ.1-ಲೋಕಸಭೆ ಚುನಾವಣೆಗೆ ಮುನ್ನ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‍ಗೆ ಮತ್ತೊಂದು ಹಿನ್ನಡೆಯಾಗಿದ್ದು, ಛಿಂದ್‍ವಾರಾ ನಗರದ ಮೇಯರ್ ಇಂದು ಬೆಳಿಗ್ಗೆ ಬಿಜೆಪಿ ಗೆ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೇಸ್‍ನ ಪ್ರಭಾವಿ ನಾಯಕ ,ಛಿಂದವಾರದ ಮೇಯರ್ ವಿಕ್ರಮ್ ಅಹಕೆ ಅವರು ರಾಜ್ಯ ರಾಜಧಾನಿ ಭೋಪಾಲ್‍ನಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ವಿಡಿ ಶರ್ಮಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಕಳೆದ ವಾರವಷ್ಟೇ ಛಿಂದ್ವಾರಾ ಜಿಲ್ಲೆಯ ಅಮರವಾಡದ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಿಎಂ ಕಮಲ್ ನಾಥ್ ಅವರ ನಿಕಟವರ್ತಿ ಕಮಲೇಶ್ ಶಾ ಅವರು ಬಿಜೆಪಿಗೆ ಸೇರಿದ್ದರು.ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಛಿಂದ್ವಾರಾ ಮಾಜಿ ಸಿಎಂ ನಾಥ್ ಅವರ ತವರು ಜಿಲ್ಲೆಯಾಗಿದೆ.

ಮಧ್ಯಪ್ರದೇಶದಲ್ಲಿ ಕಳೆದ 2019 ರ ಲೋಕಸಭೆ ಚುನಾವಣೆಯಲ್ಲಿ ಏಕೈಕ ಕಾಂಗ್ರೆಸ್ ವಿಜೇತರಾದ ನಕುಲ್ ನಾಥ್ ಅವರು ತಮ್ಮ ತಂದೆ ಕಮಲ್ ನಾಥ್ ಅವರು ಪ್ರತಿನಿಧಿಸಿರುವ ಚಿಂದ್ವಾರದಿಂದ ನಾಮಪತ್ರ ಸಲ್ಲಿಸಿದ್ದಾರೆ.ಬಿಜೆಪಿ ಈ ಕ್ಷೇತ್ರದಿಂದ ವಿವೇಕ್ ಬಂಟಿ ಸಾಹು ಅವರನ್ನು ಕಣಕ್ಕಿಳಿಸಿದೆ.

ಕಮಲ್ ನಾಥ್ ಪ್ರಸ್ತುತ ಛಿಂದ್ವಾರಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಅವರ ಪತ್ನಿ ಅಲ್ಕಾ ನಾಥ್ ಅವರು 1996 ರಲ್ಲಿ ಛಿಂದ್ವಾರಾ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು.

RELATED ARTICLES

Latest News