ಬೆಂಗಳೂರು,ಫೆ.13:ಪೆಟ್ರೋಲ್ ಬಂಕ್‍ಗೆ ಎನ್‍ಓಸಿ ಪ್ರಮಾಣ ಪತ್ರ ನೀಡಲು 30 ಸಾವಿರ ರೂ ಲಂಚ ಪಡೆಯುತ್ತಿದ್ದ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚಿಕ್ಖಬಳ್ಳಾಪುರ ಜಿಲ್ಲೆ ಚಿಂತಾಮಣಿಯ ದೊಡ್ಢಗಂಜೂರ್‍ನಲ್ಲಿ ಪೆಟ್ರೋಲ್ ಬಂಕ್ ಆರಂಭಿಸುತ್ತಿದ್ದ ಎನ್.ವಿ.ಶ್ರೀನಾಥ್ ಅವರು ಎನ್‍ಓಸಿ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು.
ಈ ವೇಳೆ ಮಂಡಳಿಯ ದ್ಚಿತೀಯ ದರ್ಜೆ ಅಧಿಕಾರಿ ಖಚಾ ವಾಳಿ (53) ಅವರು 30 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು.ಇದನ್ನು ಅರ್ಜಿದಾರರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಬೆಳಿಗ್ಗೆ ಲಂಚದ ಹಣ ಪಡೆಯುವಾಗ ಇನ್ಸ್‍ಪೆಕ್ಟರ್ ಮೋಹನ್ ಕುಮಾರ್ ನೇತೃತ್ವದಲ್ಲಿ ಸಿಬ್ಭಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಅದಿಕಾರಿ ಖಚಾ ವಾಳಿ ಅವರು ಲಂಚದ ಹಣ ಸಮೇತ ರೆಡ್‍ಹಾಂಡ್‍ಆಗಿ ಸಿಕ್ಕಿಬಿದ್ದಿದ್ದಾರೆ