Thursday, September 19, 2024
Homeರಾಷ್ಟ್ರೀಯ | Nationalಸೆಪ್ಟೆಂಬರ್‌ನಲ್ಲಿ ದೇಶದಾದ್ಯಂತ ಜನಗಣತಿ ಸಾಧ್ಯತೆ..?

ಸೆಪ್ಟೆಂಬರ್‌ನಲ್ಲಿ ದೇಶದಾದ್ಯಂತ ಜನಗಣತಿ ಸಾಧ್ಯತೆ..?

Long-delayed population census may start in September,

ನವದೆಹಲಿ,ಆ.23- ಕಳೆದ 15 ವರ್ಷಗಳಿಂದ ನಡೆಯದ ಜನಗಣತಿಯನ್ನು ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ  ನಡೆಸುವ ಸಾಧ್ಯತೆ ಇದೆ.  10 ವರ್ಷಗಳಿಗೊಮ್ಮೆ ನಡೆಸಬೇಕಾದ ಜನಸಂಖ್ಯಾ ಗಣತಿಯನ್ನು 2021ರಲ್ಲಿ  ಮಾಡಬೇಕಿತ್ತು.

 3 ವರ್ಷಗಳ ಹಿಂದೆಯೇ ನಡೆಯಬೇಕಿದ್ದ ಎಣಿಕೆ ಕೊರೊನಾ ಕಾರಣಕ್ಕಾಗಿ ತಡೆಹಿಡಿಯಲಾಗಿತ್ತು. ಇದಾದ ಬಳಿಕವೂ ಹಲವು ಕಾರಣಗಳಿಗಾಗಿ ಜನಗಣತಿ ಮುಂದೂಡುತ್ತಲೇ ಬರಲಾಗುತ್ತಿದೆ. ಹೀಗಾಗಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಆರಂಭಿಸುವ ಉದ್ದೇಶವಿದೆ ಎಂದು ಸರ್ಕಾರಿ ಮೂಲಗಳು ಬಹಿರಂಗಪಡಿಸಿವೆ.

2026ರ ಮಾರ್ಚ್‌ ವೇಳೆಗೆ ಪ್ರಕಟ:

ಸಮೀಕ್ಷೆಯು ಸೆಪ್ಟೆಂಬರ್‌ನಲ್ಲಿ  ಪ್ರಾರಂಭವಾದರೆ ಪೂರ್ಣಗೊಳ್ಳಲು ಸುಮಾರು 18 ತಿಂಗಳು ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಅಂತಿಮ ಒಪ್ಪಿಗೆ ಬರಬೇಕಿದೆ. ಜನಗಣತಿ ನಡೆಸುವ ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಸಾಂಖ್ಯಿಕ ಇಲಾಖೆ ಕಾಲಮಿತಿ ನಿಗದಿಪಡಿಸಿಕೊಂಡಿದ್ದು, 2026ರ ಮಾರ್ಚ್‌ ವೇಳೆಗೆ 15 ವರ್ಷಗಳ ದತ್ತಾಂಶ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ ಎಂದು ಅಧಿ ಕಾರಿ ವರ್ಗ ತಿಳಿಸಿದೆ.

ಆದರೆ ಈವರೆಗೂ ಕೇಂದ್ರ ಗೃಹ ಸಚಿವಾಲಯ ಮತ್ತು ಅಂಕಿಅಂಶ ಇಲಾಖೆಯಿಂದ ಯಾವುದೇ ಅಧಿ ಕೃತ ಮಾಹಿತಿ ಬಂದಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ 2024-25ನೇ ಸಾಲಿನ ಬಜೆಟ್‌ನಲ್ಲಿ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪ್ರಕ್ರಿಯೆಗೆ 1,309.46 ಕೋಟಿ ರೂ. ಮೀಸಲಿಟ್ಟಿದ್ದಾರೆ. 2021-2022ರ ಬಜೆಟ್‌ನಲ್ಲಿ ಜನಗಣತಿಗಾಗಿ 3,768 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು.

ವಿಶ್ವದಲ್ಲಿ ಭಾರತವೇ ನಂ.1:

ಜನಗಣತಿ ವಿಳಂಬವನ್ನು ಹಲವು ತಜ್ಞರು ಟೀಕಿಸುತ್ತಿದ್ದಾರೆ. ಇದು ಇತರ ವಿಷಯಗಳ ಮೇಳೆ ಪರಿಣಾಮ ಬೀರುತ್ತದೆ. ಪ್ರಸ್ತುತ, 2011ರ ಜನಗಣತಿ ಲೆಕ್ಕಾಚಾರವನ್ನೇ ಆಧರಿಸಬೇಕಿದೆ. ಕಳೆದ ವರ್ಷ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯು ವಿಶ್ವದಲ್ಲೇ ನಂಬರ್‌ 1 ಆಗಿದೆ ಎಂದು ಹೇಳಿತ್ತು.

 ಈ ಸ್ಥಾನದಲ್ಲಿ ಚೀನಾವನ್ನು ಹಿಂದಿಕ್ಕಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಎಂದು ಘೋಷಿಸಿದೆ. 1950ರಿಂದ ಜನಸಂಖ್ಯೆ ಸಮೀಕ್ಷೆ ಪ್ರಕಟಿಸಲು ಪ್ರಾರಂಭಿಸಿದ ನಂತರ ಭಾರತವು ಇದೇ ಮೊದಲ ಬಾರಿಗೆ ವಿಶ್ವದಲ್ಲಿ ಅಗ್ರಪಟ್ಟ ಪಡೆದಿದೆ.

RELATED ARTICLES

Latest News