ಬೆಂಗಳೂರು, ನ.11- ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಜನರು ಊರುಗಳತ್ತ ತೆರಳುತ್ತಿದ್ದು, ಬಸ್‍ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.ನಿನ್ನೆ ಕೆಲಸ ಮುಗಿಸಿಕೊಂಡು ಬಹುತೇಕ ಜನರು ನಿನ್ನೆ ರಾತ್ರಿಯೇ ಪ್ರಯಾಣಿ ಬೆಳೆಸಿದ್ದು, ನಗರದ ಮೆಜೆಸ್ಟಿಕ್ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಶಾಂತಿನಗರ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ಬಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾಯಿಸಿದ್ದು, ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದ ದೃಶ್ಯಗಳು ಕಂಡುಬಂತು.
ಹಬ್ಬದ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಜೊತೆಗೆ ಬಿಎಂಟಿಸಿ ಬಸ್‍ಗಳನ್ನು ಸಹ ವಿವಿಧ ಜಿಲ್ಲೆಗಳಿಗೆ ಸಂಚರಿಸುತ್ತಿದ್ದು, ಎಲ್ಲಾ ಬಸ್‍ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರು. ಶಕ್ತಿಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವ ಹಿನ್ನೆಲೆಯಲ್ಲಿ ಸಾಮಾನ್ಯ ಬಸ್‍ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿ ಕಂಡು ಬಂತು.
ನೂತನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮುಂದಿವೆ ಬೆಟ್ಟದಷ್ಟು ಸವಾಲುಗಳು
ಕಳೆದ ಒಂದು ತಿಂಗಳ ಹಿಂದೆಯೇ ಶಿವಮೊಗ್ಗ, ಹುಬ್ಬಳ್ಳಿ, ಧಾರಾವಾಡ, ರಾಯಚೂರು, ಗುಲ್ಬರ್ಗ, ಮಡಿಕೇರಿ, ಮಂಗಳೂರು, ಕೊಡಗು ಸೇರಿದಂತೆ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಮುಂಗಡವಾಗಿ ಟಿಕೇಟ್‍ಗಳನ್ನು ಕಾಯ್ದಿರಿಸಿದ್ದರು. ಪ್ರಯಾಣಿಕರ ಸಂಖ್ಯೆಗಣುಗುಣವಾಗಿ ಕೆಎಸ್‍ಆರ್‍ಟಿಸಿ ವತಿಯಿಂದ ಯಾವುದೇ ತೊಂದರೆಯಾಗದಂತೆ ಹೆಚ್ಚುವರಿ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ರೈಲುಗಳು ಪುಲ್ ರಶ್
ದೇಶದಾದ್ಯಂತ ಸಡಗರದಿಂದ ದೀಪಾವಳಿ ಹಬ್ಬವನ್ನು ಆಚರಿಸಲಿದ್ದು, ಉದ್ಯೋಗಕ್ಕಾಗಿ ರಾಜಧಾನಿಯಲ್ಲಿ ನೆಲೆಸಿರುವ ವಿವಿಧ ರಾಜ್ಯಗಳ ಜನರು ಸಹ ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದು, ರೈಲುಗಳಲ್ಲೂ ಸಹ ಜಾಗವಿಲ್ಲದಂತೆ ಪ್ರಯಾಣಿಸುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯೇ ಮುಂಗಡ ಟಿಕೇಟ್ ಕೂಡ ಕಾಯ್ದಿರಿಸಿಕೊಂಡು ಪ್ರಯಾಣ ಬೆಳೆಸುತ್ತಿದ್ದಾರೆ.
ಖಾಸಗಿ ಬಸ್‍ಗಳಿಗೂ ಡಿಮಾಂಡ್
ಹೆಚ್ಚಿನ ಸಂಖ್ಯೆಯಲ್ಲಿ ಜನರು ಊರುಗಳತ್ತ ತೆರಳುತ್ತಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಬಸ್ ಮಾಲೀಕರು ಟಿಕೇಟ್ ದರವನ್ನು ದುಪ್ಪಟ್ಟು ಮಾಡಿದ್ದು, ಜಗಳ ಮಾತಿನ ಚಕಮಕಿಯೊಂದಿಗೆ ವಿ ಇಲ್ಲದೆ ಪ್ರಯಾಣಿಸುವಂತಾಗಿತ್ತು.
ಟ್ರಾಫಿಕ್ ಜಾಮ್
ಕಳೆದ ರಾತ್ರಿಯಿಂದಲೇ ಮೆಜೆಸ್ಟಿಕ್ ಹಾಗೂ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಮೆಜೆಸ್ಟಿಕ್ ಸುತ್ತಮುತ್ತ ತಡರಾತ್ರಿಯವರೆಗೂ ಸಂಚಾರಿ ದಟ್ಟಣೆ ಉಂಟಾಗಿತ್ತು. ಇನ್ನೂ ತುಮಕೂರು ರಸ್ತೆ ಗೊರಗುಂಟೆ ಪಾಳ್ಯ, ನೆಲಮಂಗಲ ಟೋಲ್, ಅತ್ತಿಬೆಲೆ, ಆನೇಕಲ್ ಟೋಲ್, ದೇವನಹಳ್ಳಿ ಟೋಲ್‍ಗಳಲ್ಲೂ ಸಹ ಕಾರು ಬಸ್‍ಗಳು ಕಿಲೋಮೀಟರ್‍ಗಟ್ಟಲೇ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದವು.