Saturday, March 1, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಬಿ.ವೈ.ವಿ ಕಾರಿನ ಹಿಂಬದಿ ಸಾಗುತ್ತಿದ್ದ ವಾಹನಕ್ಕೆ ಲಾರಿ ಡಿಕ್ಕಿ

ಬಿ.ವೈ.ವಿ ಕಾರಿನ ಹಿಂಬದಿ ಸಾಗುತ್ತಿದ್ದ ವಾಹನಕ್ಕೆ ಲಾರಿ ಡಿಕ್ಕಿ

Lorry hits vehicle behind BY Vijayendra Car

ಚಿಕ್ಕಮಗಳೂರು, ಮಾ.1- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರಯಾಣಿಸುತ್ತಿದ್ದ ಕಾರಿನ ಹಿಂಬದಿ ಸಾಗುತ್ತಿದ್ದ ಪರ್ಯಾಯ ವಾಹನಕ್ಕೆ ಹಿಂಬದಿಯಿಂದ ಲಾರಿ ಗುದ್ದಿ ಅಪಘಾತ ಸಂಭವಿಸಿರುವ ಘಟನೆ ತಾಲೂಕಿನ ಲಕ್ಯಾ ಕ್ರಾಸ್‌ನಲ್ಲಿ ತಡರಾತ್ರಿ ಸಂಭವಿಸಿದೆ.

ಚಿಕ್ಕಮಗಳೂರಿನಲ್ಲಿ ನಡೆದ ಬಸವ ತತ್ವ ಪೀಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ.ವೈ.ವಿಜಯ್ಯಂದ್ರ ಅವರು ತಮ್ಮ ಬೆಂಗಾವಲು ವಾಹನ ಹಾಗೂ ಪರ್ಯಾಯ ವಾಹನದೊಂದಿಗೆ ಶಿವಮೊಗ್ಗದತ್ತ ಪ್ರಯಾಣ ಬೆಳೆಸಿದ್ದರು.

ಈ ವೇಳೆ ಲಕ್ಯ ಕ್ರಾಸ್ ಬಳಿ ಪರ್ಯಾಯ ವಾಹನಕ್ಕೆ ಹಿಂಬದಿಯಿಂದ ಬಂದ ಲಾರಿ ಗುದ್ದಿದೆ. ಘಟನೆಯಲ್ಲಿ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Latest News