Friday, November 22, 2024
Homeಜಿಲ್ಲಾ ಸುದ್ದಿಗಳು | District Newsಖಾಸಗಿ ವಿಡಿಯೋ ವೈರಲ್‌ ಬೆದರಿಕೆ : ಅಣ್ಣನ ಜೊತೆ ಪ್ರಿಯಕರನನ್ನು ಕೊಂದ ಪ್ರೇಮಿ

ಖಾಸಗಿ ವಿಡಿಯೋ ವೈರಲ್‌ ಬೆದರಿಕೆ : ಅಣ್ಣನ ಜೊತೆ ಪ್ರಿಯಕರನನ್ನು ಕೊಂದ ಪ್ರೇಮಿ

ಮೈಸೂರು, ಜೂ.12- ಖಾಸಗಿ ಫೋಟೋ ಹಾಗೂ ವಿಡಿಯೋ ವೈರಲ್‌ ಮಾಡುತ್ತೇನೆಂದು ಬೆದರಿಕೆ ಹಾಕಿದ್ದ ಪ್ರಿಯತಮನನ್ನು ಪ್ರಿಯತಮೆ ಹಾಗೂ ಸಹೋದರ ಸೇರಿಕೊಂಡು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.ಎಚ್‌ಡಿ ಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದ ನಿವಾಸಿ ರಾಜೇಶ್‌ ಕೊಲೆಯಾದ ಪ್ರಿಯತಮ.

ಪ್ರಿಯತಮನ ಮೇಲೆ ಕಲ್ಲುಚಪ್ಪಡಿ ಹಾಕಿ ಕೊಲೆಗೈದ ಪ್ರಿಯತಮೆ ಹಾಗೂ ಈಕೆಯ ಸಹೋದರ ಪೊಲೀಸರ ಅತಿಥಿಯಾಗಿದ್ದಾನೆ. ಮೈಸೂರಿನ ಕ್ಯಾತಮಾರನಹಳ್ಳಿಯ ಪ್ರೇಮ ಎಂಬ ಮಹಿಳೆ ಕಳೆದ 15 ವರ್ಷಗಳ ಹಿಂದೆ ನಂಜನಗೂಡಿನ ಶ್ರೀರಾಂಪುರದ ನಿವಾಸಿಯನ್ನು ವಿವಾಹವಾಗಿದ್ದರು.

ಒಂದು ತಿಂಗಳ ಹಿಂದೆ ಮಹಿಳೆ ಪತಿ ತೀರಿಕೊಂಡಿದ್ದರು. ಪ್ರೇಮಾ ಪತಿ ಜತೆ ರಾಜೇಶ್‌ ಆತೀಯನಾಗಿದ್ದ. ಆಗಾಗ್ಗೆ ಪ್ರೇಮಾಳ ಮನೆಗೆ ಬಂದು ಹೋಗುತ್ತಿದ್ದ. ಕೆಲ ದಿನಗಳ ನಂತರ ಸಲುಗೆ ಅಕ್ರಮ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಈ ಸೇಡಿಗಾಗಿ ಖಾಸಗಿ ವಿಡಿಯೋ ಹಾಗೂ ಆಡಿಯೋಗಳನ್ನು ವೈರಲ್‌ ಮಾಡುವುದಾಗಿ ಪ್ರೇಮಾಗೆ ರಾಜೇಶ್‌ ಬೆದರಿಕೆ ಹಾಕಿದ್ದ.

ಇದೇ ವಿಚಾರವಾಗಿ ಮಾತನಾಡಬೇಕೆಂದು ಪ್ರೇಮಾ ರಾಜೇಶ್‌ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಪ್ರೇಮಾ ಸಹೋದರನ ಜತೆ ಸೇರಿ ರಾಜೇಶ್‌ ಜತೆ ಜಗಳವಾಡಿ ವಾರ್ನಿಂಗ್‌ ಮಾಡಿದ್ದಾರೆ. ಇದರಿಂದ ತಪ್ಪಿಸಿಕೊಂಡು ಹೋಗುತ್ತಿರುವಾಗ ಆರ್‌ಪಿ ರಸ್ತೆಯ 8ನೆ ಕ್ರಾಸ್‌‍ ಬಳಿ ಅಡ್ಡ ಹಾಕಿ ಜಗಳ ತೆಗೆದು ಕಲ್ಲುಚಪ್ಪಡಿಯನ್ನು ತಲೆ ಮೇಲೆ ಹಾಕಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಈ ಸುದ್ದಿ ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಸುದ್ದಿ ತಿಳಿದ ಕೂಡಲೇ ನಂಜನಗೂಡು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಪ್ರೇಮಾ ಹಾಗೂ ಸಹೋದರನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News