Sunday, November 10, 2024
Homeರಾಷ್ಟ್ರೀಯ | Nationalಬಿಜೆಪಿಗೆ ಉರುಳಾಯಿತೇ ಉರುಳಿಬಿದ್ದ ಛತ್ರಪತಿ ಶಿವಾಜಿ ಪ್ರತಿಮೆ..?

ಬಿಜೆಪಿಗೆ ಉರುಳಾಯಿತೇ ಉರುಳಿಬಿದ್ದ ಛತ್ರಪತಿ ಶಿವಾಜಿ ಪ್ರತಿಮೆ..?

Maha Vikas Aghadi, BJP hold separate protests over Shivaji statue collapse

ಮುಂಬೈ,ಸೆ.1- ಶಿವಾಜಿ ಪ್ರತಿಮೆ ಉರುಳಿಬಿದ್ದ ಪ್ರಕರಣ ಮಹಾರಾಷ್ಟ ಸರ್ಕಾರಕ್ಕೆ ಹುರುಳಾಗಿ ಪರಿಣಮಿಸತೊಡಗಿದೆ. ಸಿಂಧುದುರ್ಗದ ಮಾಲ್ವಾನ್‌ನಲ್ಲಿ ಛತ್ರಪತಿ ಶಿವಾಜಿ ಅವರ 35 ಅಡಿ ಎತ್ತರದ ಪ್ರತಿಮೆ ಉರುಳಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾ ವಿಕಾಸ್‌‍ ಅಘಾಡಿ ಘೋಷಿಸಿರುವ ಬಹತ್‌ ಮುಂಬೈ ಪ್ರತಿಭಟನೆಗೆ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ.ಆಡಳಿತಾರೂಢ ಬಿಜೆಪಿ ಪ್ರತಿಭಟನೆಯ ಔಚಿತ್ಯವನ್ನು ಪ್ರಶ್ನಿಸಿದೆ ಮತ್ತು ಪ್ರತಿಪಕ್ಷಗಳ ಆಂದೋಲನವನ್ನು ಎದುರಿಸಲು ತನ್ನದೇ ಆದ ಮೆರವಣಿಗೆಯನ್ನು ಯೋಜಿಸಿದೆ.

ಗೇಟ್‌ವೇ ಆಫ್‌ ಇಂಡಿಯಾದಲ್ಲಿ ಭದ್ರತಾ ಪಡೆಗಳ ಭಾರೀ ಪೊಲೀಸ್‌‍ ಸಿಬ್ಬಂದಿ ಜಮಾಯಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲೇಖಿಸಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

ಮಹಾರಾಷ್ಟ್ರದ ಇಂಡಿಯಾ ಬಣದ ಉನ್ನತ ನಾಯಕ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ, ಎನ್‌ಸಿಪಿ (ಎಸ್‌‍ಪಿ) ಮುಖ್ಯಸ್ಥ ಶರದ್‌ ಪವಾರ್‌ ಮತ್ತು ರಾಜ್ಯ ಕಾಂಗ್ರೆಸ್‌‍ ಅಧ್ಯಕ್ಷ ನಾನಾ ಪಟೋಲೆ ಅವರು ಫೋರ್ಟ್‌ ಪ್ರದೇಶದ ಹುತಾತ ಚೌಕ್‌ನಿಂದ ಗೇಟ್‌ವೇ ಆಫ್‌ ಇಂಡಿಯಾದವರೆಗೆ ರ್ಯಾಲಿ ನಡೆಸಲಿದ್ದಾರೆ.

ಆಪ್‌ ಬಣವು ತನ್ನ ಆಂದೋಲನವನ್ನು ಜೋಡೆ ಮಾರೋ ಪ್ರತಿಭಟನೆ ಎಂದು ಕರೆದಿದೆ, ಇದರರ್ಥ ಪಾದರಕ್ಷೆಗಳಿಂದ ಹೊಡೆಯಿರಿ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡಿದ ಶಿವಸೇನೆ (ಯುಬಿಟಿ) ಮಹಾರಾಷ್ಟ್ರದ ಹೆಮೆಯನ್ನು ಜಾಗತಗೊಳಿಸಲು ಶಿವಾಜಿಯ ಪಾದಗಳಿಗೆ ನಮಸ್ಕರಿಸಲು ಬರುತ್ತಿದೆ ಎಂದು ಟ್ವೀಟ್‌ ಮಾಡಿದೆ.

ಭ್ರಷ್ಟ ಶಿವದ್ರೋಹಿಗಳಿಗೆ ಕ್ಷಮೆ ಇಲ್ಲ ಎಂದು ಎನ್‌ಸಿಪಿಯ ಶರದ್‌ ಪವಾರ್‌ ಬಣ ಹೇಳಿದೆ. ಕಳಪೆ ಕೆಲಸ ಮಾಡಿದ, ಭ್ರಷ್ಟಾಚಾರ ಎಸಗಿದ, ಶಿವಾಜಿಯನ್ನು ಅವಮಾನಿಸಿದ ಶಿವದ್ರೋಹಿಗಳಿಗೆ ತಕ್ಕ ಪಾಠ ಕಲಿಸುವ ಉದ್ದೇಶದಿಂದ ಪಾದಯಾತ್ರೆ ಹಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌‍ ರಾಜ್ಯ ಘಟಕ ಹೇಳಿದೆ.

ಕಳೆದ 8 ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ ಕುಸಿದ ಘಟನೆ ಮಹಾರಾಷ್ಟ್ರದಲ್ಲಿ ಭಾರೀ ರಾಜಕೀಯ ಸಂಚಲನ ಮೂಡಿಸಿದೆ. ಈ ಯೋಜನೆಯನ್ನು ನೌಕಾಪಡೆಯು ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ನಿರ್ವಹಿಸಿದೆ.

ಪೊಲೀಸರು ಯೋಜನೆಯ ರಚನಾತಕ ಸಲಹೆಗಾರ ಮತ್ತು ಅದರ ಗುತ್ತಿಗೆದಾರನನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಕೊಲೆ ಯತ್ನ, ತಪ್ಪಿತಸ್ಥ ನರಹತ್ಯೆ ಮತ್ತು ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾರ್ಯಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ರಾಜಕೀಯ ಹಿನ್ನಡೆಯ ನಡುವೆಯೇ ಪ್ರಧಾನಿ ಮೋದಿ ಪ್ರತಿಮೆ ಕುಸಿತಕ್ಕೆ ಜನರಲ್ಲಿ ಕ್ಷಮೆಯಾಚಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಹೆಸರು ಅಥವಾ ರಾಜನಲ್ಲ. ನಮಗೆ ಅವರು ನಮ ಆರಾಧ್ಯದೈವ. ಇಂದು ನಾನು ಅವರ ಪಾದಗಳಿಗೆ ತಲೆಬಾಗಿ ನನ್ನ ದೇವರಲ್ಲಿ ಕ್ಷಮೆಯಾಚಿಸುತ್ತೇನೆ. ಕುಸಿದು ಬಿದ್ದ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಪ್ರತಿಪಕ್ಷಗಳ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಯೋಜಿಸಲಾಗಿದೆ ಎಂದು ಆಡಳಿತ ಪಕ್ಷ ಆರೋಪಿಸಿದೆ.ಪ್ರಧಾನಿಯವರ ಕ್ಷಮೆ ಸಾಕಾಗುವುದಿಲ್ಲವೇ? ರಫೇಲ್‌ ಎಪಿಸೋಡ್‌ನಲ್ಲಿ ತಮ ಕಾಮೆಂಟ್‌ಗಳಿಗೆ ರಾಹುಲ್‌ ಗಾಂಧಿ ಕೂಡ ಕ್ಷಮೆಯಾಚಿಸಿದ್ದಾರೆ. ಈ ಕ್ಷಮೆಗಾಗಿ ಅವರು (ಎಂವಿಎ) ಇದೇ ರೀತಿಯ ಪ್ರತಿಭಟನೆಯನ್ನು ನಡೆಸುತ್ತಾರೆಯೇ? ಎಂದು ರಾಜ್ಯ ಬಿಜೆಪಿ ವಕ್ತಾರ ಕೇಶವ ಉಪಾಧ್ಯೆ ಪ್ರಶ್ನಿಸಿದ್ದಾರೆ.

RELATED ARTICLES

Latest News