Thursday, May 2, 2024
Homeರಾಷ್ಟ್ರೀಯಮಹದೇವ ಆ್ಯಪ್ ಆನ್‍ಲೈನ್ ಬೆಟ್ಟಿಂಗ್ ಪ್ರಕರಣದ ಹೊಸ ಚಾರ್ಜ್‍ಶೀಟ್ ಸಲ್ಲಿಕೆ

ಮಹದೇವ ಆ್ಯಪ್ ಆನ್‍ಲೈನ್ ಬೆಟ್ಟಿಂಗ್ ಪ್ರಕರಣದ ಹೊಸ ಚಾರ್ಜ್‍ಶೀಟ್ ಸಲ್ಲಿಕೆ

ರಾಯ್‍ಪುರ,ಜ.6- ಮಹಾದೇವ್ ಆನ್‍ಲೈನ್ ಬುಕ್ ಆಪ್ ಮೂಲಕ ಅಕ್ರಮ ಬೆಟ್ಟಿಂಗ್ ಮತ್ತು ಗೇಮಿಂಗ್‍ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯವು ರಾಯ್‍ಪುರದ ವಿಶೇಷ ನ್ಯಾಯಾಲಯಕ್ಕೆ ಹೊಸ ಚಾರ್ಜ್‍ಶೀಟ್ ಸಲ್ಲಿಸಿದೆ. ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯವು ಛತ್ತೀಸ್‍ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಹೆಸರನ್ನು ಒಳಗೊಂಡಂತೆ 6 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇತರ ಐವರು ಆರೋಪಿಗಳನ್ನು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದ್ದು, ವಿವಾದಾತ್ಮಕ ಬೆಟ್ಟಿಂಗ್ ಆಪ್ ಹಗರಣದ ಮೇಲೆ ಬೆಳಕು ಚೆಲ್ಲಿದೆ.

ದೋಷಾರೋಪ ಪಟ್ಟಿಯಲ್ಲಿ ಬಘೇಲ್ ಜತೆಗೆ ಶುಭಂ ಸೋನಿ, ಅಮಿತ್ ಕುಮಾರ್ ಅಗರ್ವಾಲ್, ರೋಹಿತ್ ಗುಲಾಟಿ, ಭೀಮ್ ಸಿಂಗ್ ಮತ್ತು ಅಸೀಮ್ ದಾಸ್ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಮಹದೇವ್ ಬೆಟ್ಟಿಂಗ್ ಆಪ್‍ನ ಪ್ರವರ್ತಕರ ಕೊರಿಯರ್ ಆಗಿ ಕೆಲಸ ಮಾಡುತ್ತಿದ್ದ ಅಸೀಮ್ ದಾಸ್ ಅವರನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ಅವರ ನಿವೇಶನದಿಂದ ಸುಮಾರು 5.39 ಕೋಟಿ ರೂ. ವಶಪಡಿಸಿಕೊಂಡಿರುವ ಬಗ್ಗೆ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.

ಸುಮಾರು 1,700-1,800 ಪುಟಗಳ ಹೊಸ ಚಾರ್ಜ್‍ಶೀಟ್‍ನ್ನು ಜನವರಿ 1ರಂದು ಸಲ್ಲಿಸಲಾಗಿದ್ದು, ನಗದು ಕೊರಿಯರ್ ಆಸಿಮ್ ದಾಸ್, ಪೊಲೀಸ್ ಪೇದೆ ಭೀಮ್ ಸಿಂಗ್ ಯಾದವ್, ಆ್ಯಪ್‍ಗೆ ಸಂಪರ್ಕ ಹೊಂದಿದ ಪ್ರಮುಖ ಕಾರ್ಯನಿರ್ವಾಹಕ ಶುಭಂ ಸೋನಿ ಸೇರಿದಂತೆ ಐವರು ಆರೋಪಿಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಆಪ್‍ನ ಇಬ್ಬರು ಪ್ರಮುಖ ಪ್ರವರ್ತಕರಾದ ರವಿ ಉಪ್ಪಲ್ ಮತ್ತು ಸೌರಭ್ ಚಂದ್ರಕರ್ ಅವರ ಗಡೀಪಾರು ಅಥವಾ ಹಸ್ತಾಂತರವನ್ನು ಪಡೆಯಲು ಫೆಡರಲ್ ಏಜೆನ್ಸಿಯು ಈ ಎರಡನೇ ಪ್ರಾಸಿಕ್ಯೂಷನ್ ದೂರನ್ನು (ಚಾರ್ಜ್‍ಶೀಟ್) ದುಬೈನಲ್ಲಿರುವ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಡಿ ಆದೇಶದ ಮೇರೆಗೆ ಇಂಟರ್ಪೋಲ್ ರೆಡ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇಬ್ಬರನ್ನು ಇತ್ತೀಚೆಗೆ ದುಬೈನಲ್ಲಿ ಬಂಧಿಸಲಾಗಿತ್ತು. ಸಂಸ್ಥೆಯು ಮೊದಲ ಚಾರ್ಜ್‍ಶೀಟ್‍ನ ವಿಷಯಗಳನ್ನು ಯುಎಇ ಅಧಿಕಾರಿಗಳೊಂದಿಗೆ ಹಂಚಿಕೊಂಡಿದೆ. ಅದರ ಆಧಾರದ ಮೇಲೆ ಇಂಟರ್ಪೋಲ್ ರೆಡ್ ನೋಟಿಸ್ (ಆರೆನ್) ಹೊರಡಿಸಲು ಇಬ್ಬರ ವಿರುದ್ಧ ಜಾಮೀನು ರಹಿತ ವಾರಂಟ್ ಅನ್ನು ಪಡೆದುಕೊಂಡಿದೆ.

ಪಡಿತರ ವಿತರಣೆ ಹಗರಣದಲ್ಲಿ ಟಿಎಂಸಿ ನಾಯಕ ಶಂಕರ್ ಅಧ್ಯಾ ಅರೆಸ್ಟ್

ವಶಪಡಿಸಿಕೊಂಡ ಹಣವನ್ನು ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಛತ್ತೀಸ್ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್‍ಗೆ ಕಳುಹಿಸಲಾಗಿದೆ ಎಂದು ಅಸೀಮ್ ದಾಸ್ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿ ಸಿದ್ದಾರೆ. ಇತ್ತೀಚಿನ ವಿಧಾನಸಭೆ ಚುನಾವಣೆಗೂ ಮುನ್ನ ಈ ವಹಿವಾಟು ನಡೆದಿದೆ ಎನ್ನಲಾಗಿದೆ. ಮಹಾದೇವ್ ಬೆಟ್ಟಿಂಗ್ ಆಪ್‍ನ ಪ್ರವರ್ತಕರು ಭೂಪೇಶ್ ಬಘೇಲ್ಗೆ ಒಟ್ಟು 508 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಲಾಯ ತನಿಖೆ ವೇಳೆ ಗೊತ್ತಾಗಿತ್ತು. ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಭೂಪೇಶ್ ಬಘೇಲ್ಗೆ ಹಣವನ್ನು ಕಳುಹಿಸಲಾಗಿದೆ ಎಂದು ಚಾರ್ಜ್‍ಶೀಟ್‍ನಲ್ಲಿ ಪ್ರತಿಪಾದಿಸಲಾಗಿದೆ.

ಏನಿದು ಮಹದೇವ್ ಬೆಟ್ಟಿಂಗ್ ಆಪ್ ಹಗರಣ?:
ಮಹದೇವ್ ಆನ್‍ಲೈನ್ ಆಪ್ ಪ್ರವರ್ತಕರು 5,000 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಬಹಿರಂಗಪಡಿಸಿದೆ. ಆ್ಯಪ್ ಸ್ಕಿಲ್ ಗೇಮ್‍ಗಳ ಹೆಸರಿನಲ್ಲಿ ಭಾರತದಲ್ಲಿ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‍ಗಳನ್ನು ನಡೆಸುತ್ತಿದೆ.

ಆ್ಯಯಪ್ ಕಂಪನಿಯು ವೆಬ್‍ಸೈಟ್‍ಗಳಲ್ಲಿ ಸಂಪರ್ಕ ಸಂಖ್ಯೆಯ ಜಾಹೀರಾತು ನೀಡಿ, ಹಣ ಠೇವಣಿ ಮಾಡಲು ಲೇಸರ್247 ಡಾಟ್ ಕಾಮ್‍ನಂತಹ ಪ್ಲಾಟ್‍ಫಾರ್ಮ್‍ಗಳನ್ನು ಬಳಸುವಂತೆ ಬಳಕೆದಾರರಿಗೆ ಸೂಚಿಸುತ್ತದೆ. ಈ ಆ್ಯಪ್ ಪ್ರವರ್ತಕರು ಛತ್ತೀಸ್‍ಗಡ ಮಾಜಿ ಸಿಎಂಗೆ ಹಣ ಕಳುಹಿಸಿಕೊಟ್ಟಿರುವುದನ್ನು ಜಾರಿ ನಿರ್ದೇಶನಾಲಯ ಬಯಲಿಗೆಳೆದಿತ್ತು.

RELATED ARTICLES

Latest News