Friday, January 17, 2025
Homeರಾಷ್ಟ್ರೀಯ | Nationalಪ್ರಯಾಗ್‌ರಾಜ್‌ನಲ್ಲಿ ಹಿಂದೂ ಸಂತರ ಹತ್ಯೆಗೆ ಸಂಚು ರೂಪಿಸಲಾಗಿತ್ತೇ…?

ಪ್ರಯಾಗ್‌ರಾಜ್‌ನಲ್ಲಿ ಹಿಂದೂ ಸಂತರ ಹತ್ಯೆಗೆ ಸಂಚು ರೂಪಿಸಲಾಗಿತ್ತೇ…?

Mahamandaleshwar Arun Giri injured in collision en route to Maha Kumbh in Prayagraj

ಪ್ರಯಾಗ್‌ರಾಜ್‌, ಡಿ 28 (ಪಿಟಿಐ) ಇಲ್ಲಿನ ಪ್ರಯಾಗ್‌ರಾಜ್‌ನ ನವಾಬ್‌ಗಂಜ್‌ ಬಳಿ ಎದುರಿನಿಂದ ಬರುತ್ತಿದ್ದ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂದೂ ಧರ್ಮದರ್ಶಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಆವಾಹನ್‌ ಅಖಾಡ ತಿಳಿಸಿದೆ. ಅಖಾಡಾ ಇದು ಆಕಸಿಕವಲ್ಲ ಆದರೆ ಯೋಜಿತ ಪಿತೂರಿ ಎಂದು ಇತ್ತೀಚೆಗೆ ಮಹಾ ಕುಂಭಕ್ಕೆ ನೀಡಲಾದ ಬೆದರಿಕೆಗಳಿಗೆ ಸಂಬಂಧಿಸಿದೆ ಎಂದು ಹೇಳಿದೆ.

ಆವಾಹನ್‌ ಅಖಾಡಕ್ಕೆ ಸೇರಿದ ಆಚಾರ್ಯ ಅರುಣ್‌ ಗಿರಿ ಅವರು ಇಲ್ಲಿಯ ಪ್ರಯಾಗರಾಜ್‌ ಮೇಳಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅದು ಹೇಳಿದೆ. ಅಪಘಾತದಲ್ಲಿ ಗಿರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆವಾಹನ ಅಖಾಡದ ಪ್ರಕಾಶಾನಂದ ತಿಳಿಸಿದ್ದಾರೆ.

ಗಿರಿ ಅವರು ಪಂಜಾಬ್‌ನ ದೊಡ್ಡ ಹಿಂದೂ ಸಂಘಟನೆಯ ರಾಷ್ಟ್ರೀಯ ಪೋಷಕರಾಗಿರುವುದರಿಂದ ಇದು ಆಕಸಿಕವಾಗಿ ಕಂಡುಬಂದಿಲ್ಲ ಎಂದು ಪ್ರಕಾಶಾನಂದ ಹೇಳಿದರು. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು, ಗಿರಿಗೆ ವೈ ಕೆಟಗರಿ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೆಲ ದಿನಗಳ ಹಿಂದೆ ಖಲಿಸ್ತಾನಿ ಉಗ್ರ ಪನ್ನುನ್‌ ಮಹಾ ಕುಂಭಕ್ಕೆ ಅಡ್ಡಿ ಪಡಿಸುವುದಾಗಿ ಬೆದರಿಕೆಯೊಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಹೀಗಾಗಿ ಯುಪಿ ಸರ್ಕಾರ ಮಹಾಕುಂಭಕ್ಕೆ ಬಿಗಿ ಪೊಲೀಸ್‌‍ ಬಂದೋಬಸ್ತ್‌ ವ್ಯವಸ್ಥೆ ಮಾಡಿದೆ. ಹಾಗಿದ್ದರೂ ಕಿಡಿಗೇಡಿಗಳು ಹಿಂದೂ ಸಂತರ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

RELATED ARTICLES

Latest News