ಮುಂಬೈ, ಜ 19 (ಪಿಟಿಐ) ಮಹಾರಾಷ್ಟ್ರ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಬೃಹತ್ ಐಟಿ, ಐಟಿಇಎಸ್ ಡೇಟಾ ಸೆಂಟರ್‍ನಲ್ಲಿ ಹೂಡಿಕೆ ಮಾಡಲು ವೆಬ್ ವಕ್ರ್ಸ್‍ನೊಂದಿಗೆ ರೂ 10,000 ಕೋಟಿ ಮೌಲ್ಯದ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದೆ.
ದಾವೋಸ್‍ನಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಎಂಒಯುಗೆ ಸಹಿ ಹಾಕಲಾಗಿದೆ ಎಂದು ಶಿಂಧೆ ಕಚೇರಿ ಎಕ್ಸ್ ಮಾಡಿದೆ. ಹೂಡಿಕೆ ಪ್ರಸ್ತಾವನೆಯು 1,500 ಜನರಿಗೆ ನೇರ ಉದ್ಯೋಗವನ್ನು ಸೃಷ್ಟಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ಅದು ಹೇಳಿದೆ.
857 ಕೋಟಿ ರೂ. ವೆಚ್ಚದಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆ
ಇದಕ್ಕೂ ಮುನ್ನ, ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ರಾಜ್ಯವು 3,53,675 ಕೋಟಿ ರೂಪಾಯಿ ಮೌಲ್ಯದ ಎಂಒಯುಗಳಿಗೆ ಸಹಿ ಹಾಕಲಾಗಿದೆ ಎಂದು ಸಿಎಂ ಶಿಂಧೆ ಹೇಳಿದ್ದಾರೆ.