Friday, October 11, 2024
Homeರಾಷ್ಟ್ರೀಯ | Nationalಅಗ್ನಿ ಅವಘಡದಲ್ಲಿ 6 ಮಂದಿ ಸಜೀವ ದಹನ

ಅಗ್ನಿ ಅವಘಡದಲ್ಲಿ 6 ಮಂದಿ ಸಜೀವ ದಹನ

ಮುಂಬೈ,ಡಿ.31- ಮಹಾರಾಷ್ಟ್ರದ ಗ್ಲೌಸ್ ಫ್ಯಾಕ್ಟರಿಯಲ್ಲಿ ತಡರಾತ್ರಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ಮುಂಜಾನೆ 2.15ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಾಗ ಕಾರ್ಖಾನೆ ಮುಚ್ಚಿದ್ದು, ಆವರಣದೊಳಗೆ ಮಲಗಿದ್ದ ಆರು ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ ಎಂದು ವರದಿಯಾಗಿದೆ.

ನಮಗೆ 2. 15 ಗಂಟೆಗೆ ಕರೆ ಬಂದಿತು. ನಾವು ಸ್ಥಳಕ್ಕೆ ತಲುಪಿದಾಗ, ಇಡೀ ಕಾರ್ಖಾನೆ ಬೆಂಕಿಯಲ್ಲಿತ್ತು. ನಮ್ಮ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಆರು ಜನರ ಶವಗಳು ಪತ್ತೆಯಾಗಿವೆ ಎಂದು ಅಗ್ನಿಶಾಮಕ ಅಧಿಕಾರಿ ಮೋಹನ್ ಮುಂಗ್ಸೆ ತಿಳಿಸಿದ್ದಾರೆ.

ಇಬ್ಬರ ಸಾವಿಗೆ ಕಾರಣನಾಗಿದ್ದ ವಾಟರ್ ಟ್ಯಾಂಕ್ ಚಾಲಕನಿಗೆ 1 ವರ್ಷ ಜೈಲು

ಕಾರ್ಖಾನೆಯಲ್ಲಿ ಗ್ಲೌಸ್ ತಯಾರಿಕೆಗೆ ಬಳಸುವ ಬಟ್ಟೆಗೆ ಬೆಂಕಿ ತಗುಲಿ ಈ ದುರಂತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಕಿ ಕೆನ್ನಾಲಿಗೆಗೆ ಇಡಿ ಕಟ್ಟಡ ಸುಟ್ಟು ಹೋಗಿದ್ದು, ಇನ್ನು ಕೆಲವರು ಸಾವಿಗಿಡಾಗಿರಬಹುದು ಎಂದು ಶಂಕಿಸಲಾಗಿದೆ.

RELATED ARTICLES

Latest News