Saturday, May 4, 2024
Homeಜಿಲ್ಲಾ ಸುದ್ದಿಗಳುಮಹೇಶ್ವರಿ ಮೂಲ ದೇವರ ಪ್ರಾಣ ಪ್ರತಿಷ್ಠಾಪನೆ

ಮಹೇಶ್ವರಿ ಮೂಲ ದೇವರ ಪ್ರಾಣ ಪ್ರತಿಷ್ಠಾಪನೆ

ಮಾಲೂರು, ಅನಾದಿಕಾಲದಿಂದಲೂ ಆಚರಣೆಯಲ್ಲಿ ಬಂದಿರುವ ಅದ್ಭುತವಾದ ಪವಾಡಗಳ ಕೇಂದ್ರ ಹಾಗೂ ಶಕ್ತಿಪೀಠ ರಾಜೇನಹಳ್ಳಿ ಮಾತೆ ಶ್ರೀ ಮಹೇಶ್ವರಿ ದೇವಾಲಯದ ಮೂಲದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಕಳಶ ಆರಾಧನೆಗಳನ್ನು ಮಾಡಲಾಯಿತು. ವಿಶೇಷ ಮತ್ತು ವಿನುತನ ಆಚರಣೆ ಸಮ ಸಮಾಜದ ಸರ್ವ ಸಮಾನತೆಯನ್ನು ಸಾರುವ ಈ ದೇಗುಲದಲ್ಲಿ ಸುಮಾರು 300 ವರ್ಷಗಳ ಹಿಂದಿನಿಂದಲೂ ಕೂಡ ಹರಿಜನ ಪೂಜಾರಿಗಳು ಈ ಕಾರ್ಯವನ್ನು ಮುಂದುವರಿಸುತ್ತಿದ್ದು ಎಲ್ಲ ಜನಾಂಗದವರು ವಿಶೇಷವಾಗಿ ನೆರೆಹರಿಯ ಎಲ್ಲಾ 20 ಗ್ರಾಮಗಳವರು ಕೂಡ ಈ ದೇವಿಯನ್ನು ಆರಾಧಿಸುತ್ತಾ ಬಂದಿರುತ್ತಾರೆ.

ಪ್ರತಿಷ್ಠಾಪನಾ ಸಂದರ್ಭದಲ್ಲಿ ಮಾತೆ ಮಹೇಶ್ವರಿ ದೇವಿಯ ದಿವ್ಯ ಅಲಂಕಾರ, ರಾಜೇನಹಳ್ಳಿ 


ವೃಷ್ಟಿ ಸಿಂಚನದ ಪವಾಡ ದೇಗುಲದ ಮುಖ್ಯ ಆರಾಧನೆಗಳಲ್ಲಿ ಹಾಗೂ ಕಾರ್ಯಕ್ರಮಗಳ ನಂತರ ಮಳೆ ಬರುವುದು ಹಾಡಿಕೆ. ಇದರಂತೆ ದೇವಿಯನ್ನು ಮೊದಲ ದಿನ ಗ್ರಾಮ ಪ್ರದಕ್ಷಿಣೆಗೆ ಬಂದಾಗ ಮಳೆಯ ಸಿಂಚನವಾಗಿ ಕೇವಲ ಒಂದು ನಿಮಿಷದಲ್ಲಿ ಮಳೆಯೂ ಕೂಡ ನಿಂತಿತು ಇದು ಈ ದೇವಿಯ ಪವಾಡವಾಗಿರುತ್ತದೆ.

ಇತಿಹಾಸ ಪ್ರಸಿದ್ಧ ಕರಗ ಮಹೋತ್ಸವ ಈ ಗ್ರಾಮದಲ್ಲಿ ಸರಿಸುಮಾರು 130 ವರ್ಷಗಳ ಹಿಂದಿನಲ್ಲೂ ಕೂಡ ಪ್ರಸಿದ್ಧ ಕರಗ ಮಹೋತ್ಸವವನ್ನು ಆಚರಣೆ ಮಾಡುತ್ತಿದ್ದು. ವಹ್ನಿಕುಲದ ಪೂಜಾರಿಗಳು ಕರಗ ಹೊರುವ ಆಯ್ಕೆ ಮಾಡುತ್ತಿದ್ದು. ಈ ಆಯ್ಕೆಯನ್ನು ದೇವಿಯ ಆಜ್ಞಾರಾದನೆಯ ಮೇಲೆಯೇ ನಡೆಯುತ್ತದೆ, ಪ್ರಥಮ ಪೂಜೆಯನ್ನು ಇಲ್ಲಿ ಸಲ್ಲಿಸಿದ ನಂತರವೇ ಕರಗ ಮಹೋತ್ಸವಕ್ಕೆ ಚಾಲನೆ ಸಿಗುತ್ತದೆ. ಭಕ್ತರು ನೆರೆಯ ಆಂಧ್ರ ಪ್ರದೇಶ ದೂರದ ತಮಿಳುನಾಡು ಕೋಲಾರ ಹೊಸಕೋಟೆ ,ಗುಡ್ಡಣಪುರ, ವೆಂಕಟಪುರ ಸೇರಿದಂತೆ ರಾಜ್ಯದಲ್ಲಿ ಹಾಗೂ ಈ ದೇವಿಯ ಭಕ್ತರು ದುಬೈನವಾಸಿಗಳು ಆಗಿದ್ದು ಅಲ್ಲಿಂದಲೂ ಕೂಡ ಬಂದು ದೇವಿಗೆ ತಮ್ಮ ಭಕ್ತಿ ಸಮರ್ಪಣೆಯನ್ನು ಮಾಡಿದರು.

ಸುತ್ತ ಮುತ್ತ ಹಳ್ಳಿಗಳಲ್ಲಿ ಪ್ರಮುಖವಾದ ಕಾರ್ಯಗಳಿಗೆ ದೇವಿಯನ್ನು ಪೂಜಿಸಿಯೇ ತೀರ್ಮಾನವನ್ನು ಕೈಗೊಳ್ಳುವುದು ಸಂಪ್ರದಾಯವಾಗಿದೆ. ಈ ಕಾರ್ಯದಲ್ಲಿ ತಾಲೂಕಿನ ಶಾಸಕರಾದ ನಂಜೇಗೌಡರು, ಮುಖಂಡರುಗಳಾದ ರಾಮೇಗೌಡ, ಹೂಡಿ ವಿಜಯಕುಮಾರ್, ಆರ್ ವಿ ಭೂತಪ್ಪ, ಮಹೇಂದ್ರ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮಹೇಂದ್ರ ಗೌಡ, ಸೇರಿದಂತೆ ಸಾವಿರಾರು ಭಕ್ತರು ಆಗಮಿಸಿದ್ದರು.

ಸಂಜೆ ಜನಪದ ಶೈಲಿಯಲ್ಲಿ ದೇವಿಗೆ ಸಂಗೀತೋತ್ಸವ ಮತ್ತು ನೃತ್ಯರೂಪಕಗಳು ಕೋಲಾಟ ಪ್ರದರ್ಶನ ಸಂಜೆ 6 ರಿಂದ 10 ಗಂಟೆಯವರೆಗೆ ದೇವಿಯ ಭಜನಾ ಕಾರ್ಯಕ್ರಮಗಳನ್ನು ಸಂಗೀತೋತ್ಸವವನ್ನು ಮಹೇಶ್ ಕುಮಾರ್ ಮತ್ತು ಬಳಗದ ಭಜನಾ ತಂಡದವರು ನೆರವೇರಿಸಿ ಕೊಟ್ಟರು. ಇಚ್ಚಂಗೂರಿನ ವನಿತೆಯರ ಕೋಲಾಟವು ನೆರೆದಿದ್ದ ಸಾವಿರಾರು ಭಕ್ತರನ್ನು ಆಕರ್ಷಿಸಿ ಅದ್ಭುತವಾದಂತ ಪ್ರದರ್ಶನವನ್ನು ವೀಕ್ಷಿಸಲಾಯಿತು.

ಬೆಳಗಿನ ಮೂರು ಗಂಟೆಯಿಂದಲೂ ನಡೆದಂತಹ ದೇವಿಯ ಕಾರ್ಯಕ್ರಮಗಳಲ್ಲಿ ಕಳಶ ಒತ್ತು ಸಾಗಿದಂತಹ ಪುರುಷ ಮತ್ತು ಮಹಿಳೆಯರು ನಿಯಮ ನಿತ್ಯ ಪೂರ್ಣ ಸ್ವಚ್ಛ ಸಂಭ್ರಮದಿಂದ ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಗ್ರಾಮವನ್ನು ಸುಚಿರ್ಭೂತಗೊಳಿಸಿದರು. ಗ್ರಾಮದ ಎಲ್ಲ ಜಾತಿ ಜನಾಂಗದ ಮುಖಂಡರುಗಳು ಕರಗದ ಪೂಜಾರಿಗಳು ದೇವಾಲಯದ ಮುಖ್ಯ ಅರ್ಚಕರು ಹಾಗೂ ಗ್ರಾಮದ ಆಗಮಿಕರು ಕೂಡ ಈ ಸಂದರ್ಭದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

RELATED ARTICLES

Latest News