Thursday, June 20, 2024
Homeರಾಜ್ಯವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಪ್ರಮುಖ ಆರೋಪಿ ಪ್ರಭಾವಿ ರಾಜಕಾರಣಿ ಜೊತೆ ಲಿಂಕ್

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಪ್ರಮುಖ ಆರೋಪಿ ಪ್ರಭಾವಿ ರಾಜಕಾರಣಿ ಜೊತೆ ಲಿಂಕ್

ಬೆಂಗಳೂರು, ಜೂ.6- ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ನೆಕ್ಕುಂಟೆ ನಾಗರಾಜ್‌ ಅವರು ಸಚಿವ ನಾಗೇಂದ್ರ ಅವರಿಗೆ ಆಪ್ತರಲ್ಲದೆ ರಾಜ್ಯದ ಪ್ರಭಾವಿ ರಾಜಕಾರಣಿ ಒಬ್ಬರಿಗೂ ಪರಮಾಪ್ತ ಎನ್ನಲಾಗಿದೆ.

ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಎಸ್‌‍ಐಟಿ ಈಗಾಗಲೇ ನಿಗಮದ ಹಿಂದಿನ ಎಂ.ಡಿ. ಪದನಾಭ, ಮುಖ್ಯ ಲೆಕ್ಕಾಧಿಕಾರಿ ಪರಶುರಾಮು, ನೆಕ್ಕುಂಟೆ ನಾಗರಾಜ್‌, ನಾಗೇಶ್ವರ ರಾವ್‌, ಸತ್ಯನಾರಾಯಣ್‌ರನ್ನ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದೆ.

ಕೊಪ್ಪಳ ಜಿಲ್ಲೆ ಕರಟಗಿ ತಾಲೂಕಿನ ಉಳಕ್ಯಾಳ ಕ್ಯಾಂಪಸ್‌‍ನ ನಿವಾಸಿ ನೆಕ್ಕುಂಟೆ ನಾಗರಾಜ್‌ ಪ್ರಕರಣದ ಪ್ರಮುಖ ಆರೋಪಿ ಇವರು ಸಚಿವ ನಾಗೇಂದ್ರ ಅವರ ಪರಮಾಪ್ತ. ಅಷ್ಟೇ ಅಲ್ಲದೆ, ರಾಜ್ಯದ ಪ್ರಭಾವಿ ಸಚಿವರೊಬ್ಬರಿಗೂ ಕೂಡ ಆಪ್ತ ಎಂದು ತಿಳಿದುಬಂದಿದೆ.

ರಾಜಕಾರಣಿಗಳ ಜೊತೆ ವ್ಯವಹಾರ ಮಾಡುತ್ತಿದ್ದ ಆರೋಪಿ ನಾಗರಾಜ್‌ ಅಧಿಕಾರದಲ್ಲಿರುವ ಪಕ್ಷದ ನಾಯಕರ ಜೊತೆ ಸದಾ ಇರುತ್ತಿದ್ದ. ಶ್ರೀರಾಮಲು ಸ್ಥಾಪಿಸಿದ್ದ ಬಿಎಸ್‌‍ಆರ್‌ ಪಕ್ಷದಿಂದ 2013 ರಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೀರಾಮಲು ಜೊತೆ ಹೆಚ್ಚಾಗಿ ಇರುತ್ತಿದ್ದ ನಾಗರಾಜ್‌ ನಂತರ ನಾಗೇಂದ್ರ ಜೊತೆ ಗುರುತಿಸಿಕೊಂಡಿದ್ದ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದಿದ್ದ ನಾಗರಾಜ್‌ ನಂತರ ಕೊಪ್ಪಳದಲ್ಲಿ ಕಾಂಗ್ರೆಸ್‌‍ ಸೇರಲು ಮುಂದಾಗಿದ್ದ. ಆದರೆ ನಾಗರಾಜ್‌ ಕಾಂಗ್ರೆಸ್‌‍ ಸೇರ್ಪಡೆಗೆ ಶಿವರಾಜ್‌ ತಂಗಡಗಿ ಒಲವು ತೋರಿರಲಿಲ್ಲ. ಹೀಗಾಗಿ ನಾಗೇಂದ್ರ ಅವರ ಜೊತೆ ಗುರುತಿಸಿಕೊಂಡಿದ್ದ
ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಹಗರಣ ಸಂಬಂಧ ಹೈದ್ರಾಬಾದ್‌ನ ಫಸ್ಟ್‌ ಫೈನಾನ್‌್ಸ ಸಹಕಾರಿ ಬ್ಯಾಂಕ್‌ನಲ್ಲಿದ್ದ 45 ಕೋಟಿ ರೂ. ಹಣವನ್ನು ಜಪ್ತಿ ಮಾಡಿದೆ.

RELATED ARTICLES

Latest News