Friday, October 11, 2024
Homeರಾಜ್ಯಕಾರಾಗೃಹ ಇಲಾಖೆಗೆ ಮೇಜರ್‌ ಸರ್ಜರಿ

ಕಾರಾಗೃಹ ಇಲಾಖೆಗೆ ಮೇಜರ್‌ ಸರ್ಜರಿ

Jail Department

ಬೆಂಗಳೂರು, ಸೆ.14- ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಕಾರಾಗೃಹದ 43 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಸರ್ಕಾರ ಕಾರಾಗೃಹ ಇಲಾಖೆಗೆ ಸರ್ಜರಿ ಮಾಡಿದ್ದು, ಜೈಲರ್‌ಗಳು, ಮುಖ್ಯ ವೀಕ್ಷಕರು, ವೀಕ್ಷಕರು, ವಾರ್ಡರ್‌ ಸೇರಿದಂತೆ 43 ಮಂದಿ ಸಿಬ್ಬಂದಿಯವರನ್ನು ರಾಜ್ಯದ ವಿವಿಧ ಕಾರಾಗೃಹಗಳಿಗೆ ವರ್ಗಾವಣೆ ಮಾಡಿದೆ.

ದರ್ಶನ್‌ಗೆ ರಾಜಾತಿಥ್ಯ ನೀಡಲಾಗಿದೆ ಎಂಬ ಫೋಟೊಗಳು ಬಹಿರಂಗವಾಗುತ್ತಿದ್ದಂತೆ ಸರ್ಕಾರ ಭಾರಿ ಮುಜುಗರಕ್ಕೆ ಈಡಾಗಿತ್ತು. ಈ ನಡುವೆ ಕಾರಾಗೃಹದ 9 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಲೆದಂಡವು ಆಗಿದೆ.

ಬಳಿಕ ನಟ ದರ್ಶನ್‌ನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕ್ಕೆ ಹಾಗೂ ಇತರರನ್ನು ಬೇರೆಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದ್ದು, ದರ್ಶನ್‌ ಜಾಮೀನಿಗಾಗಿ ಸದ್ಯದಲ್ಲೇ ಅರ್ಜಿ ಸಲ್ಲಿಸಲಿದ್ದಾರೆ.

RELATED ARTICLES

Latest News