Sunday, April 28, 2024
Homeರಾಜ್ಯಅನಗತ್ಯವಾಗಿ ಡಿಸಿಎಂ ಹುದ್ದೆಯ ಚರ್ಚೆಗೆ ಖರ್ಗೆ ಆಕ್ರೋಶ

ಅನಗತ್ಯವಾಗಿ ಡಿಸಿಎಂ ಹುದ್ದೆಯ ಚರ್ಚೆಗೆ ಖರ್ಗೆ ಆಕ್ರೋಶ

ಕಲ್ಬುರ್ಗಿ,ಜ.9- ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪದೇಪದೇ ಹೆಚ್ಚುವರಿ ಉಪಮುಖ್ಯಮಂತ್ರಿ ಸೃಷ್ಟಿ ಕುರಿತು ಚರ್ಚೆ ಮಾಡುವುದು ಸರಿಯಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟ್ಟೆಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಉಪಮುಖ್ಯಮಂತ್ರಿ ಸೃಷ್ಟಿಯ ಬಗ್ಗೆ ಈವರೆಗೂ ತಮ್ಮವರೆಗೂ ಯಾವುದೇ ವಿಚಾರಗಳು ಬಂದಿಲ್ಲ. ಇಂತಹ ಯಾವುದೇ ಪ್ರಶ್ನೆಗಳಿಗೆ ಉತ್ತರ ಬೇಕಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರನ್ನು ಕೇಳಿ ಎಂದು ಸಲಹೆ ನೀಡಿದರು.

ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಊಹಾಪೂಹಗಳ ಚರ್ಚೆಗೆ ಅವಕಾಶ ನೀಡಬಾರದು. ತಮ್ಮ ಆದ್ಯತೆ ಉತ್ತಮ ಸರ್ಕಾರ ನೀಡುವತ್ತ ಇರಬೇಕು. ಜನರಿಗೆ ಕೊಟ್ಟ ಭರವಸೆಗಳು ಮತ್ತು ಪಂಚಖಾತ್ರಿಗಳನ್ನು ಸಮರ್ಪಕವಾಗಿ ಅನುಷ್ಠಾನ ತರುವುದು ನಮ್ಮ ಗುರಿಯಾಗಿರಬೇಕು. ಜನರ ಸಮಸ್ಯೆಗೆ ಗಮನ ನೀಡಬೇಕು. ಗುರಿ ಮುಟ್ಟುವುದಕ್ಕೆ ಆದ್ಯತೆ ನೀಡಬೇಕು. ಈ ವಿಷಯವಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್‍ರವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಮೋದಿ ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ :
ಮಾಲ್ಡೀವ್ಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಖರ್ಗೆ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲವನ್ನೂ ವೈಯಕ್ತಿವಾಗಿ ತೆಗೆದುಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವು ವಿಷಯಗಳಲ್ಲಿ ನೆರೆಹೊರೆಯವರೊಂದಿಗೆ ಸೌಹಾರ್ದಯುತವಾದ ಸಂಬಂಧ ಇಟ್ಟುಕೊಳ್ಳಬೇಕಾಗುತ್ತದೆ. ಒಂದು ವೇಳೆ ಕೆಟ್ಟ ಸಂದರ್ಭ ಬಂದರೆ ನಾವು ಹೋರಾಟ ನಡೆಸಬೇಕು. ಈ ಹಿಂದೆ ಇಂದಿರಾಗಾಂಧಿಯವರು ಪಾಕಿಸ್ತಾನದ ವಿರುದ್ಧ ಹೋರಾಟ ಮಾಡಿ ಕಾಂಗ್ರೆಸ್ ಪಕ್ಷವನ್ನು ಪ್ರತ್ಯೇಕಗೊಳಿಸಿದರು. ಆ ರೀತಿ ಸಂದರ್ಭಾನುಸಾರ ನಡೆದುಕೊಳ್ಳಬೇಕಿದೆ ಎಂದರು.

ಲೋಕಸಭೆ ಚುನಾವಣೆ : 10 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್

ಪ್ರಧಾನ ನರೇಂದ್ರ ಮೋದಿ ಇದ್ದಕ್ಕಿದ್ದಂತೆ ಯಾರನ್ನೋ ಅಪ್ಪಿಕೊಳ್ಳುತ್ತಾರೆ, ಇದ್ದಕ್ಕಿದ್ದಂತೆ ಇನ್ನ್ಯಾರನ್ನೋ ಕೆಟ್ಟವರು ಎಂದು ಬಿಂಬಿಸುತ್ತಾರೆ. ಹಿಂದಿನ ನೀತಿಗಳನ್ನು ಟೀಕೆ ಮಾಡುವುದು, ಜೀವನಪರ್ಯಂತ ನೆಹರೂ ಅವರನ್ನೇ ನಿಂದಿಸುತ್ತಾರೆ ಎಂದು ಹೇಳಿದರು.

ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ದತೆ ಅಗತ್ಯ :
ನೆರೆಹೊರೆಯ ಸಂಬಂಧ ಉತ್ತಮವಾಗಿರಬೇಕು. ಸಣ್ಣಪುಟ್ಟ ಊರಿನಲ್ಲಾದರೆ ನೆರೆಹೊರೆಯ ಸಂಬಂಧ ಕೆಟ್ಟರೆ ಮನೆ ಖಾಲಿ ಮಾಡಬಹುದು, ಆದರೆ ದೇಶಗಳ ವಿಷಯದಲ್ಲಿ ಈ ರೀತಿ ಸಾಧ್ಯವಿಲ್ಲ. ಗಡಿಯಲ್ಲಿ ನೆರೆಯ ರಾಷ್ಟ್ರಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಉತ್ತಮ ಸಂಬಂಧ ಇಟ್ಟುಕೊಳ್ಳುವುದು ಅನಿವಾರ್ಯ ಎಂದರು. ಅದರ ಮೇಲೆ ನಮ್ಮ ರಾಷ್ಟ್ರಕ್ಕೆ ತೊಂದರೆಯಾದರೆ ಅಥವಾ ಮೈಮೇಲೆ ಬಂದರೆ ನಮ್ಮ ದೇಶದ ಐಕ್ಯತೆ ಹಾಗೂ ಸುರಕ್ಷತೆಗಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಲೋಕಸಭೆ ಚುನಾವಣೆ : 10 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್

ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡಲು ಇಂಡಿಯಾ ಮೈತ್ರಿಕೂಟ ನಿರ್ಣಯ ಕೈಗೊಂಡಿದೆ. ಅದರ ಬಗ್ಗೆ ಚರ್ಚೆಯನ್ನು ನಡೆಸಿದ್ದೇವೆ. ಸಂಯೋಜಕರನ್ನು ನೇಮಿಸಲಾಗಿದೆ. ಇಂದು ತಾವು ದೆಹಲಿಗೆ ತೆರಳುತ್ತಿದ್ದು, ನಾಳೆ ವಿವಿಧ ರಾಜ್ಯಗಳ ಕಾಂಗ್ರೆಸ್ ಘಟಕಗಳ ಜೊತೆ ಚರ್ಚೆ ನಡೆಸಲಾಗುವುದು. ಈಗಾಗಲೇ ಲೋಕಸಭಾ ಕ್ಷೇತ್ರವಾರು, ಜಿಲ್ಲಾವಾರು ವೀಕ್ಷಕರನ್ನು ಕಾಂಗ್ರೆಸ್‍ನಿಂದ ನೇಮಿಸಲಾಗಿದೆ. ರಾಜ್ಯದಲ್ಲೂ ನಾಳೆ ಚುನಾವಣಾ ತಯಾರಿ ಸಂಬಂಧಪಟ್ಟಂತೆ ಸಭೆ ನಡೆಯಲಿದೆ ಎಂದರು.

RELATED ARTICLES

Latest News