Thursday, May 2, 2024
Homeರಾಷ್ಟ್ರೀಯರಾಮಮಂದಿರ ಉದ್ಘಾಟನೆ ದಿನವೇ ಸಂಪ್ರೀತಿ ರ‍್ಯಾಲಿ : ಕೋಲ್ಕತ್ತಾದಲ್ಲಿ ಪೊಲೀಸ್ ಬಂದೋಬಸ್ತ್

ರಾಮಮಂದಿರ ಉದ್ಘಾಟನೆ ದಿನವೇ ಸಂಪ್ರೀತಿ ರ‍್ಯಾಲಿ : ಕೋಲ್ಕತ್ತಾದಲ್ಲಿ ಪೊಲೀಸ್ ಬಂದೋಬಸ್ತ್

ಕೋಲ್ಕತ್ತಾ, ಜ 22 (ಪಿಟಿಐ) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಸಂಪ್ರೀತಿ ರ‍್ಯಾಲಿ ಮತ್ತು 35 ಸಣ್ಣ ಮೆರವಣಿಗೆಗಳ ಸಂದರ್ಭದಲ್ಲಿ ಕೋಲ್ಕತ್ತಾ ಮತ್ತು ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ನೋಡಿಕೊಳ್ಳುವ ಉದ್ದೇಶದಿಂದ 4,000 ಪೊಲೀಸರ ನಿಯೋಜನೆ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಂದರ್ಭದಲ್ಲಿ ದೀದಿ ಸಂಪ್ರೀತಿ ರ್ಯಾಲಿ ಹಮ್ಮಿಕೊಂಡಿರುವುದರಿಂದ ಅಭೂತಪೂರ್ವ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರಿಗೆ ತೊಂದರೆಯಾಗದಂತೆ ಟ್ರಾಫಿಕ್ ಡೈವರ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭವಾನಿಪೋರ್, ಕ್ಯಾಮಾಕ್ ಸ್ಟ್ರೀಟ್, ಸೀಲ್ದಾ, ಗಫಾರ್, ಪಟುಲಿ, ಸಕುಂತಲಾ ಪಾರ್ಕ್ ಮತ್ತು ಬಂದರು ಪ್ರದೇಶಗಳ ಮೂಲಕ ರ್ಯಾಲಿ ಹಾದು ಹೋಗುತ್ತವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕೋಲ್ಕತ್ತಾ ಪೊಲೀಸ್ ವ್ಯಾಪ್ತಿಗೆ ಒಳಪಡುವ ಪ್ರತಿ ವಿಭಾಗದಲ್ಲಿ ಹೆಚ್ಚುವರಿ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಎಲ್ಲಾ ಪೊಲೀಸ್ ಠಾಣೆಗಳಿಗೆ ದಿನವಿಡೀ ಜಾಗರೂಕರಾಗಿರಲು ಸೂಚನೆ ನೀಡಲಾಗಿದೆ. ಪೂಜೆಗಳು ಮತ್ತು ರ್ಯಾಲಿಗಳನ್ನು ನಿಗದಿಪಡಿಸುವ ಪೊಲೀಸ್ ಠಾಣೆಗಳಿಗೆ ಹೆಚ್ಚಿನ ಜಾಗರೂಕರಾಗಿರಲು ತಿಳಿಸಲಾಗಿದೆ ಎಂದು ಅಕಾರಿ ಪಿಟಿಐಗೆ ತಿಳಿಸಿದ್ದಾರೆ.

ಕೋಮುಸೌಹಾರ್ಧತೆಗೆ ಸಾಕ್ಷಿಯಾಗಲಿದೆ ರಾಮಮಂದಿರ : ಅದಾನಿ

ಎಲ್ಲಾ ರ್ಯಾಲಿಗಳನ್ನು ವೀಡಿಯೊಗ್ರಾಫ್ ಮಾಡಲಾಗುವುದು ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ಪೊಲೀಸರು ಸನ್ನದ್ಧರಾಗಿದ್ದಾರೆ. ದಕ್ಷಿಣ ಕೋಲ್ಕತ್ತಾದ ಹಜ್ರಾ ಕ್ರಾಸಿಂಗ್‍ನಿಂದ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪ್ರಾರಂಭವಾಗುವ ಟಿಎಂಸಿಯ ಸಂಪ್ರೀತಿ ರ್ಯಾಲಿಗೆ ಹಜ್ರಾ ರಸ್ತೆ ಮತ್ತು ಸೈಯದ್ ಅಮೀರ್ ಅಲಿ ಅವೆನ್ಯೂ ಮೂಲಕ ಪಾರ್ಕ್ ಸರ್ಕಸ್ ಮೈದಾನ ತಲುಪಲಿರುವುದರಿಂದ ಭಾರಿ ಬಂದೋಬಸ್ತ್ ಮಾಡಲಾಗಿದೆ.

ನಗರದ ರ್ಯಾಲಿ ಮಾರ್ಗಗಳ ಉದ್ದಕ್ಕೂ ಇರುವ ಹೆಚ್ಚಿನ ಖಾಸಗಿ ಶಾಲೆಗಳು ತರಗತಿಗಳನ್ನು ಸ್ಥಗಿತಗೊಳಿಸಿವೆ ಅಥವಾ ವಿದ್ಯಾರ್ಥಿಗಳಿಗೆ ಅಥವಾ ಶಿಕ್ಷಕರಿಗೆ ಯಾವುದೇ ತೊಂದರೆಯಾಗದಂತೆ ಖಚಿತಪಡಿಸಿಕೊಳ್ಳಲು ವರ್ಚುವಲ್ ತರಗತಿಗಳಿಗೆ ವ್ಯವಸ್ಥೆ ಮಾಡಿವೆ. ಸಂಪ್ರೀತಿ ರ್ಯಾಲಿ ಮಾರ್ಗದ ಇತರ ಶಾಲೆಗಳು ದಿನದ ಮಟ್ಟಿಗೆ ಮುಚ್ಚುವುದಾಗಿ ಘೋಷಿಸಿವೆ ಎಂದು ಶಾಲಾ ಮೂಲಗಳು ಖಚಿತಪಡಿಸಿವೆ.

RELATED ARTICLES

Latest News