Friday, February 23, 2024
Homeರಾಜ್ಯವಿಚಾರಣೆಗೆ ಕರೆ ತಂದಿದ್ದ ವ್ಯಕ್ತಿ ಆತ್ಮಹತ್ಯೆ: ಪೊಲೀಸ್ ಸಿಬ್ಬಂದಿಗಳ ಅಮಾನತ್ತು

ವಿಚಾರಣೆಗೆ ಕರೆ ತಂದಿದ್ದ ವ್ಯಕ್ತಿ ಆತ್ಮಹತ್ಯೆ: ಪೊಲೀಸ್ ಸಿಬ್ಬಂದಿಗಳ ಅಮಾನತ್ತು

ಮೈಸೂರು, ನ. 22- ಪೊಲೀಸರು ವಿಚಾರಣೆಗೆ ಕರೆತಂದ ಯುವಕ ಠಾಣೆಯಿಂದ ತಪ್ಪಿಸಿಕೊಂಡು ಹೋಗಿ ಬೆಂಕಿಹಚ್ಚಿಕೊಂಡು ಸಾವಿಗೆ ಶರಣಾದ ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನ ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ನಂಜನಗೂಡು ತಾಲೂಕು ಬಿಳಿಗೆರೆ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ನಂಜೇಶ್ ಹಾಗೂ ಕಾನ್‍ಸ್ಟೇಬಲ್ ಪ್ರಸನ್ನ ಕುಮಾರ್ ಅಮಾನತಾದ ಸಿಬ್ಬಂದಿಗಳು.

ಗಲಾಟೆ ವಿಚಾರದಲ್ಲಿ ನ. 12 ರಂದು ಬಿಳಿಗೆರೆ ಠಾಣೆಯ ಪಿಎಸ್‍ಐ ರವರು ಇಬ್ಬರು ಆರೋಪಿಗಳನ್ನ ಠಾಣೆಗೆ ಕರೆತಂದಿದ್ದಾರೆ. ಮತ್ತೊಬ್ಬ ಆರೋಪಿಯನ್ನ ವಶಕ್ಕೆ ಪಡೆಯಲು ಪಿಎಸ್‍ಐ ಅವರು ತೆರಳುವ ವೇಳೆ ಇಬ್ಬರು ಆರೋಪಿಗಳ ಜವಾಬ್ದಾರಿ ಕರ್ತವ್ಯದಲ್ಲಿದ್ದ ನಂಜೇಶ್ ಹಾಗೂ ಪ್ರಸನ್ನ ಕುಮಾರ್ ರವರದ್ದಾಗಿರುತ್ತದೆ.

41 ಕಾರ್ಮಿಕರನ್ನು ರಕ್ಷಿಸುವ ಅರ್ಧ ದಾರಿ ಸವೇಸಿರುವ ರಕ್ಷಣಾ ಸಿಬ್ಬಂದಿ

ಇಬ್ಬರು ಆರೋಪಿಗಳ ಪೈಕಿ ನಗರ್ಲೆ ಗ್ರಾಮದ ಕಿರಣ್ ಕುಮಾರ್(22) ಠಾಣೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಅಲ್ಲದೆ ಪೊಲೀಸರ ವಿಚಾರಣೆಗೆ ಹೆದರಿ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಕುಮಾರ್ ನವೆಂಬರ್ 13 ರಂದು ಸಾವನ್ನಪ್ಪಿದ್ದಾನೆ. ಕರ್ತವ್ಯಲೋಪ ಹಿನ್ನಲೆ ಇಬ್ಬರು ಸಿಬ್ಬಂದಿಗಳನ್ನ ಇಲಾಖಾ ವಿಚಾರಣೆಗೆ ಆದೇಶಿಸಿ ಅಮಾನತ್ತಿನಲ್ಲಿಡಲಾಗಿದೆ.

RELATED ARTICLES

Latest News