ಪ್ಯಾರಿಸ್, ನ.27- ಜನ್ಮ ನೀಡಿದಾತನೆ ತನ್ನ ಮೂವರು ಹೆಣ್ಣು ಮಕ್ಕಳನ್ನು ನಿರ್ದಯಿಯಾಗಿ ಕೊಲೆ ಮಾಡಿರುವ ಘಟನೆ ಪ್ಯಾರಿಸ್‍ನಲ್ಲಿ ನಡೆದಿದೆ. ಫ್ರಾನ್ಸ್‍ನಲ್ಲಿ ತಂದೆಯೊಬ್ಬರು ತನ್ನ ಮೂವರು ಹೆಣ್ಣುಮಕ್ಕಳನ್ನು ಕೊಂದಿರುವುದಾಗಿ ತಪ್ಪೋಪ್ಪಿಕೊಂಡಿದ್ದಾನೆ ಎಂದು ಪ್ರಾಸಿಕ್ಯೂಟರ್‍ಗಳು ಮತ್ತು ಪೊಲೀಸ್ ಮೂಲಗಳು ತಿಳಿಸಿವೆ. ಉತ್ತರ ಕರಾವಳಿ ಪಟ್ಟಣವಾದ ಡಿಪ್ಪೆಯಲ್ಲಿ ತನ್ನ ಮೂವರು ಮಕ್ಕಳನ್ನು ಕೊಂದಿದ್ದೇನೆ ಎಂದು 41 ವರ್ಷದ ವ್ಯಕ್ತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.
ಪ್ಯಾರಿಸ್‍ನ ಆಗ್ನೇಯ ಉಪನಗರದಲ್ಲಿರುವ ಆಲೋರ್ಟ್‍ವಿಲ್ಲೆ ಪಟ್ಟಣದಲ್ಲಿ ಅವರ ಮನೆಯಲ್ಲಿ ಮೂವರು ಹೆಣ್ಣು ಮಕ್ಕಳು ಸತ್ತು ಬಿದ್ದಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ಯಾರಿಸ್ ಉಪನಗರವಾದ ಕ್ರೆಟೆಲ್‍ನಲ್ಲಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು, ನಾಲ್ಕು, 10 ಮತ್ತು 11 ವರ್ಷ ವಯಸ್ಸಿನ ಮೂವರು ಯುವತಿಯರ ಸಾವು ವನ್ನು ದೃಢಪಡಿಸಿದರು.
ನ್ಯೂಜಿಲ್ಯಾಂಡ್ ಪ್ರಧಾನಿಯಾದ ಕ್ರಿಸ್ಟೋಫರ್ ಲಕ್ಸನ್ ಪ್ರಮಾಣ
ಇಬ್ಬರು ಮಕ್ಕಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆಯ ಆರಂಭಿಕ ತನಿಖೆ ಪ್ರಕಾರ ಎರಡು ಶವಗಳು ಕವರ್ ಅಡಿಯಲ್ಲಿ ಕಂಡುಬಂದರೆ, ಮೂರನೆಯದು ಸೋಫಾದಲ್ಲಿ ಸತ್ತುಬಿದ್ದಿದ್ದರು.
ತಂದೆ 2021 ರಲ್ಲಿ ಕೌಟುಂಬಿಕ ಹಿಂಸಾಚಾರದ ಅಪರಾಧಿ ಎಂದು ಪ್ರಕರಣದ ನಿಕಟ ಮೂಲಗಳು ತಿಳಿಸಿವೆ. ಅವರ ವಿರುದ್ಧ ತಡೆಯಾಪೊ ನೀಡಲಾಯಿತು ಆದರೆ ನಂತರ ತೆಗೆದುಹಾಕಲಾಯಿತು.ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪ್ರಾಸಿಕ್ಯೂಟರ್‍ಗಳು ತಿಳಿಸಿದ್ದಾರೆ.