Friday, April 4, 2025
Homeರಾಷ್ಟ್ರೀಯ | Nationalಲೀವ್‍ಇನ್ ಪಾರ್ಟನರ್ ಹಾಗೂ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟ್ರಕ್ ಚಾಲಕ

ಲೀವ್‍ಇನ್ ಪಾರ್ಟನರ್ ಹಾಗೂ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟ್ರಕ್ ಚಾಲಕ

ನಾಗ್ಪುರ,ಏ.14- ಟ್ರಕ್ ಚಾಲಕನೊಬ್ಬ ತನ್ನ ಲೀವ್ ಇನ್ ಪಾರ್ಟನರ್ ಹಾಗೂ ಆಕೆಯ ಮೂರು ವರ್ಷದ ಮಗುವನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಸಚಿನ್ ವಿನೋದಕುಮಾರ್ ರಾವುತ್ ಎಂಬಾತ ವಿವಾಹೇತರ ಸಂಬಂಧ ಹೊಂದಿದ್ದ ನಾಜ್ನಿನ್ (29) ಮತ್ತು ಅವರ ಮಗ ಯುಗ್ ಅವರನ್ನು ಹತ್ಯೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳು ಎಂಐಡಿಸಿ ಪ್ರದೇಶದ ಗಜಾನನ ಕಾಲೋನಿ ಬಳಿಯ ಗೋಲ್ಡನ್ ಕೀ ಹೋಟೆಲ್‍ನಲ್ಲಿನ ಕೊಠಡಿಯಲ್ಲಿ ಸಿಬ್ಬಂದಿಗೆ ಪತ್ತೆಯಾಗಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ರಾವುತ್ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ, ಅವರ ಲೀವ್‍ಇನ್ ಪಾಲುದಾರ ನಾಜ್ನಿನ್ ತಲೆಗೆ ಗಾಯ ಮತ್ತು ಸುತ್ತಿಗೆ ರಕ್ತದ ಕಲೆಗಳೊಂದಿಗೆ ಹತ್ತಿರದಲ್ಲಿ ಬಿದ್ದಿರುವುದು ಕಂಡುಬಂದಿದೆ. ಯುಗ್ ಅವರ ದೇಹದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ರಾವುತ್ ನಾಜ್ನಿನ್ ಮೇಲೆ ಸುತ್ತಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ ನಂತರ ಆಕೆಯ ಮಗನಿಗೆ ವಿಷಪೂರಿತ ಆಹಾರ ತಿನಿಸಿ ಇಲ್ಲವೇ ಕತ್ತು ಹಿಸುಕಿ ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ರಾವುತ್‍ಗೆ ವಿವಾಹವಾಗಿದ್ದು ಆತ ತನ್ನ ಪತ್ನಿಗೆ ವಿಚ್ಛೇದನ ನೀಡದೆ ನಾಜ್ನಿನ್ ಜೊತೆ ವಾಸಿಸಲು ಪ್ರಾರಂಭಿಸಿದ್ದ ಕಾಲಕ್ರಮೇಣ ನಾಜ್ನಿನ್ ಕೂಡ ಆತನಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದಳು ಇದರಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಇಬ್ಬರು ಪ್ರತ್ಯೇಕವಾಗಿ ವಾಸಿಸಲು ಸಮ್ಮತಿಸಿ 500 ರೂ.ಗಳ ಸ್ಪಾಂಪ್ ಪೇಪರ್ ಮೇಲೆ ಸಹಿ ಹಾಕಿದ್ದರು ಎನ್ನಲಾಗಿದೆ.

ಇಬ್ಬರ ನಡುವಿನ ಒಪ್ಪಂದ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾವುತ್, ನಾಜ್ನಿನ್ ಮತ್ತು ಹುಡುಗ ನಿನ್ನೆ ಮಧ್ಯಾಹ್ನ ಹೋಟೆಲ್‍ನಲ್ಲಿ ಚೆಕ್ ಇನ್ ಮಾಡಿದ್ದಾರೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News