Sunday, December 1, 2024
Homeರಾಷ್ಟ್ರೀಯ | Nationalಜಗಳದ ವೇಳೆ ಯುವಕನಿಗೆ ಗುಂಡಿಕ್ಕಿ ಹತ್ಯೆ

ಜಗಳದ ವೇಳೆ ಯುವಕನಿಗೆ ಗುಂಡಿಕ್ಕಿ ಹತ್ಯೆ

ನವದೆಹಲಿ, ಮಾ.26-ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್‍ನ ಮನೆಯೊಂದರಲ್ಲಿ ಕಳೆದ ರಾತ್ರಿ ನಡೆದ ಜಗಳದ ವೇಳೆ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆಮಾಡಲಾಗಿದೆ. ಚಾಂದಿನಿ ಚೌಕ್‍ನ ಗಾಮೆರ್ಂಟ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ತಾಕಿಮ್(22) ಕೊಲೆಯಾದ ಯುವಕ .

ಅತನ ಎದೆಗೆ ಗುಂಡು ಹಾರಿ ಕೊಂದ ಆರೋಪಿ ಯಾಸೀನ್ (24) ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ರಾತ್ರಿ, ಮುಸ್ತಾಕಿಮ್ ಬಾರ್‍ನಲ್ಲಿ ಕೆಲಸ ಮಾಡುವ ಇಶ್ರತ್ ಎಂಬಾಕೆಯ ಮನೆಗೆ ಹೋಗಿದ್ದರು ಅಲ್ಲಿ ಯಾಸೀನ್ ಕೂಡ ಬಂದಿದ್ದ .ಈ ವೇಳೆ ವಾಗ್ವಾದ ನಡೆದು ಜಗಳ ಶುರುವಾಗಿದೆ.

ಇದು ವಿಕೋಪಕ್ಕೆ ತಿರುಗಿ ಯಾಸೀನ್ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಮುಸ್ತಾಕಿಮ್ ಮೇಲೆ ಮೂರು ಬಾರಿ ಗುಂಡು ಹಾರಿಸಿದ್ದಾನೆ.ಒಂದು ಗುಂಡು ಮುಸ್ತಕಿಮ್‍ನ ಎದೆಗೆ ತಗುಲಿ ಆತ ಕುಸಿದು ಬಿದ್ದಿದ್ದಾನೆ ನಂತರ ಆತನನ್ನು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು.

ಮಾಹಿತಿ ಪಡೆದು ಸ್ಥಳಕ್ಕೆ ದಾವಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಜಿಟಿಬಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಉಪ ಪೊಲೀಸ್‍ಆಯುಕ್ತ (ಈಶಾನ್ಯ) ಜಾಯ್ ಟಿರ್ಕಿ ಹೇಳಿದ್ದಾರೆ.ಸ್ಥಳದಲ್ಲಿ ಎರಡು ಬುಲೆಟ್ ಪತ್ತೆಯಾಗಿದೆ ಪರಾರಿಯಾಗಿರುವ ಯಾಸೀನ್‍ನನ್ನು ಬಂಧಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.ಪೊಲೀಸರ ಪ್ರಕಾರ, ಕಳೆದ ವರ್ಷ ನವೆಂಬರ್‍ನಲ್ಲಿ ಸೊಹೈಲ್ ಮತ್ತು ಇಶ್ರತ್ ವಿಚ್ಛೇದನ ಪಡೆದಿದ್ದರು ಎಂದು ತಿಳಿದುಬಂದಿದೆ.

RELATED ARTICLES

Latest News