Monday, February 26, 2024
Homeರಾಷ್ಟ್ರೀಯಕೇಂದ್ರ ಸಚಿವೆ ಸಾದ್ವಿ ನಿರಂಜನ್ ಅಪಹರಣಕ್ಕೆ ಯತ್ನಿಸಿದ ಯುವಕನ ಬಂಧನ

ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಅಪಹರಣಕ್ಕೆ ಯತ್ನಿಸಿದ ಯುವಕನ ಬಂಧನ

ಲಕ್ನೊ,ಜ.18- ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ಅವರನ್ನು ಅಪಹರಿಸಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಯುವಕನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದಿದೆ. ಖಾಸಗಿ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಳ್ಳಲು ದೆಹಲಿಯಿಂದ ಲಕ್ನೋಗೆ ವಿಮಾನದಲ್ಲಿ ಬಂದಿದ್ದ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ಅವರನ್ನು ಯುವಕನೊಬ್ಬ ಬಂದೂಕು ತೋರಿಸಿ ಅಪಹರಿಸಲು ಯತ್ನಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ಅವರ ಕಾರು ಚಾಲಕ ನೀಡಿರುವ ದೂರಿನನ್ವಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಚಿವರನ್ನು ಕರೆತರುವ ಕಾರಿನಲ್ಲಿ ತೆರಳುತ್ತಿದ್ದಾಗ ಬಂತಾರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂಪ್ರದಾನ್ ಡಾಬಾ ಬಳಿ ಟೀ ಕುಡಿಯಲು ನಿಲ್ಲಿಸಿದ್ದ ವೇಳೆ ವ್ಯಕ್ತಿಯೊಬ್ಬ ದಿಢೀರ್ ಬಂದು ಕಾರು ಹತ್ತಿ ಕುಳಿತ ಎಂದು ದೂರಿನಲ್ಲಿ ವಿವರಿಸಿದರು.

ಗ್ರಾಮೀಣ ಭಾಗದ ಶೇ.42ರಷ್ಟು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಬರಲ್ಲ

ಬಳಿಕ ಬಂದೂಕುಧಾರಿ ಕಾರಿನ ಸಮೇತ ಪರಾರಿಯಾಗಲು ಯತ್ನಿಸಿದ. ತಕ್ಷಣವೇ ಭದ್ರತಾ ಸಿಬ್ಬಂದಿಗಳು ಕಾರನ್ನು ಸುತ್ತುವರಿದು ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

RELATED ARTICLES

Latest News