ಬೆಂಗಳೂರು,ನ,17- ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್, ಬೆಂಗಳೂರಿನಲ್ಲಿನ ತನ್ನ ಹೊಸ ವಸತಿ ಯೋಜನೆಯಾಗಿರುವ ಪ್ರಾವಿಡೆಂಟ್ ಡೀನ್ಸ್‍ಗೇಟ್ ಪ್ರಾರಂಭಿಸುವುದಾಗಿ ಎಂದು ಪ್ರಕಟಿಸಿದೆ.
ಬೆಂಗಳೂರಿನ ಅಂ.ರಾ.ವಿಮಾನ ನಿಲ್ದಾಣ ರಸ್ತೆಯಲ್ಲಿ ಈ ವಿಶೇಷವಾಗಿ ಅಭಿವೃದ್ಧಿಪಡಿಸುತ್ತಿರುವ ವಸತಿ ಯೋಜನೆಯು ಐಷಾರಾಮಿ ಜೀವನವನ್ನು ಮರುವ್ಯಾಖ್ಯಾನಿಸಲಿದೆ, ಮ್ಯಾಂಚೆಸ್ಟರ್ ಟೌನ್‍ಹೌಸ್ ಶೈಲಿಯ ವಾಸ್ತುಶೈಲಿಯ ಮೋಡಿಯ ಜೊತೆಗೆ ಸಮಕಾಲೀನ ವಿನ್ಯಾಸಗಳ ಮಿಶ್ರಣ ಒಳಗೊಂಡ ವಿಶಿಷ್ಟ ವಸತಿ ಯೋಜನೆ ಇದಾಗಿದೆ.
15 ಎಕರೆಗಳಷ್ಟು ಪ್ರದೇಶದಲ್ಲಿ ವ್ಯಾಪಿಸಿರುವ ಡೀನ್ಸ್‍ಗೇಟ್, ನಿಖರವಾಗಿ ವಿನ್ಯಾಸಗೊಳಿಸಿದ 288 ಟೌನ್‍ಹೌಸ್‍ಗಳನ್ನು ಒಳಗೊಂಡಿರಲಿದೆ. ಪ್ರತಿಯೊಂದೂ ಟೌನ್‍ಹೌಸ್ ವಾಸ್ತುಶಿಲ್ಪದ ಮೇರುಕೃತಿಯಾಗಿದೆ.
ಈ ವಸತಿ ಯೋಜನೆಯು 3 ಬಿಎಚ್‍ಕೆಗಳನ್ನು ಹೊಂದಿರುವ 1,900 ರಿಂದ 1,950 ಚದರ ಅಡಿ ವಿಸ್ತಾರದ ಗಾರ್ಡನ್ ಟೌನ್‍ಹೌಸಸ್ ಮತ್ತು 2,100 ರಿಂದ 2,200 ಚದರ ಅಡಿ ವ್ಯಾಪ್ತಿ ಹೊಂದಿರುವ ಟೆರೇಸ್ ಟೌನ್‍ಹೌಸಸ್ ಹೆಸರಿನ ಎರಡು ವಿಭಿನ್ನ ಬಗೆಗಳನ್ನು ಒಳಗೊಂಡಿದೆ.
ಕೆಲಸಕ್ಕಿದ್ದ ಅಂಗಡಿಯಲ್ಲಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು: ಇಬ್ಬರ ಬಂಧನ
ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್‍ನ ಸಿಇಒ ಮಲ್ಲಣ್ಣ ಸಾಧಿಸಲು ಅವರು ಮಾತನಾಡಿ, ಡೀನ್ಸ್‍ಗೇಟ್, ಚಿಂತನಶೀಲ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವುದರ ಜೊತೆಗೆ ಸುಸ್ಥಿರತೆ ಮತ್ತು ಗ್ರಾಹಕರ ಸಂತಸಕ್ಕೆ ಆದ್ಯತೆ ನೀಡುವ ವಸತಿ ಸ್ಥಳಗಳನ್ನು ಅಭಿವೃದ್ಧಿಪಡಿಸುವ ನಮ್ಮ ಸಮರ್ಪಣಾ ಭಾವವನ್ನು ಸಾಕಾರಗೊಳಿಸಲಿದೆ.
ಈ ಯೋಜನೆಯಲ್ಲಿ ಅನನ್ಯ ವಿನ್ಯಾಸದ ಸೌಂದರ್ಯಶಾಸ್ತ್ರ, ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಸೇರ್ಪಡೆ ಮಾಡಿ ಹೆಚ್ಚಿನ ಅನುಭವಕ್ಕೆ ವಿನ್ಯಾಸಗೊಳಿಸಿದ ಮನೆಗಳ ಮೂಲಕ ನಮ್ಮ ಗ್ರಾಹಕರ ಜೀವನಶೈಲಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.