Friday, November 22, 2024
Homeರಾಜ್ಯರಾಜ್ಯದಲ್ಲಿ ಕಡ್ಡಾಯವಾಗಿ ಹೋಬಳಿಗೊಂದು ವಸತಿ ಶಾಲೆ ನಿರ್ಮಾಣ : ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಕಡ್ಡಾಯವಾಗಿ ಹೋಬಳಿಗೊಂದು ವಸತಿ ಶಾಲೆ ನಿರ್ಮಾಣ : ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜೂ.19- ರಾಜ್ಯದಲ್ಲಿ ಕಡ್ಡಾಯವಾಗಿ ಹೋಬಳಿಗೊಂದು ವಸತಿ ಶಾಲೆ ನಿರ್ಮಾಣ ನಮ್ಮ ಸರ್ಕಾರದ ಸಂಕಲ್ಪ. ಇದನ್ನು ಚಾಚೂ ತಪ್ಪದೇ ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಅಂಬೇಡ್ಕರ್‌ ಭವನದಲ್ಲಿ ಸಮಾಜಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾಡನಾಡಿದ ಅವರು, 1994-95 ರಲ್ಲಿ ತಾವು ಹಣಕಾಸು ಸಚಿವರಾಗಿದ್ದಾಗ ವಸತಿ ಶಾಲೆಗಳನ್ನು ಆರಂಭಿಸಲಾಯಿತು ಎಂದರು. ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯಿಂದ 833, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 113 ಸೇರಿ 946 ವಸತಿ ಶಾಲೆಗಳಿವೆ. ಶೇ.86 ರಷ್ಟು ಹೋಬಳಿಗಳಲ್ಲಿ ವಸತಿ ಶಾಲೆಗಳಿದ್ದು, ಕೆಲವು ಕಡೆ ಒಂದು ಹೋಬಳಿಗೆ ಎರಡು ಶಾಲೆಗಳಿವೆ. ಬಾಕಿ ಇರುವ ಶೇ.14 ರಷ್ಟು ಹೋಬಳಿಗಳಲ್ಲಿ ವಸತಿ ಶಾಲೆಯನ್ನು ಆರಂಭಿಸಬೇಕು.

ಈ ವರ್ಷ 20 ಶಾಲೆಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಲೆಗಳನ್ನು ಆರಂಭಿಸಲಾಗುವುದು ಎಂದರು.ಸಮಾಜದಲ್ಲಿ ಶ್ರೇಣೀಕೃತ ವ್ಯವಸ್ಥೆಯಿಂದಾಗಿ ಜಾತಿ ಹಾಗೂ ಅಸಮಾನತೆ ಇದೆ. ಬುದ್ದ, ಬಸವಣ್ಣ ಅವರು ಹೇಳಿದ ಬಳಿಕವೂ ಜಾತಿ ನಿರ್ಮೂಲನೆಯಾಗಿಲ್ಲ. ವೈಚಾರಿಕತೆ ಬೆಳೆದಿಲ್ಲ. ಕರ್ಮ ಸಿದ್ಧಾಂತವನ್ನು ನಂಬುವುದನ್ನು ಬಿಟ್ಟಿಲ್ಲ.

ಶಿಕ್ಷಣ ಎಂದರೆ ಅಂಕ ಗಳಿಸುವುದು, ನೌಕರಿ ಗಿಟ್ಟಿಸುವುದು ಮಾತ್ರವಲ್ಲ. ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವ ಬೆಳೆಯಬೇಕಿದೆ ಎಂದು ಹೇಳಿದರು. ವಸತಿ ಶಾಲೆಯ ಶಿಕ್ಷಕರು ಮೊದಲು ಜಾತಿ ವ್ಯವಸ್ಥೆಯನ್ನು ಬೆಂಬಲಿಸುವುದನ್ನು ಬಿಡಬೇಕು. ನಂತರ ಮಕ್ಕಳಿಗೆ ವೈಚಾರಿಕ ಶಿಕ್ಷಣವನ್ನು ಕಲಿಸಬೇಕು ಎಂದು ಸೂಚನೆ ನೀಡಿದರು.

ತಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಮುಖ್ಯಮಂತ್ರಿಯವರು ನನಗೆ ಶಿಕ್ಷಣ ದೊರೆಯದೇ ಇದ್ದರೆ ಕಾನೂನು ಪದವೀಧರನಾಗುತ್ತಿರಲಿಲ್ಲ, ರಾಜ್ಯದ ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಹುಟ್ಟಿನಿಂದ ಯಾರೂ ದಡ್ಡರಲ್ಲ. ಅವಕಾಶಗಳ ಕೊರತೆಯಿಂದಾಗಿ ಪ್ರತಿಭೆ ಬೆಳಕಿಗೆ ಬರುವುದಿಲ್ಲ.

ಹಳ್ಳಿಗಾಡಿನಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಮಕ್ಕಳಿಗೆ ಅವಕಾಶಗಳ ಕೊರತೆ ಇರುತ್ತದೆ ಎಂದು ಹೇಳಿದರು. ವಸತಿ ಶಾಲೆಯ ಮಕ್ಕಳು ಉತ್ತಮ ಫಲಿತಾಂಶ ಗಳಿಸಿದ್ದಾರೆ. ಅದರಲ್ಲೂ ಅಂಕಿತ 100 ಕ್ಕೆ 100 ಅಂಕ ಪಡೆದಿದ್ದು ನನಗೆ ಅತೀವ ಸಂತಸ ಉಂಟುಮಾಡಿತು. ಇಂದು ಆ ಮಕ್ಕಳನ್ನು ಸನಾನಿಸಲಾಗಿದೆ ಎಂದರು.

ಸಚಿವ ಎಚ್‌.ಸಿ.ಮಹದೇವಪ್ಪ ಮಾತನಾಡಿ, ರಾಜ್ಯದಲ್ಲಿ 175 ಹಿಂದುಳಿದ ವರ್ಗಗಳ, 154 ಪರಿಶಿಷ್ಟ ವರ್ಗದ ಹಾಗೂ 500 ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ವಸತಿ ಶಾಲೆಗಳಿವೆ. ಇಲ್ಲಿ ಪ್ರವೇಶ ನೀಡುವಾಗ ಪರಿಶಿಷ್ಟ ಜಾತಿ ಪಂಗಡದ ಮಕ್ಕಳಿಗೆ ಶೇ.75 ರಷ್ಟು ಹಾಗೂ ಸಾಮಾನ್ಯ ವರ್ಗಕ್ಕೆ ಶೇ.25 ರಷ್ಟು ಮೀಸಲಾತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ದೇಶದಲ್ಲಿ ವಾಕ್‌ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯಕ್ಕೆ ತಡೆಯಾಗುವ ವಾತಾವರಣ ನಿರ್ಮಾಣವಾಗಿತ್ತು. ಭಾಷೆ, ಉಡುಪು ಮತ್ತು ಆಹಾರ ಪದ್ಧತಿಯಲ್ಲಿ ಏಕರೂಪತೆಗಾಗಿ ಬಲವಂತಗೊಳಿಸುವ ಪರಿಸ್ಥಿತಿ ಎದುರಾದಾಗ ನಮ ಸರ್ಕಾರ ಜಾಗೃತಿ ಜಾಥಾ ನಡೆಸಿ ಅರಿವು ಮೂಡಿಸಿತ್ತು ಎಂದು ವಿವರಿಸಿದರು.

ಸಭಾಪತಿ ಬಸವರಾಜಹೊರಟ್ಟಿ, ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳುವ ಮಕ್ಕಳು ಉನ್ನತಾಧಿಕಾರಿಗಳಾಗಬೇಕು, ಸಮಾಜಸೇವೆ ಮಾಡಬೇಕು ಎಂದು ಕರೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವಣ್ಣನವರ ತತ್ವ ಅನುಸರಿಸುತ್ತಿದ್ದಾರೆ. ಹಿಡಿದ ಕೆಲಸವನ್ನು ಮಾಡುವ ಪಟ್ಟು ಹಿಡಿದರೆ ಹರಿ, ಬ್ರಹ ಬಂದರೂ ಅದನ್ನು ನಿಲ್ಲಿಸುವುದಿಲ್ಲ ಎಂದು ಹಾಡಿ ಹೊಗಳಿದರು.

ರಿಜ್ವಾನ್‌ ಹರ್ಷದ್‌, ವಿಧಾನಪರಿಷತ್ ಸದಸ್ಯ ಸುಧಾಂದಾಸ್‌‍ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಎಸ್‌‍ಎಸ್‌‍ಎಲ್‌ಸಿ, ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹಾಗೂ ಶೇ. 100ರಷ್ಟು ಫಲಿತಾಂಶದ ಪಡೆದ ಶಾಲೆಗಳ ಪ್ರಾಂಶುಪಾಲರನ್ನು ಕಾರ್ಯಕ್ರಮದಲ್ಲಿ ಸನಾನಿಸಲಾಯಿತು.625 ಕ್ಕೆ 625 ಅಂಕ ಪಡೆದ ಬಾಗಲಕೋಟೆಯ ಅಂಕಿತ ಬಸಪ್ಪ ಅವರಿಗೆ 5 ಲಕ್ಷ ರೂ.ವಿನ ನಗದು ಬಹುಮಾನದೊಂದಿಗೆ ಸನಾನಿಸಲಾಯಿತು.

RELATED ARTICLES

Latest News