ಮಂಗಳೂರು,ಮೇ4- ಇಲ್ಲಿನ ಏರ್ಪೋರ್ಟ್ಗೆ ಬಾಂಬ್ ಇಡಲಾಗಿದ್ದು ಕೆಲವೇ ಗಂಟೆಗಳಲ್ಲಿ ದೊಡ್ಡ ಮಟ್ಟದ ರಕ್ತಪಾತವಾಗಲಿದೆ ಎಂದು ಉಗ್ರರ ಹೆಸರಿನಲ್ಲಿ ಇಮೇಲ್ ಬಂದಿದೆ.
ಏರ್ಪೋರ್ಟ್ ಆವರಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ. ಅಲ್ಲದೆ ಮೂರು ವಿಮಾನಗಳಲ್ಲಿಯೂ ಬಾಂಬ್ ಇಡಲಾಗಿದೆ ಎಂಬ ಸಂದೇಶ ಗಮನಿಸಿದ ಏರ್ಪೋರ್ಟ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕೃತ್ಯದ ಹಿಂದೆ ಟೆರರೈಸರ್ರಸ 111 ಇದೆ ಎಂದು ಉಗ್ರರ ಹೆಸರಿನಲ್ಲಿ ಇಮೇಲ್ ಬಂದಿದ್ದು, ಏರ್ಪೋರ್ಟ್ ಠಾಣೆ ಪೊಲೀಸರು ಬಾಂಬ್ ನಿಷ್ಕ್ರಿಯ ದಳ , ತನಿಖಾ ದಳ, ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.