Sunday, April 20, 2025
Homeರಾಜ್ಯಸಿಬಿಐ ತನಿಖೆ ಹೆಸರಲ್ಲಿ ನಿವೃತ್ತ ಎಂಜಿನಿಯರ್‌ಗೆ 1.6 ಕೋಟಿ ರೂ.ವಂಚನೆ

ಸಿಬಿಐ ತನಿಖೆ ಹೆಸರಲ್ಲಿ ನಿವೃತ್ತ ಎಂಜಿನಿಯರ್‌ಗೆ 1.6 ಕೋಟಿ ರೂ.ವಂಚನೆ

ಮಂಗಳೂರು, ಮೇ 10(ಪಿಟಿಐ)-ನಿಮ್ಮ ವಿರುದ್ಧ ಸಿಬಿಐ ತನಿಖೆ ನಡೆಸಬೇಕಿದೆ ಅದರಿಂದ ತಪ್ಪಿಸಿಕೊಳ್ಳಬೇಕು ಎಂದರೆ ಹಣ ನೀಡಬೇಕು ಎಂದು ವಂಚಿಸಿ ನಿವೃತ್ತ ಎಂಜಿನಿಯರ್‌ ಅವರಿಂದ 1.6 ಕೋಟಿ ರೂ.ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಕೇಂದ್ರ ತನಿಖಾ ಸಂಸ್ಥೆಯಿಂದ ಸಂಭವನೀಯ ತನಿಖೆಯನ್ನು ತಪ್ಪಿಸಲು ಎಚ್ಚರಿಕೆ ಹಣ ಕೇಳಿ ನಿವತ್ತ ಇಂಜಿನಿಯರ್‌ಗೆ ವಂಚನೆ ಮಾಡಿ 1.6 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು, ಅಂತಾರಾಷ್ಟ್ರೀಯ ಕೊರಿಯರ್‌ ಸೇವೆಯ ಉದ್ಯೋಗಿಗಳಂತೆ ನಟಿಸುತ್ತಾ, ಸಂತ್ರಸ್ತರು ಕಳುಹಿಸಿದ ಪ್ಯಾಕೇಜ್‌ನಲ್ಲಿ ದೋಷಾರೋಪಣೆಯ ದಾಖಲೆಗಳು ಮತ್ತು ಡ್ರಗ್‌್ಸ ಇವೆ ಅದರ ಬಗ್ಗೆ ತನಿಖಾ ಸಂಸ್ಥೆಗೆ ಮಾಹಿತಿ ಬಂದಿದೆ ಹೀಗಾಗಿ ನಿಮನ್ನು ವಿಚಾರಣೆಗೊಳಪಡಿಸಬೇಕು ಎಂದು ನಂಬಿಸಿದ್ದಾರೆ.

ಹೀಗಾಗಿ ನೀವು 1.6 ಕೋಟಿ ರೂ.ಠೇವಣಿ ಇಡಬೇಕು ತನಿಖೆ ಮುಗಿದ ನಂತರ ಅದನ್ನು ಹಿಂತಿರುಗಿಸುವುದಾಗಿ ಹೇಳಿ ಅವರು ನಂಬಿಸಿ ವಂಚನೆ ಮಾಡಿದ್ದಾರೆ. ಆಪಾದಿತ ವಹಿವಾಟು ಮೇ 2-6 ರ ನಡುವೆ ನಡೆದಿದ್ದು, ಈ ಬಗ್ಗೆ ವ್ಯಕ್ತಿ ತನ್ನ ಮಗಳಿಗೆ ತಿಳಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಘಟನೆಯ ಕುರಿತು ಮಂಗಳೂರು ನಗರದ ಸೈಬರ್‌, ಎಕನಾಮಿಕ್‌ ಮತ್ತು ನಾರ್ಕೋಟಿಕ್‌್ಸ ಕ್ರೈಂ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News