Wednesday, September 11, 2024
Homeಇದೀಗ ಬಂದ ಸುದ್ದಿಜೈಲಿಂದ ಹೊರಬರುತ್ತಿದ್ದಂತೆ ಶಿವನ ಮೊರೆ ಹೋದ ಸಿಸೋಡಿಯಾ

ಜೈಲಿಂದ ಹೊರಬರುತ್ತಿದ್ದಂತೆ ಶಿವನ ಮೊರೆ ಹೋದ ಸಿಸೋಡಿಯಾ

ನವದೆಹಲಿ, ಆ.12 (ಪಿಟಿಐ) – ಹದಿನೇಳು ತಿಂಗಳ ಜೈಲು ವಾಸದಿಂದ ಬಿಡುಗಡೆಯಾಗಿರುವ ದೆಹಲಿ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರು ಇಂದು ಚಾಂದಿನಿ ಚೌಕದಲ್ಲಿರುವ ಗೌರಿ ಶಂಕರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರಾವಣ ಮಾಸದ ಶುಭ ಸೋಮವಾರದಂದು ಶಿವನಿಗೆ ಪೂಜೆ ಸಲ್ಲಿಸಿದ್ದೇನೆ. ನನ್ನ ಹಿಂದಿನ ಘಟನೆ ಕುರಿತಂತೆ ನನಗೆ ಯಾರ ಮೇಲೂ ದ್ವೇಷವಿಲ್ಲ ಎಂದು ಹೇಳಿದ್ದಾರೆ.

ಶಿವನು ಪ್ರೆತಿಯ ಸಂಕೇತವಾಗಿದೆ. ಶಿವನನ್ನು ಹೃದಯದಲ್ಲಿ ಹೊಂದಿರುವವರು ಇತರರನ್ನು ದ್ವೇಷಿಸುವುದಿಲ್ಲ. ಎಲ್ಲದರಲ್ಲೂ ಅವರ ಉಪಸ್ಥಿತಿಯನ್ನು ಕಾಣಲು ನಾನು ಅವರ ಆಶೀರ್ವಾದವನ್ನು ಕೋರಿದೆ ಎಂದು ಸಿಸೋಡಿಯಾ ಪಿಟಿಐ ವಿಡಿಯೋಗಳಿಗೆ ತಿಳಿಸಿದ್ದಾರೆ.

ಆಮ್‌ ಆದ್ಮಿ ಪಕ್ಷದಲ್ಲಿ (ಎಎಪಿ) ನಂಬರ್‌ 2 ಎಂದು ಪರಿಗಣಿಸಲ್ಪಟ್ಟಿರುವ ಸಿಸೋಡಿಯಾ ಅವರು ನಾಯಕರು ಮತ್ತು ಸ್ವಯಂಸೇವಕರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದ್ದಾರೆ ಮತ್ತು ಮುಂದಿನ ವರ್ಷದ ಆರಂಭದಲ್ಲಿ ದೆಹಲಿ ವಿಧಾನಸಭಾ ಚುನಾವಣೆಗೆ ತಕ್ಷಣ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ.

ದೆಹಲಿಯ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲು ಅವರು ಪಕ್ಷದ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ಸಿಸೋಡಿಯಾ ಆ. 14 ರಂದು ನಗರದ ಜನರನ್ನು ತಲುಪಲು ಪಾದಯಾತ್ರೆ ನಡೆಸಲಿದ್ದಾರೆ

RELATED ARTICLES

Latest News