Friday, September 20, 2024
Homeರಾಜ್ಯರಾಷ್ಟ್ರಧ್ವಜ ಮಾರಾಟ-ತಯಾರಿಕೆಗೆ ಪೆಟ್ಟು ಕೊಟ್ಟ ಹವಾಮಾನ ವೈಪರೀತ್ಯ, ಭಾರೀ ಮಳೆ

ರಾಷ್ಟ್ರಧ್ವಜ ಮಾರಾಟ-ತಯಾರಿಕೆಗೆ ಪೆಟ್ಟು ಕೊಟ್ಟ ಹವಾಮಾನ ವೈಪರೀತ್ಯ, ಭಾರೀ ಮಳೆ

ಕಲೇಶ ಮಂಡ್ಯಾಳ
ಹುಬ್ಬಳ್ಳಿ,ಆ.5-
ಉತ್ತರ ಕರ್ನಾಟಕ ಬಾಗದಲ್ಲಿ ಭಾರೀ ಮಳೆ ಹಾಗೂ ತಂಪಾದ ಗಾಳಿ ಬೀಸುವುದರಿಂದ ರಾಷ್ಟ್ರಧ್ವಜ ಮಾರಾಟಗಾರರ ಹಾಗೂ ತಯಾರಿಕೆಗೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದೆ. ಕಳೆದ ವರ್ಷ ಸ್ವಾತಂತೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದಾಖಲೆಯ ವಹಿವಾಟು ನಡೆದಿತ್ತು. ಪ್ರತಿ ವರ್ಷ ಒಂದೂವರೆ ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಯುತ್ತದೆ. ಆದರೆ, ಈ ಸಲ ಜುಲೈ ವರೆಗೆ 97 ಲಕ್ಷ ಮೊತ್ತದ ವಹಿವಾಟು ಮಾತ್ರ ನಡೆದಿದೆ.

ಭಾರತೀಯ ಮಾನಕ ಸಂಸ್ಥೆ ಪ್ರಕಾರ 9 ವಿವಿಧ ಅಳತೆಯ ಧ್ವಜಗಳನ್ನು ಸಿದ್ಧಪಡಿಸಲಾಗುತ್ತದೆ. 21×14, 128, 9×6, 6×4, 4.5×3, 3×2, 1.5 1,9×6 5 6×4 ಅಳತೆಯ ಧ್ವಜಗಳನ್ನು ಸಿದ್ಧಪಡಿಸಿ, ಮಾರುತ್ತೇವೆ. ಅಳತೆಗೆ ತಕ್ಕಂತೆ 250 ರಿಂದ 30 ಸಾವಿರವರೆಗೆ ದರವಿದೆ. ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಉತ್ಪಾದನೆಯಾಗುವ ಖಾದಿ ಅಂಗಿ, ಪ್ಯಾಂಟ್‌‍, ಟವೆಲ್‌‍, ಕರವಸ, ಟೊಪ್ಪಿಗೆ, ಜಮಖಾನಿಯಂತಹ ವಸ್ತುಗಳಿಗೂ ಬೇಡಿಕೆ ತಗ್ಗಿದೆ. ನಗರ ಪ್ರದೇಶ ಮತ್ತು ಖಾದಿ ಬಗೆಗೆ ತಿಳಿದವರು ಮಾತ್ರ ಖರೀದಿಸುತ್ತಾರೆ.

ವೀವಿಂಗ್‌, ಸ್ಪಿನ್ನಿಂಗ್‌ ಕೆಲಸಕ್ಕೆ ಸಿಬ್ಬಂದಿ ಬೇಕು. ಆದರೆ, ಕೆಲಸಕ್ಕೆ ಜನ ಬರುತ್ತಿಲ್ಲ. ಬಾಗಲಕೋಟೆ, ಬಾದಾಮಿ, ಬೀಳಗಿಯಲ್ಲಿ 21 ಹಳ್ಳಿಗಳಲ್ಲಿ ಸಂಘದ ಕಚೇರಿಗಳಿವೆ. ಧ್ವಜ ಉತ್ಪಾದನೆಗೆ ಬಳಸುವ ಕೆಲ ಕಚ್ಚಾ ಸಾಮಗ್ರಿಗಳ ಮೇಲಿನ ಜಿಎಸ್ಟಿಯಿಂದ ಆರ್ಥಿಕ ಹೊರೆ ಹೆಚ್ಚಿದೆ. ಆಯಾ ವಸ್ತುಗಳ ಮೇಲೆ ತೆರಿಗೆ ಮುಕ್ತಗೊಳಿಸಿದರೆ ಅನುಕೂಲಕರ.

ರಾಷ್ಟ್ರಧ್ವಜದ ಬಟ್ಟೆ ತಯಾರಿಸುವ ಗರಗ ಕೇಂದ್ರಕ್ಕೆ 2023ರ ಜುಲೈ 23ರಿಂದ 2/3 ಅಳತೆಯ ಧ್ವಜ ತಯಾರಿಕೆಗೆ ಅನುಮತಿ ಸಿಕ್ಕಿದ್ದು, ಈವರೆಗೆ ಅಂದಾಜು 10 ಲಕ್ಷ ವಹಿವಾಟು ಆಗಿದೆ. ಅಲ್ಲಿಯೂ ಹವಾಮಾನ ವೈಪರೀತ್ಯ, ಕಚ್ಚಾ ಸಾಮಗ್ರಿ ಪೂರೈಕೆ ಮತ್ತು ಸಿಬ್ಬಂದಿ ಕೊರತೆಯಿಂದ ಉತ್ಪಾದನೆಗೆ ಸಮಸ್ಯೆಯಾಗಿದೆ.ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಹವಾಮಾನ ತಂಪಾಗಿ ನೂಲು, ಬಟ್ಟೆಗೆ ಹಾಕಿದ್ದ ಮಸಿ ಒಣಗುತ್ತಿಲ್ಲ. ಇದರಿಂದ ಉತ್ಪಾದನೆ ನಿಧಾನವಾಗಿದೆ.

ಶಕ್ತಿ ಪರಿಣಾಮ:

ಕೌಶಲ ಆಧಾರಿತ ಸಿಬ್ಬಂದಿಯ ಅಗತ್ಯವಿದೆ. ಆದರೆ ಇಲ್ಲಿ ಸಿಬ್ಬಂದಿಗೆ ಸಿಗುವ ಸಂಬಳವೂ ಕಡಿಮೆ. ದಿನಕ್ಕೆ ಅಂದಾಜು 230 ರಿಂದ 250 ಸಿಗಬಹುದು. ಅದಕ್ಕೆ ಕೆಲಸಕ್ಕೆ ಬರಲು ಜನರು ಜನ ಹಿಂದೇಟು ಹಾಕುತ್ತಾರೆ. ಮಹಿಳೆಯರು ಶಕ್ತಿ ಯೋಜನೆಯಡಿ ಕೆಲಸಕ್ಕೆಂದು ಪರ ಊರುಗಳಿಗೆ ಹೋಗುತ್ತಾರೆ. ಇಲ್ಲಿ ಕೆಲಸಕ್ಕೆ ಬರುವವರು ಇಲ್ಲದಂತಾಗಿದೆ ಎಂದರು.

ಪ್ಲಾಸ್ಟಿಕ್‌ ಸಿಂಥೆಟಿಕ್‌ ಧ್ವಜಗಳ ತಯಾರಿಕೆ ನಿಲ್ಲಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ರಾಷ್ಟ್ರಧ್ವಜದ ಬಗ್ಗೆ ಗೌರವ ಮೂಡಿಸುವ ಪಠ್ಯವನ್ನು 5ನೇ ತರಗತಿಯಿಂದ ಪಿಯುಸಿವರೆಗೆ ಅಳವಡಿಸಬೇಕು ಎಂಬುದು ಸಹ ಜನರ ಒತ್ತಾಯ ಆಗಿದೆ.

RELATED ARTICLES

Latest News