ನಮ್ಮನ್ನು ನೋಡಿ ಜಗತ್ತು ಕಲಿಯಬೇಕಿದೆ: ಮೋಹನ್ ಭಾಗವತ್

ಪುಣೆ,ಆ.14-ನೋಡಲು ನಾವು ವಿಭಿನ್ನವಾಗಿದ್ದೇವೆ. ಭಿನ್ನವಾದ ಆಹಾರಗಳನ್ನು ಸೇವಿಸುತ್ತೇವೆ. ಆದರೆ ನಮ್ಮಲ್ಲಿ ಐಕ್ಯತೆ ಸುಭದ್ರವಾಗಿದೆ ಎಂದು ಆರ್‍ಎಸ್‍ಎಸ್‍ನ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆರ್‍ಎಸ್‍ಎಸ್ ಕೇಂದ್ರ ಕಚೇರಿ ಇರುವ ನಾಗರಪುರದಲ್ಲಿ ಉತ್ತಿಷ್ಟ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಏಕತೆಯಲ್ಲಿ ಮುಂದೆ ಸಾಗುವುದನ್ನು ನಮ್ಮನ್ನು ನೋಡಿ ಜಗತ್ತು ಕಲಿಯಬೇಕಿದೆ ಎಂದಿದ್ದಾರೆ. ಇಂದು ನಾವು ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ಕೆಲಸ ಮಾಡುವ ಪ್ರತಿಜ್ಞೆ ಮಾಡಬೇಕು. ದೇಶದ ಹಿರಿಮೆಯನ್ನು ಎತ್ತರಕ್ಕೆ ಕೊಂಡೊಯ್ಯಬೇಕು. ದೇಶಕ್ಕಾಗಿ ಕೆಲಸ ಮಾಡಬೇಕು, ದೇಶಕ್ಕಾಗಿ ಹಾಡಬೇಕು, ಜೀವನವನ್ನೇ ಭಾರತಕ್ಕೆ ಮುಡಿಪಾಗಿಡಬೇಕು […]

ಚಾಮರಾಜಪೇಟೆಯಲ್ಲಿ ರಾಷ್ಟ್ರಧ್ವಜವನ್ನು ಬೀದಿಗೆ ಎಸೆದ ಕಿಡಿಗೇಡಿಗಳು..!

ಬೆಂಗಳೂರು,ಅ.10- ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದಿರುವ ಹಿನ್ನಲೆಯಲ್ಲಿ ಈ ಬಾರಿ ಅದ್ದೂರಿ ಅಮೃತ ಮಹೋತ್ಸವ ಆಚರಿಸಲು ಇಡೀ ದೇಶ ಸಜಾಗಿದೆ. ಹರ್ ಘರ್ ತಿರಂಗಾ ಯೋಜನೆಯಡಿ ಪ್ರತಿ ಮನೆ ಮನೆಗಳ ಮೇಲೂ ತ್ರಿವರ್ಣ ಧ್ವಜ ಹಾರಿಸಲು ತೀರ್ಮಾನಿಸಲಾಗಿದೆ. ಇಂತಹ ಸಂದರ್ಭದಲ್ಲೇ ಕೆಲವು ಕಿಡಿಗೇಡಿಗಳು ರಾಷ್ಟ್ರ ಧ್ವಜವನ್ನು ಬೀದಿಗೆ ಎಸೆಯುವ ಮೂಲಕ ಅಪಮಾನವೆಸಗಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲೇ ಕಿಡೆಗೇಡಿಗಳು ಚಾಮರಾಜಪೇಟೆಯಲ್ಲಿ ರಾಷ್ಟ್ರ ಧ್ವಜವನ್ನು ಬೀದಿಗೆ ಎಸೆಯುವ ಮೂಲಕ ರಾಷ್ಟ್ರ […]

ಮೋದಿ ದೊಡ್ಡ ನಾಟಕಕಾರ : ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು,ಆ.9- ಪ್ರಧಾನಿ ನರೇಂದ್ರ ಮೋದಿ ದೊಡ್ಡ ನಾಟಕಕಾರ. ರಾಷ್ಟ್ರಧ್ವಜ, ರಾಷ್ಟ್ರ ಗೀತೆಯನ್ನು ಅವಮಾನಿಸಿದವರು ಈಗ ಹರ್ ಘರ್ ತಿರಂಗ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜವನ್ನು ಆರ್‍ಎಸ್‍ಎಸ್‍ನ ಮುಖವಾಣಿ ಆರ್ಗನೈಸರ್‍ನಲ್ಲಿ ಟೀಕಿಸಲಾಗಿತ್ತು. ಸಂಘ ಪರಿವಾರದ ನಾಯಕರಾದ ಸಾರ್ವಕರ್, ಗೋಲ್ವಾಲ್ಕರ್ ಅವರನ್ನು ವಿರೋಧಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಂಘ ಪರಿವಾರ, ಹಿಂದೂ ಮಹಾಸಭಾದ ಕೊಡುಗೆ ಏನೂ ಇಲ್ಲ. ಬಿಜೆಪಿಯ ಯಾವ ನಾಯಕರು ತ್ಯಾಗ, […]

BREAKING : ಮದರಸಾಗಳಲ್ಲಿ ಕಡ್ಡಾಯವಾಗಿ ತ್ರಿವರ್ಣ ಧ್ವಜ ಹಾರಿಸಲು ಸೂಚನೆ

ಬೆಂಗಳೂರು,ಜು.18- ದೇಶದ 75ನೇ ಅಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಮದರಸಗಳಲ್ಲೂ ಕಡ್ಡಾಯವಾಗಿ ತಿರಂಗ ಹಾರಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಲು ಮುಂದಾಗಿದೆ. ಶೀಘ್ರದಲ್ಲೇ ಇಲಾಖೆಯಿಂದ ಮತ್ತೊಂದು ಬಾರಿ ಸುತ್ತೋಲೆ ಹೊರಡಿಸಲಿದ್ದು, ಮದರಸಾಗಳು, ಪ್ರೌಢಶಾಲೆ, ಸರ್ಕಾರಿ ಶಾಲೆಗಳು,ಅನುದಾನ, ಅನುದಾನರಹಿತ ಶಾಲೆಗಳು, ಪದವಿ, ಪದವಿಪೂರ್ವ ಕಾಲೇಜುಗಳು, ಅಂಗನವಾಡಿ ಕೇಂದ್ರಗಳಲ್ಲೂ ಕಡ್ಡಾಯವಾಗಿ ತಿರಂಗ ಅಭಿಯಾನವನ್ನು ನಡೆಸಬೇಕೆಂದು ಈಗಾಗಲೇ ಮೌಖಿಕ ಸೂಚನೆ ನೀಡಲಾಗಿದೆ. ಕಳೆದ ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸುತ್ತೋಲೆಯನ್ನು ಹೊರಡಿಸಿತ್ತು. […]