Sunday, September 15, 2024
Homeಜಿಲ್ಲಾ ಸುದ್ದಿಗಳು | District Newsಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹಾರಾಡಿದ ಹೊಲಿಗೆ ಬಿಚ್ಚಿದ ರಾಷ್ಟ್ರಧ್ವಜ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹಾರಾಡಿದ ಹೊಲಿಗೆ ಬಿಚ್ಚಿದ ರಾಷ್ಟ್ರಧ್ವಜ

Unstuched National flag at Hubli Airport

ಹುಬ್ಬಳ್ಳಿ,ಆ.31– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಮಧ್ಯಾಹ್ನ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಂದರ್ಭದಲ್ಲಿಯೇ ನಿಲ್ದಾಣದ ಆವರಣದಲ್ಲಿ ಹೊಲಿಗೆ ಬಿಚ್ಚಿದ ರಾಷ್ಟ್ರಧ್ವಜ ಹಾರಾಡಿದ ಘಟನೆ ನಡೆದಿದೆ.

ವಿಮಾನ ನಿಲ್ದಾಣದ ಆವರಣದಲ್ಲಿ ದಿನದ 24 ಗಂಟೆ ರಾಷ್ಟ್ರಧ್ವಜ ಹಾರಾಡುತ್ತದೆ. ಶುಕ್ರವಾರ ಮಧ್ಯಾಹ್ನ ಅಂದಾಜು 1.10ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಅದೇ ಹೊತ್ತಿಗೆ ಹೊಲಿಗೆ ಬಿಚ್ಚಿದ ರಾಷ್ಟ್ರಧ್ವಜ ಹಾರಾಡುತ್ತಿರುವುದು ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ತಕ್ಷಣ ಅದನ್ನು ಕೆಳಗಿಳಿಸಿ, ಬೇರೆ ಧ್ವಜ ಹಾರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಮಾನ ನಿಲ್ದಾಣದ ನಿರ್ದೇಶಕ ಅನೂಪಕುಮಾರ, ಮಧ್ಯಾಹ್ನ 12.30ರ ಹೊತ್ತಿಗೆ ಹೊಲಿಗೆ ಬಿಚ್ಚಿದ ರಾಷ್ಟ್ರಧ್ವಜ ಹಾರಾಡುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅದನ್ನು ಕೆಳಗಿಳಿಸಿ, 1 ಗಂಟೆ ಹೊತ್ತಿಗೆ ಮತ್ತೊಂದು ಧ್ವಜ ಹಾರಿಸಿದ್ದಾಗಿ ತಿಳಿಸಿದರು.

RELATED ARTICLES

Latest News