Sunday, September 15, 2024
Homeಜಿಲ್ಲಾ ಸುದ್ದಿಗಳು | District Newsಗದಗ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ

ಗದಗ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ

Farmer commits suicide in Gadag district

ಗದಗ,ಆ.31- ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಲಕ್ಷ್ಮೀಶ್ವರದ ಹಿರೇಮಣದಲ್ಲಿ ನಡೆದಿದೆ.ಶಂಕರಣ್ಣ ಗೋಡಿ(54) ಆತಹತ್ಯೆ ಮಾಡಿಕೊಂಡ ರೈತ.

ಟ್ರ್ಯಾಕ್ಟರ್‌ ಖರೀದಿ, ಬೆಳೆ ಸಾಲ, ಆಸ್ಪತ್ರೆ ವೆಚ್ಚಕ್ಕಾಗಿ ಹಲವು ಬ್ಯಾಂಕುಗಳಲ್ಲಿ ಸುಮಾರು 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ವರ್ಷದಿಂದ ವರ್ಷಕ್ಕೆ ಬಡ್ಡಿ ಹೆಚ್ಚಾಗುತ್ತಿತ್ತು. 5 ಎಕರೆಯಲ್ಲಿ ಬೆಳೆದಿದ್ದ ಹೆಸರು, ಭತ್ತ, ಶೇಂಗಾ, ಮೆಣಸಿನಕಾಯಿ ಬೆಳೆ ಭಾರಿ ಮಳೆಯಿಂದ ನಾಶವಾಗಿತ್ತು.

ಇದರಿಂದ ಕಂಗಾಲಾಗಿದ್ದ ರೈತ ಬ್ಯಾಂಕ್‌ ಸಾಲ ತೀರಿಸಲಾಗದೆ ಮನನೊಂದಿದ್ದರು.ರಾತ್ರಿ ತಮ ಜಮೀನಿನ ಬಳಿ ಹೋದ ಅವರು ಮರವೊಂದಕ್ಕೆ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ. ಲಕ್ಷ್ಮೀಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

RELATED ARTICLES

Latest News