Sunday, July 7, 2024
Homeರಾಜ್ಯವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಹಲವು ಸ್ಫೋಟಕ ಮಾಹಿತಿ ಬೆಳಕಿಗೆ

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಹಲವು ಸ್ಫೋಟಕ ಮಾಹಿತಿ ಬೆಳಕಿಗೆ

ಬೆಂಗಳೂರು, ಜೂ.29- ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಹಲವು ಸ್ಫೋಟಕ ಮಾಹಿತಿ ಬೆಳಕಿಗೆ ಅಭಿವೃದ್ಧಿ ನಿಗಮ ಹಗರಣದ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಹಲವು ಸ್ಫೋಟಕ ವಿಚಾರಗಳನ್ನು ಬಯಲಿಗೆಳಿದಿದೆ.ಯಾರದ್ದೋ ಕಂಪೆನಿ ಹೆಸರಿನಲ್ಲಿ ಇನ್ಯಾರೋ ಖಾತೆ ತೆರೆದು ಕೋಟಿ ಕೋಟಿ ಹಣ ವರ್ಗಾವಣೆ ಮಾಡಿರುವುದು ಎಸ್‌‍ಐಟಿ ತನಿಖೆಯಿಂದ ಬೆಳಕಿಗೆ ಬಂದಿದೆ.

ಕಂಪೆನಿಗಳ ಅಸಲಿ ಮಾಲೀಕರ ಗಮನಕ್ಕೆ ಬಾರದ ರೀತಿಯಲ್ಲಿ ಅದೇ ಕಂಪೆನಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕೋಟಿ ಕೋಟಿ ಹಣ ವಹಿವಾಟು ಮಾಡಿರುವುದನ್ನು ಪತ್ತೆಹಚ್ಚಿರುವ ಎಸ್‌‍ಐಟಿ, ನಕಲಿ ಅಕೌಂಟ್‌ನ ಅಸಲಿ ಮಾಲೀಕರನ್ನು ಪತ್ತೆ ಮಾಡಿ ಅವರನ್ನು ಕರೆಸಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಗೊತ್ತಾಗಿದೆ.

ತಮ ಕಂಪೆನಿ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವುದು ಕಂಪೆನಿಯ ಅಸಲಿ ಮಾಲೀಕರ ಗಮನಕ್ಕೆ ಬಂದಿಲ್ಲ. ಅದರಲ್ಲೂ ಆ ಖಾತೆಯಲ್ಲಿ ಕೋಟಿ ಕೋಟಿ ಹಣ ಇತ್ತೇ ಎಂಬುವುದು ತಿಳಿದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕಂಪೆನಿ ಮಾಲೀಕರು ದೂರು ನೀಡಿದ್ದು, ನಾಲ್ಕು ಎಫ್‌ಐಆರ್‌ ದಾಖಲಾಗಿದೆ. ಒಂದೊಂದು ಅಕೌಂಟ್‌ನಲ್ಲಿ ಸುಮಾರು 5 ಕೋಟಿಯಂತೆ ನಾಲ್ಕು ಖಾತೆಗಳಲ್ಲಿ 20 ಕೋಟಿಗೂ ಅಧಿಕ ಹಣ ವರ್ಗಾವಣೆಯಾಗಿದ್ದು, ಪುನಃ ಆ ಖಾತೆಗಳಿಂದ ಹಣ ಡ್ರಾ ಮಾಡಿಕೊಳ್ಳಲಾಗಿದೆ.ಈ ಖಾತೆಗಳಿಗೆ ವಾಲೀಕಿ ನಿಗಮದ ಅಧಿಕೃತ ಖಾತೆಯಿಂದ ಹಣ ವರ್ಗಾವಣೆಯಾಗಿರುವುದು ಎಸ್‌‍ಐಟಿ ತನಿಖೆಯಿಂದ ಗೊತ್ತಾಗಿದೆ.

ನಗರದ ಠಾಣೆಗಳಲ್ಲಿ ದಾಖಲಾಗಿರುವ ನಾಲ್ಕು ಎಫ್‌ಐಆರ್‌ ಗಳು ಎಸ್‌‍ಐಟಿಗೆ ವರ್ಗಾವಣೆಯಾಗಿದ್ದು, ಈ ಹಗರಣದಲ್ಲಿ ಸಿಲುಕಿರುವ ಇನ್ನಷ್ಟು ಮಂದಿಗೆ ಆತಂಕ ಶುರುವಾಗಿದೆ.ವಾಲೀಕಿ ನಿಗಮ ಹಗರಣದ ಆರೋಪಿಗಳು ಒಂದೊಂದೇ ಸತ್ಯ ಬಾಯ್ಬಿಡುತ್ತಿದ್ದಾರೆ. ನಿಗಮದ ಕೋಟ್ಯಾಂತರ ಹಣ ವಹಿವಾಟಿಗೆ ಬರೋಬ್ಬರಿ 193 ಅಕೌಂಟ್‌ಗಳನ್ನು ಬಳಸಿಕೊಂಡಿರುವುದನ್ನು ಎಸ್‌‍ಐಟಿ ಪತ್ತೆಹಚ್ಚಿದೆ.

ಈ ಎಲ್ಲಾ ಯೋಜನೆಯ ಮಾಸ್ಟರ್‌ ಮೈಂಡ್‌ ಹೈದ್ರಾಬಾದ್‌ ಮೂಲದ ಸತ್ಯನಾರಾಯಣ ವರ್ಮಾ ಎಂಬುವುದು ಗೊತ್ತಾಗಿದೆ.ನಕಲಿ ಅಕೌಂಟ್‌ಗಳನ್ನು ಸೃಷ್ಟಿಸಿ ವಹಿವಾಟು ಮಾಡಿದ ಆರೋಪದ ಮೇಲೆ ಮತ್ತೊಬ್ಬ ಆರೋಪಿಯನ್ನು ಎಸ್‌‍ಐಟಿ ಬಂಧಿಸಿದೆ. ಈತ ಕೋಟಿಕೋಟಿ ಹಣ ವಹಿವಾಟು ಮಾಡಲು ಸಹಾಯ ಮಾಡಿದ್ದ ಎಂಬುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

RELATED ARTICLES

Latest News