Sunday, January 19, 2025
Homeಬೆಂಗಳೂರುಬೆಂಗಳೂರು : ಮಹಡಿಯಿಂದ ತಳ್ಳಿ ಪೇಂಟರ್‌ ಕೊಲೆ

ಬೆಂಗಳೂರು : ಮಹಡಿಯಿಂದ ತಳ್ಳಿ ಪೇಂಟರ್‌ ಕೊಲೆ

ಬೆಂಗಳೂರು, ಜೂ.29- ನಿರ್ಮಾಣ ಹಂತದ ಕಟ್ಟಡದಲ್ಲಿ ಪಾರ್ಟಿ ವೇಳೆ ಕೆಲಸಗಾರರ ನಡುವೆ ಜಗಳ ನಡುವೆ ಪೇಂಟರ್‌ನನ್ನು ಕೆಳಗೆ ತಳ್ಳಿ ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಉತ್ತರ ಪ್ರದೇಶ ಮೂಲದ ವಿಶಾಲ್‌(24) ಕೊಲೆಯಾದ ಪೇಂಟರ್.

ಅಂಜನಾಪುರದಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಪೇಂಟರ್‌ ಹಾಗೂ ಇತರೆ ಕೆಲಸಗಾರರು ಕೆಲಸ ಮಾಡಿಕೊಂಡು ಅಲ್ಲೇ ಉಳಿದುಕೊಂಡಿದ್ದು, ರಾತ್ರಿ ಪಾರ್ಟಿ ಮಾಡಿದ್ದಾರೆ. ಆ ವೇಳೆ ವಿಶಾಲ್‌ ಮತ್ತು ಆತನ ಸ್ನೇಹಿತನ ನಡುವೆ ಯಾವುದೋ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಗಲಾಟೆಯ ಒಂದು ಹಂತದಲ್ಲಿ ಸ್ನೇಹಿತ ಏಕಾಏಕಿ ವಿಶಾಲ್‌ನನ್ನು 2ನೇ ಮಹಡಿಯಿಂದ ಕೆಳಗೆ ತಳ್ಳಿದ್ದಾನೆ.

ಕೆಳಗೆ ಬಿದ್ದು ಗಂಭೀರ ಗಾಯಗೊಂಡ ವಿಶಾಲ್‌ನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ತಲಘಟ್ಟಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Latest News