ಅಮರಾವತಿ, ಆ. 11– ಕರ್ನಾಟಕದ ತುಂಗ ಭದ್ರಾ ಅಣೆ ಕಟ್ಟಿನ ಕ್ರಸ್ಟ್ ಗೇಟ್ ಕೊಚ್ಚಿಹೋಗಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿ ಕಾರ (ಎಪಿಎಸ್ಡಿಎಂಎ) ಕೃಷ್ಣಾ ನದಿಯ ದಡದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಿದೆ.
ಚೈನ್ ಲಿಂಕ್ ತೊಂದರೆಯಿಂದ ಪ್ರವಾಹದ ತೀವ್ರತೆಗೆ ಗೇಟ್ ಸಂಖ್ಯೆ 19 ಕೊಚ್ಚಿಹೋಗಿದೆ ಎಂದು ಪ್ರಾಧಿ ಕಾರದ ವ್ಯವಸ್ಥಾಪಕ ನಿರ್ದೇಶಕ ಆರ್ ಕೂರ್ಮನಾಧ್ ಹೇಳಿದ್ದಾರೆ.
ಸುಮಾರು 35,000 ಕ್ಯೂಸೆಕ್ನಷ್ಟು ಪ್ರವಾಹದ ನೀರು ಹರಿದು ಬರುತ್ತಿದ್ದು, ಒಟ್ಟು 48,000 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ ಹೀಗಾಗಿ ಕರ್ನೂಲ್ ಜಿಲ್ಲೆಯ ಕೋಸಿರಿ, ಮಂತ್ರಾಲಯ, ನಂದಾವರಂ ಮತ್ತು ಕೌತಾಲಂನಲ್ಲಿರುವ ಜನರು ಎಚ್ಚರಿಕೆ ವಹಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ಕೃಷ್ಣಾ ನದಿ ತೀರದ ನಿವಾಸಿಗಳು ಕಾಲುವೆಗಳು ಮತ್ತು ಹೊಳೆಗಳನ್ನು ದಾಟುವುದನ್ನು ತಪ್ಪಿಸುವಂತೆ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.