ಮೆಲ್ಬೋರ್ನ್, ಮಾ.8- ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಮ್ಯಾಥ್ಯೂವೇಡ್ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ 2 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಜಿಟಿ ಫ್ರಾಂಚೈಸಿ ತಿಳಿಸಿದೆ. ಮಾರ್ಚ್ 21 ರಿಂದ 25ರವರೆಗೆ ಮ್ಯಾಥ್ಯೂ ವೇಡ್ ಅವರು ಶಫರ್ ಸೀಲ್ಡ್ ಟೂರ್ನಿಯಲ್ವಿ ತಸ್ಮೆನಿಯಾ ಪರ ಆಡುತ್ತಿದ್ದು ಆ ತಂಡವು ಫೈನಲ್ ಹಂತ ತಲುಪಿದರೆ ವೇಡ್ ಅವರ ಸೇವೆಯನ್ನು ತಂಡಕ್ಕೆ ಬಿಟ್ಟುಕೊಡಬೇಕೆಂದು ಜಿಟಿ ಫ್ರಾಂಚೈಸಿಯ ಮನವೊಲಿಸಲಾಗಿದೆ ಎಂದು ತಸ್ಮೆನಿಯಾ ಹೆಡ್ ಕೋಚ್ ಜೆಫ್ ವ್ಯಾಗನ್ ಹೇಳಿದ್ದಾರೆ.
17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ ಮುಂಬೈ ಇಂಡಿಯನ್ಸ್ ವಿರುದ್ಧ ಮಾರ್ಚ್ 25 ರಂದು ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ 27ರಂದು ಕಾದಾಟ ನಡೆಸಲಿದ್ದು ಈ ಪಂದ್ಯಗಳಿಂದ ವೇಡ್ ಅವರ ಸೇವೆಯನ್ನು ಜಿಟಿ ಕಳೆದುಕೊಳ್ಳಲಿದ್ದು, ಮಾರ್ಚ್ 31 ರಂದು ಸನ್‍ರೈಸರ್ಸ್ ಹೈದ್ರಾಬಾದ್ ವಿರುದ್ಧದ ತಂಡದ ಮೂಲಕ ಸೇವೆಗೆ ಲಭ್ಯವಾಗಲಿದ್ದಾರೆ.
2022ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ವೇಡ್ 10 ಪಂದ್ಯಗಳಿಂದ 113 ಸ್ಟ್ರೆಕ್‍ರೇಟ್‍ನಲ್ಲಿ 157 ರನ್ ಗಳಿಸಿದ್ದರು. ಆದರೆ 2023ರಲ್ಲಿ ವೃದ್ಧಿಮಾನ್ ಶಾ ಉತ್ತಮ ಫಾರ್ಮ್‍ನಲ್ಲಿದ್ದರಿಂದ ವೇಡ್ ಒಂದೇ ಒಂದು ಪಂದ್ಯವನ್ನೂ ಆಡುವ ಅವಕಾಶ ಪಡೆದಿರಲಿಲ್ಲ.