ಕಾಕಿನಾಡ , ಫೆ 11 (ಪಿಟಿಐ) ಇಲ್ಲಿನ ರಂಗರಾಯ ವೈದ್ಯಕೀಯ ಕಾಲೇಜಿನ 23 ವರ್ಷದ ವಿದ್ಯಾರ್ಥಿ ಮಧ್ಯರಾತ್ರಿಯಲ್ಲಿ ತನ್ನ ಹಾಸ್ಟೆಲ್‌ನಲ್ಲಿ ಆತಹತ್ಯೆ ಮಾಡಿಕೊಂಡಿದ್ದಾರೆ.ಆರ್ ಸಾಯಿ ರಾಮ್ ಎಂದು ಗುರುತಿಸಲಾದ ವಿದ್ಯಾರ್ಥಿ ತನ್ನ ರೂಮ್‌ಮೇಟ್ ಮತ್ತೊಂದು ಕೋಣೆಯಲ್ಲಿ ಓದುತ್ತಿದ್ದಾಗ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಆತಹತ್ಯೆಗೆ ಕಾರಣವನ್ನು ನಾವು ಇನ್ನೂ ನಿರ್ಧರಿಸಿಲ್ಲ, ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.ಪೊಲೀಸರ ಪ್ರಕಾರ, ಸಾಯಿ ರಾಮ್ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರಂ ಬಳಿಯ ಸಣ್ಣ ಹಳ್ಳಿಯಿಂದ ಬಂದವರ ಏತನಧ್ಯೆ, ಪೊಲೀಸರು ಬಿಎನ್‌ಎಸ್ ಸೆಕ್ಷನ್ 194 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ