Friday, November 22, 2024
Homeರಾಷ್ಟ್ರೀಯ | Nationalಮೆಹಬೂಬಾ ಮುಫ್ತಿಗೆ ಗೃಹಬಂಧನ

ಮೆಹಬೂಬಾ ಮುಫ್ತಿಗೆ ಗೃಹಬಂಧನ

ಶ್ರೀನಗರ, ಡಿ.11 (ಪಿಟಿಐ) ಜಮ್ಮುವಿಗೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ನ ತೀರ್ಪು ಹೊರಬೀಳುವ ಮುನ್ನವೇ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.

ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುವ ಮುನ್ನವೇ, ಪೊಲೀಸರು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ನಿವಾಸದ ಬಾಗಿಲುಗಳನ್ನು ಮುಚ್ಚಿದ್ದಾರೆ ಮತ್ತು ಅವರನ್ನು ಅಕ್ರಮ ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ಪಕ್ಷವು ಎಕ್ಸ್ನ ಪೊಸ್ಟ್ನಲ್ಲಿ ತಿಳಿಸಿದೆ.

ಏತನ್ಮಧ್ಯೆ, ನ್ಯಾಷನಲ್ ಕಾನರೆನ್ಸ್ (ಎನ್ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರ ಗುಪ್ಕಾರ್ನಲ್ಲಿರುವ ನಿವಾಸದ ಬಳಿ ಪತ್ರಕರ್ತರಿಗೆ ಸೇರಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗುಪ್ಕಾರ್ ರಸ್ತೆಯ ಪ್ರವೇಶ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಮತ್ತು ಎನ್ಸಿ ನಾಯಕರ ನಿವಾಸದ ಬಳಿ ಎಲ್ಲೂ ಪತ್ರಕರ್ತರನ್ನು ಬಿಡಲಿಲ್ಲ.

ಹಮಾಸ್‌ನಿಂದ ಒತ್ತೆಯಾಳುಗಳ ನರಮೇಧದ ಬೆದರಿಕೆ, ಬಾಂಬ್ ದಾಳಿ ಮೂಲಕ ಇಸ್ರೇಲ್ ಉತ್ತರ

ಒಮರ್ ಅಬ್ದುಲ್ಲಾ ಅವರು ಅಕ್ಟೋಬರ್ 2020 ರಲ್ಲಿ ತಮ್ಮ ಅಕೃತ ನಿವಾಸವನ್ನು ಖಾಲಿ ಮಾಡಿದ ನಂತರ ತಮ್ಮ ತಂದೆಯೊಂದಿಗೆ ವಾಸಿಸುತ್ತಿದ್ದಾರೆ.ಶ್ರೀನಗರದ ಸಂಸತ್ ಸದಸ್ಯರಾಗಿರುವ ಫಾರೂಕ್ ಅಬ್ದುಲ್ಲಾ ಅವರು ನಡೆಯುತ್ತಿರುವ ಸಂಸತ್ ಅವೇಶನಕ್ಕಾಗಿ ದೆಹಲಿಯಲ್ಲಿದ್ದರೆ, ಅವರ ಮಗ ಕಣಿವೆಯಲ್ಲಿದ್ದಾರೆ.

RELATED ARTICLES

Latest News