ಬೆಂಗಳೂರು,ಏ.12- ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯುವ ದಿನದಂದು ಮೆಟ್ರೋ ರೈಲು ಸೇವೆಯನ್ನು ರಾತ್ರಿ 11.30ರವರೆಗೂ ವಿಸ್ತರಣೆ ಮಾಡಲಾಗುತ್ತದೆ. ನಗರದಲ್ಲಿ ನಡೆಯುವ ಟಾಟಾ ಐಪಿಎಲ್ ಕ್ರಿಕೆಟ್ ಪಂದ್ಯಗಳ ವೀಕ್ಷಣೆಗಾಗಿ ಬರುವ ವೀಕ್ಷಕರ ಅನುಕೂಲಕ್ಕಾಗಿ ಏ.15, ಮೇ4, ಮೇ 12 ಮತ್ತು 18ರಂದು ಎಲ್ಲಾ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಯನ್ನು ರಾತ್ರಿ 11.30ಕ್ಕೆ ವಿಸ್ತರಿಸುವುದಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ತಿಳಿಸಿದೆ.
ಪಂದ್ಯ ನಡೆಯುವ ದಿನಗಳಲ್ಲಿ ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಟಿಕೆಟ್ಗಳನ್ನು 50 ರೂ.ಗೆ ಮಾರಾಟ ಮಾಡಲಾಗುತ್ತದೆ.ಕಬ್ಬನ್ಪಾರ್ಕ್ ಮತ್ತು ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ಸೀಮಿತವಾಗಿದ್ದು, ವಿತರಣೆಯ ದಿನಗಳಲ್ಲಿ ರಾತ್ರಿ 8ರಿಂದ ದಿನದ ಸೇವೆಗಳು ಕೊನೆಗೊಳ್ಳುವವರೆಗೂ ಪೇಪರ್ ಟಿಕೆಟ್ ಮಾನ್ಯವಾಗಿರುತ್ತದೆ. ಆದರೆ ಟೋಕನ್ ಲಭ್ಯ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ನಿಗಮ ತಿಳಿಸಿದೆ.
ಎ ಂದಿನಂತೆ ಕ್ಯೂಆರ್ ಕೋಡ್ ಟಿಕೆಟ್ಗಳು, ಸ್ಮಾರ್ಟ್ ಕಾರ್ಡ್ಗಳು, ಎಂಸಿಎಂಸಿ ಕಾರ್ಡ್ಗಳನ್ನು ಬಳಸಬಹುದು. ಕಬ್ಬನ್ಪಾರ್ಕ್ ಮತ್ತು ಎಂಜಿರಸ್ತೆ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರಯಾಣಿಕರು ವಾಟ್ಸಪ್, ನಮ್ಮ ಮೆಟ್ರೋ ಆ್ಯಪ್ , ಪೇಟಿಎಂಗಳ ಮೂಲಕ ಕ್ರಿಕೆಟ್ ಪಂದ್ಯ ಆರಂಭಕ್ಕೂ ಮುನ್ನ ವಿಸ್ತೃತವಾಗಿ ಕ್ಯೂ ಆರ್ ಟಿಕೆಟ್ಗಳನ್ನು ಖರೀದಿಸಬಹುದಾಗಿದೆ.