Thursday, February 22, 2024
Homeರಾಜ್ಯನಾವು ಹಿಂದೂ ವಿರೋಧಿಗಳಲ್ಲ : ಸಚಿವ ಚಲುವರಾಯಸ್ವಾಮಿ

ನಾವು ಹಿಂದೂ ವಿರೋಧಿಗಳಲ್ಲ : ಸಚಿವ ಚಲುವರಾಯಸ್ವಾಮಿ

ಬೆಂಗಳೂರು, ಫೆ.1-ನಾವು ಹಿಂದೂ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿರುವ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು, ಮಂಡ್ಯದಲ್ಲಿ ಬೆಂಕಿ ಹಚ್ಚೋಕೆ ಸಾಧ್ಯವಿಲ್ಲ ಎಂದು ಪ್ರತಿಪಕ್ಷಗಳ ನಾಯಕರಿಗೆ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಇತಿಹಾಸವನ್ನೂ ನೋಡಿ, ನಮ್ಮ ಇತಿಹಾಸವನ್ನೂ ನೀವು ನೋಡಿ. ಮಂಡ್ಯ ಜನರು ದೇವೇಗೌಡರಿಗೆ ಸಹಕಾರ ನೀಡಿದ್ದಾರೆ ಎಂದರು.

ರಾಷ್ಟ್ರಧ್ವಜ, ಕನ್ನಡ ಧ್ವಜ ಅಷ್ಟೇ ಇರುವುದು. ಈ ಎರಡು ಧ್ವಜ ಹಾರಿಸುವುದಾಗಿ ಒಪ್ಪಿಗೆ ಪಡೆದಿದ್ದರು. ಆದರೆ, ಅವರು ಮಾಡಿದ್ದು ಏನು? ಎಂದು ಪ್ರಶ್ನಿಸಿದರು. ಜ.26 ರಂದು ರಾಷ್ಟ್ರಧ್ವಜವನ್ನು ಅವರೇ ಹಾರಿಸಿದ್ದಾರೆ. ಅಂದು ಸಂಜೆ ಅವರೇ ಕೆಳಗಿಳಿಸಿದ್ದಾರೆ. ನಂತರ ಬೇರೆ ಧ್ವಜ ಹಾರಿಸುವ ಪ್ರಯತ್ನ ನಡೆಸಿದ್ದಾರೆ. ನಮ್ಮ ನೆಮ್ಮದಿ ಹಾಳು ಮಾಡಬೇಡಿ ಎಂದು ಮಂಡ್ಯದ ಜನ ಹೇಳುತ್ತಿದ್ದಾರೆ. ಪ್ರತಿಪಕ್ಷಗಳು ಜನರನ್ನು ಪ್ರೊಚೋದಿಸುತ್ತಿವೆ. ಮಂಡ್ಯದ ಜನ ಯಾರನ್ನೂ ಬೆಂಬಲಿಸಿಲ್ಲ. ಲೋಕಸಭೆ ಚುನಾವಣೆಗಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜಕೀಯ ಲಾಭಕ್ಕಾಗಿ ಈ ಪ್ರಯತ್ನ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಗ್ರಾಮ ಪಂಚಾಯ್ತಿಯಲ್ಲಿ ನಕಲಿ ದಾಖಲೆ ಸೃಷ್ಟಿ ಸಾಧ್ಯವೇ? ದಾಖಲೆ ಕಚೇರಿಯಲ್ಲಿರುತ್ತದೆ, ಮನೆಗೆ ಯಾಕೆ ಹೋಗುತ್ತದೆ ಎಂದು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಿರೀಕ್ಷೆಯಂತೆ ಕೇಂದ್ರ ಸರ್ಕಾರ ಚುನಾವಣಾ ಬಜೆಟ್ ಮಂಡಿಸುತ್ತದೆ. ನಮ್ಮ ಗ್ಯಾರೆಂಟಿಯನ್ನು ಅವರು ಅನುಕರಣೆ ಮಾಡುತ್ತಾರೆ. ಕಳೆದ 10 ವರ್ಷಗಳಿಂದ ಹೇಳಿಕೊಳ್ಳುವ ಸಾಧನೆ ಏನೂ ಮಾಡಿಲ್ಲ ಎಂದರು.

ಆಗಸ್ಟ್ 27 ರಂದು ಕೇಂದ್ರ ಸರ್ಕಾರಕ್ಕೆ ಬರಪರಿಹಾರದ ಬಗ್ಗೆ ಮನವಿ ಸಲ್ಲಿಸಿ ಎನ್‍ಡಿಆರ್‍ಎಫ್ ನೆರವು ಕೋರಿದ್ದರೂ ಇಲ್ಲಿಯವರೆಗೆ ಅದರ ಅನುದಾನ ಬಂದಿಲ್ಲ. ನಾವು ಪ್ರಧಾನಿ, ಕೇಂದ್ರ ಸಚಿವರನ್ನು ಈ ಸಂಬಂಧ ಭೇಟಿ ಮಾಡಿ ಮನವಿ ಮಾಡಿದರೂ ರೈತರ ಬೆಳೆ ನಷ್ಟ ಪರಿಹಾರ ಕೊಟ್ಟಿಲ್ಲ. ಇಂತಹ ಕೆಟ್ಟ ತೀರ್ಮಾನವನ್ನು ಎಲ್ಲೂ ನೋಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

RELATED ARTICLES

Latest News