Monday, July 15, 2024
Homeರಾಜ್ಯನಿಗದಿತ ಸಮಯದೊಳಗೆ ಜನರ ಸಮಸ್ಯೆಗಳನ್ನು ಪರಿಹರಿಸಿ : ಸಚಿವ ಗುಂಡೂರಾವ್

ನಿಗದಿತ ಸಮಯದೊಳಗೆ ಜನರ ಸಮಸ್ಯೆಗಳನ್ನು ಪರಿಹರಿಸಿ : ಸಚಿವ ಗುಂಡೂರಾವ್

ಬೆಂಗಳೂರು, ಸೆ.25- ಜನತಾ ದರ್ಶನಕ್ಕೆ ಬರುವ ಜನರ ಕೆಲಸಗಳನ್ನು ನಿಗದಿತ ಸಮಯದೊಳಗೆ ಪರಿಹರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜನತಾದರ್ಶನಕ್ಕೆ ಚಾಲನೆ ನೀಡಿದ ಅವರು, ಅರ್ಜಿ ಹಿಡಿದುಕೊಂಡು ಬರುವ ಜನಸಾಮಾನ್ಯರಿಗೆ ಸ್ಪಷ್ಟತೆ ಕೊಡಬೇಕು.

ಕೇವಲ ಅರ್ಜಿಗಳನ್ನು ಸ್ವೀಕರಿಸಿದರೆ ಪ್ರಯೋಜನವಿಲ್ಲ. ಸ್ಥಳದಲ್ಲೇ ಅವರಿಗೆ ಪರಿಹಾರ ಒದಗಿಸುವಂತ ವ್ಯವಸ್ಥೆ ಜಾರಿಗೆ ಬರಬೇಕು ಎಂದರು.
ಜನರು ಕೇಳುವ ಕೆಲಸ ಕಾರ್ಯಗಳು ಆಗೋತ್ತದೆಯೋ, ಇಲ್ಲವೋ ಎಂಬ ಸ್ಪಷ್ಟತೆಯನ್ನು ಜನರಿಗೆ ನೀಡಿ. ನೋಡೊಣ, ಮಾಡೊಣ ಎಂದು ಹೇಳಿ ಜನರನ್ನು ಅಲೆದಾಡಿಸುವ ಪರಿಸ್ಥಿತಿಗೆ ತರಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಯಾವ ಕಾರ್ಯಗಳು ಈಡೇರಿಸಲು ಸಾಧ್ಯ ಅವುಗಳನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ಮಾಡಿಕೊಡಿ. ಯಾವ ಕೆಲಸಗಳು ಮಾಡಲು ಸಾಧ್ಯವಿಲ್ಲ ಆ ಬಗ್ಗೆ ಜನರಿಗೆ ನೇರವಾಗಿ ನೈಜ ಪರಿಸ್ಥಿತಿಯನ್ನು ತಿಳಿಸಿ ಎಂದರು.

ಬಂದ್‍ಗೆ ಬೆಂಬಲಿಸುವುದು ಸಾರಿಗೆ ಒಕ್ಕೂಟಗಳಿಗೆ ಬಿಟ್ಟಿದ್ದು : ಸಚಿವ ರಾಮಲಿಂಗಾರೆಡ್ಡಿ

ತಾಲೂಕು ಮಟ್ಟದಲ್ಲೂ ಜನತಾ ದರ್ಶನ :
ಜಿಲ್ಲಾ ಕೇಂದ್ರದಲ್ಲಿ ಅಷ್ಟೇ ಅಲ್ಲ ತಾಲೂಕು ಮಟ್ಟದಲ್ಲೂ ಜನತಾ ದರ್ಶನಗಳನ್ನು ನಡೆಸುವಂತೆ ಇದೇ ವೇಳೆ ದಿನೇಶ್ ಗುಂಡೂರಾವ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಜಿಲ್ಲಾಡಳಿತ ಜನರ ಬಳಿಗೆ ಹೋಗಬೇಕು. ಗ್ರಾಮೀಣ ಪ್ರದೇಶದ ಹಲವು ಜನರಿಗೆ ಜಿಲ್ಲಾ ಕೇಂದ್ರಗಳಿಗೆ ಬರಲು ಕಷ್ಟವಾಗಿರುತ್ತದೆ. ಹೀಗಾಗಿ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸಿದರೆ, ಹಳ್ಳಿಗಾಡಿನ ಜನರಿಗೆ ತಮ್ಮ ಸಮಸ್ಯಗಳನ್ನ ಪರಿಹರಿಸಿಕೊಳ್ಳಲು ಅನುಕೂಲವಾಗಲಿದೆ.

ಮುಂದಿನ ಜನತಾ ದರ್ಶನಗಳನ್ನು ತಾಲೂಕುಗಳಲ್ಲಿ ಆಯೋಜಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಜಿಲ್ಲಾಯಲ್ಲಿ ಇರುವ 9 ತಾಲೂಕುಗಳಲ್ಲೂ ಹಂತ ಹಂತವಾಗಿ ಜನತಾ ದರ್ಶನಗಳನ್ನು ಆಯೋಜಿಸಲಾಗುವುದು ಎಂದು ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

RELATED ARTICLES

Latest News