Thursday, November 21, 2024
Homeರಾಜಕೀಯ | Politicsಕಿಡಿಗೇಡಿತನ ಬಿಜೆಪಿಯವರ ಹುಟ್ಟುಗುಣ : ಸಚಿವ ರಾಮಲಿಂಗಾರೆಡ್ಡಿ

ಕಿಡಿಗೇಡಿತನ ಬಿಜೆಪಿಯವರ ಹುಟ್ಟುಗುಣ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು,ಅ.4- ಬಿಜೆಪಿ ಅಧಿಕಾರದಲ್ಲಿದ್ದಾಗ ಜಾತಿ, ಧರ್ಮಗಳ ಹೆಸರಿನಲ್ಲಿ ಕಿತ್ತಾಟ ತಂದಿಡುವುದು, ಆ ಪಕ್ಷದ ಕಾರ್ಯಕರ್ತರೇ ವೇಷ ಬದಲಿಸಿಕೊಂಡು ಕಿಡಿಗೇಡಿತನ ನಡೆಸುವುದು ಬಿಜೆಪಿಯವರ ಹುಟ್ಟುಗುಣವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಹನಹಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರದಲ್ಲಿದ್ದಾಗ ನೈತಿಕ ಪೊಲೀಸ್‍ಗಿರಿ, ಸಾರ್ವಜನಿಕರ ಮೇಲೆ ಹಲ್ಲೆ ಮಾಡುವುದು, ಕೋಮುಗಲಭೆ ಮಾಡಿಸುವುದು ಅವರ ಪ್ರವೃತ್ತಿ.

ಅಧಿಕಾರದಲ್ಲಿ ಇಲ್ಲದಿದ್ದಾಗ ಕಿತಾಪತಿ ಮಾಡುವುದರಲ್ಲಿ ನಿಸ್ಸೀಮರು. ಸಮಾಜದ ನಡುವೆ ಜಗಳ ತಂದಿಟ್ಟು, ಸಂಘರ್ಷ ಸೃಷ್ಟಿಸುವುದು, ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುವುದು ಅವರ ಹುಟ್ಟುಗುಣವಾಗಿದೆ ಎಂದು ದೂರಿದರು.

ಸಿಕ್ಕಿಂನಲ್ಲಿ ಮೇಘಸ್ಪೋಟ, 23 ಸೇನಾ ಸಿಬ್ಬಂದಿ ನಾಪತ್ತೆ

ಬೆಂಗಳೂರಿನ ಮೆಟ್ರೊ ವಿಷಯದಲ್ಲಿ ಬಿಜೆಪಿ ಅಥವಾ ಎನ್‍ಡಿಎ ಪಾತ್ರ ಏನಿಲ್ಲ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ಮೆಟ್ರೊ ಯೋಜನೆ ಜಾರಿಗೆ ಬಂದಿತು. ಅದರ ಉದ್ಘಾಟನೆಗೆ ಕಾಂಗ್ರೆಸ್ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂಬ ಬಿಜೆಪಿ ಸಂಸದರ ಹೇಳಿಕೆ ಅಪ್ರಸ್ತುತ. ಮೆಟ್ರೊ ರೈಲ್ವೆ ಸಂಚಾರ ಸುರಕ್ಷತೆಗೆ ಅಗತ್ಯವಾದ ಪರವಾನಗಿಗಳು ದೊರೆತ ಬಳಿಕ ಸಮಯ ನೋಡಿಕೊಂಡು ಉದ್ಘಾಟನೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನ ಮೆಟ್ರೊ ವಿಷಯದಲ್ಲಿ ಪ್ರದಾನಿ ನರೇಂದ್ರ ಮೋದಿಯವರ ಪಾತ್ರ ಏನೂ ಇಲ್ಲ. ಕೇಂದ್ರ ಸರ್ಕಾರ ಒಂದಿಷ್ಟು ಅನುದಾನ ನೀಡಿರಬಹುದು. ಆದರೆ ಈ ಯೋಜನೆಯ ಸಂಪೂರ್ಣ ಹೊಣೆಗಾರಿಕೆ ರಾಜ್ಯಸರ್ಕಾರದ್ದಾಗಿದೆ. ಬಿಜೆಪಿಯವರು ಅನಗತ್ಯವಾಗಿ ಯೋಜನೆಗಳ ಕ್ರೆಡಿಟ್ ಪಡೆದುಕೊಳ್ಳಲು ಯತ್ನಿಸುತ್ತಾರೆ. ಅವರು ಅಭಿವೃದ್ಧಿ ಪರವಾಗಿಲ್ಲ. ಪ್ರತಿಮೆಗಳನ್ನು ನಿರ್ಮಿಸಲು, ಹೆಸರುಗಳನ್ನು ಮರು ನಾಮಕರಣ ಮಾಡಲು ಮಾತ್ರ ಬಿಜೆಪಿಗರು ಲಾಯಕ್ಕು, ಪೂರ್ಣಗೊಂಡಿರುವ ಕೆಲಸದಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡು ಪ್ರಚಾರ ಪಡೆದುಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಇಡಿ,ಐಟಿ ಅಧಿಕಾರಿಗಳು ಬೀದಿ ನಾಯಿ, ಬೆಕ್ಕುಗಳಂತೆ ತಿರುಗುತ್ತಿದ್ದಾರೆ ; ಬಘೇಲ್

ಬಿಎಂಟಿಸಿಯ ಕಮರ್ಶಿಯಲ್ ವಿಭಾಗದಲ್ಲಿ ಹಗರಣ ನಡೆದಿರುವ ಬಗ್ಗೆ ದೂರುಗಳು ತಮ್ಮ ಗಮನದಲ್ಲಿದೆ. ಡಿಫೋ ಮಟ್ಟದಲ್ಲಿ ಚಾಲಕರಿಗೆ, ನಿರ್ವಾಹಕರಿಗೆ ಡ್ಯೂಟಿ ನೀಡುವಾಗ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದಾಗ್ಯೂ ಉದ್ದೇಶಪೂರ್ವಕವಾಗಿ ಕೆಲವರು ಪುನರಾವರ್ತಿತ ಪ್ರವೃತ್ತಿಯನ್ನು ಮುಂದುವರೆಸುತ್ತಿದ್ದಾರೆ. ಎಲ್ಲರೂ ಈ ರೀತಿ ಇರುವುದಿಲ್ಲ. ಆದರೆ ಕೆಲವರಿಂದಾಗಿ ಕೆಟ್ಟ ಹೆಸರು ಬರುತ್ತಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಹಿರಿಯ ಅಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

RELATED ARTICLES

Latest News