Saturday, July 13, 2024
Homeರಾಷ್ಟ್ರೀಯಇಡಿ,ಐಟಿ ಅಧಿಕಾರಿಗಳು ಬೀದಿ ನಾಯಿ, ಬೆಕ್ಕುಗಳಂತೆ ತಿರುಗುತ್ತಿದ್ದಾರೆ ; ಬಘೇಲ್

ಇಡಿ,ಐಟಿ ಅಧಿಕಾರಿಗಳು ಬೀದಿ ನಾಯಿ, ಬೆಕ್ಕುಗಳಂತೆ ತಿರುಗುತ್ತಿದ್ದಾರೆ ; ಬಘೇಲ್

ರಾಯ್‍ಪುರ,ಅ.4- ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆಯ ಸಿಬ್ಬಂದಿಗಳು ಬೀದಿ ನಾಯಿ ಮತ್ತು ಬೆಕ್ಕುಗಳಿಗಿಂತ ಹೆಚ್ಚು ತಿರುಗಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಯಾರಾದರೂ ಜೈಲಿಗೆ ಹೋದರೆ ಅವರಿಗೆ ಜಾಮೀನು ಸಿಗುವುದಿಲ್ಲ ಎಂದು ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ.

ರಾಜ್ಯದಲ್ಲಿನ ಭ್ರಷ್ಟರು ಇಡಿ, ಐಟಿ ಅಧಿಕಾರಿಗಳನ್ನು ಎದುರಿಸಲು ಸಾಧ್ಯವಿಲ್ಲ, ಹೀಗಾಗಿ ನಗರನಾರ್ ಸ್ಟೀಲ್ ಪ್ಲಾಂಟ್ ಉದ್ಘಾಟನೆಗೆ ಬರಲು ಹೆದರುತ್ತಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಮುಖ್ಯಮಂತ್ರಿ ಬಘೇಲ್ ಪತ್ರಕರ್ತರನ್ನೂ ಜೈಲಿಗೆ ಕಳುಹಿಸುತ್ತಾರೆ, ಆದ್ದರಿಂದ ಭಯಪಡುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ.

ಮೋಟಾರ್ ಸೈಕಲ್‍ಗೆ ಟ್ರಾಕ್ಟರ್ ಟ್ರಾಲಿ ಡಿಕ್ಕಿ ಹೊಡೆದು ಮೂವರ ಸಾವು

ಪತ್ರಕರ್ತರನ್ನೂ ಜೈಲಿಗೆ ಕಳುಹಿಸುತ್ತಿದ್ದಾರೆ ಎಂದರೆ ಅವರಿಗೆ ಭಯವಾಗುವುದು ಸ್ಪಷ್ಟ. ನಾಯಿ-ಬೆಕ್ಕುಗಳಿಗಿಂತಲೂ ಹೆಚ್ಚು ಇಡಿ ಮತ್ತು ಐಟಿ ಸಿಬ್ಬಂದಿಗಳು ಓಡಾಡುತ್ತಿದ್ದಾರೆ. ಒಮ್ಮೆ ಜೈಲಿಗೆ ಹೋದವರಿಗೆ ಜಾಮೀನು ಸಿಗುವುದಿಲ್ಲ. ಅವರಿಗೆ ಭಯಪಡಿರಿ (ಪ್ರಧಾನಿ ಮೋದಿಯನ್ನು ಉಲ್ಲೇಖಿಸಿ) ಎಂದು ಮುಖ್ಯಮಂತ್ರಿ ಬಘೇಲ್ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ಸ್ಥಾವರಕ್ಕೆ ವಿರುದ್ಧವಾಗಿಲ್ಲ ಎಂದು ಹೇಳಿದ ಬಘೇಲ, ಸ್ಥಾವರವನ್ನು ಪ್ರಾರಂಭಿಸುವ ಮೊದಲು ಅದನ್ನು ಖಾಸಗೀಕರಣಗೊಳಿಸಬೇಕು ಎಂದು ಬಂಡವಾಳ ಹಿಂತೆಗೆದುಕೊಳ್ಳುವ ಪಟ್ಟಿಗೆ ಸೇರಿಸಲಾಯಿತು ಎಂದು ಆರೋಪಿಸಿದರು. ಸ್ಥಾವರವು ಕಾರ್ಯಾರಂಭ ಮಾಡುವ ಮೊದಲು, ಅದನ್ನು ಮಾರಾಟ ಮಾಡಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಪೊಲೀಸ್ ಕಸ್ಟಡಿಗೆ ನ್ಯೂಸ್‍ಕ್ಲಿಕ್ ಸಂಸ್ಥಾಪಕ

ನಾವು ಬಸ್ತಾರ್‍ನಲ್ಲಿ ಶಾಂತಿಯುತ ಬಂದ್‍ಗೆ ಕರೆ ನೀಡಿದ್ದೇವೆ. ನಾಗರ್ನಾರ್ ಪ್ಲಾಂಟ್ ಖಾಸಗಿಯವರ ಕೈಗೆ ಹೋಗದಂತೆ ಪ್ರಧಾನಿ ನೋಡಿಕೊಳ್ಳಬೇಕು. ಸ್ಥಾವರದ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಹಲವಾರು ಬಾರಿ ನಿರ್ಲಕ್ಷಿಸಲಾಗಿದೆ, ಎಂದು ಮುಖ್ಯಮಂತ್ರಿ ಹೇಳಿದರು, ಪ್ರಧಾನಿ ಸಾಮಾನ್ಯರ ಮಾತನ್ನು ಕೇಳಬೇಕು ಎಂದು ಅವರು ಒತ್ತಾಯಿಸಿದರು.

RELATED ARTICLES

Latest News