Home ಇದೀಗ ಬಂದ ಸುದ್ದಿ ಪೊಲೀಸ್ ಕಸ್ಟಡಿಗೆ ನ್ಯೂಸ್‍ಕ್ಲಿಕ್ ಸಂಸ್ಥಾಪಕ

ಪೊಲೀಸ್ ಕಸ್ಟಡಿಗೆ ನ್ಯೂಸ್‍ಕ್ಲಿಕ್ ಸಂಸ್ಥಾಪಕ

0
ಪೊಲೀಸ್ ಕಸ್ಟಡಿಗೆ ನ್ಯೂಸ್‍ಕ್ಲಿಕ್ ಸಂಸ್ಥಾಪಕ

ನವದೆಹಲಿ,ಅ.4- ಚೀನಾ ಪರ ಪ್ರಚಾರಕ್ಕಾಗಿ ಪೋರ್ಟಲ್ ಹಣ ಪಡೆದ ಆರೋಪದ ಹಿನ್ನೆಲೆಯಲ್ಲಿ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬಂಧಿತರಾಗಿರುವ ನ್ಯೂಸ್‍ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಪೊಲೀಸರು ನಿನ್ನೆ 30 ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿ ಹಲವಾರು ಪತ್ರಕರ್ತರನ್ನು ಪ್ರಶ್ನಿಸಿದ್ದರು ಮತ್ತು ಪುರಕಾಯಸ್ಥ ಮತ್ತು ಚಕ್ರವರ್ತಿಯನ್ನು ಬಂಧಿಸಿದ್ದರು. ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ಯಾಮನೂರು ಶಿವಶಂಕರಪ್ಪನವರ ಹೇಳಿಕೆ ಆಡಳಿತದ ಮೇಲೆ ಪರಿಣಾಮ ಬೀರಲಿದೆ : ರಾಯರೆಡ್ಡಿ

ದೆಹಲಿಯಲ್ಲಿರುವ ನ್ಯೂಸ್‍ಕ್ಲಿಕ್ ಕಚೇರಿಗೆ ಪೊಲೀಸರು ಸೀಲ್ ಹಾಕಿದ್ದಾರೆ. 46 ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಮತ್ತು ಲ್ಯಾಪ್‍ಟಾಪ್‍ಗಳು ಮತ್ತು ಮೊಬೈಲ್ ಫೋನ್‍ಗಳು ಸೇರಿದಂತೆ ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ.

ಫೈನಲ್‍ಗೆ ತಲುಪಿ ಒಲಿಂಫಿಕ್ಸ್ ಗೆ ಅರ್ಹತೆ ಪಡೆದ ಲವ್ಲೀನಾ

ಪೊಲೀಸ್ ಪ್ರಶ್ನಿಸಿದವರಲ್ಲಿ ಪತ್ರಕರ್ತರಾದ ಊರ್ಮಿಳೇಶ್, ಔನಿಂದ್ಯೋ ಚಕ್ರವರ್ತಿ, ಅಭಿಸಾರ್ ಶರ್ಮಾ, ಪರಂಜಯ್ ಗುಹಾ ಠಾಕುರ್ತಾ ಹಾಗೂ ಇತಿಹಾಸಕಾರ ಸೊಹೈಲ್ ಹಶ್ಮಿ, ವಿಡಂಬನಕಾರ ಸಂಜಯ್ ರಾಜೌರಾ ಮತ್ತು ಸೆಂಟರ್ ಪರ್ ಟೆಕ್ನಾಲಜಿ ಡೆವಲಪ್‍ಮೆಂಟ್‍ನ ಡಿ ರಘುನಂದನ್ ಸೇರಿದ್ದಾರೆ. ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಅವರನ್ನು ಹೋಗಲು ಬಿಡಲಾಯಿತು.