Home ಇದೀಗ ಬಂದ ಸುದ್ದಿ ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆ ರದ್ದು

ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆ ರದ್ದು

0
ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆ ರದ್ದು

ಪಾಟ್ನಾ, ಅ. 4 (ಪಿಟಿಐ) – ಬಿಹಾರ ಕಾನ್‍ಸ್ಟೆಬಲ್ ನೇಮಕಾತಿ ಪರೀಕ್ಷೆಯನ್ನು ಪೇಪರ್ ಸೋರಿಕೆಯಿಂದಾಗಿ ರದ್ದುಗೊಳಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಅ.1 ರಂದು ನಡೆದಿದ್ದ ಪರೀಕ್ಷೆ ವೇಳೆ ಅಪ್ರಾಮಾಣಿಕ ಅಭ್ಯರ್ಥಿಗಳು ನಕಲು ಮಾಡಿ ಸಿಕ್ಕಿಬಿದ್ದಿದ್ದಾರೆ ಎಂದು ಕಾನ್‍ಸ್ಟೆಬಲ್‍ಗಳ ಕೇಂದ್ರೀಯ ಆಯ್ಕೆ ಮಂಡಳಿ ತಿಳಿಸಿದೆ.

ಕೆಲವು ಕೇಂದ್ರಗಳಲ್ಲಿ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಇತರ ಮೋಸದ ವಿಧಾನಗಳನ್ನು ಬಳಸುತ್ತಿರುವ ಬಗ್ಗೆ ದೂರುಗಳಿವೆ. ಪರಿಣಾಮವಾಗಿ, ಪರೀಕ್ಷೆಯನ್ನು ಮುಂದಿನ ಸೂಚನೆಯವರೆಗೆ ಮುಂದೂಡಲಾಗಿದೆ. ನಕಲು ಮಾಡಿದ ವ್ಯಕ್ತಿಗಳನ್ನು ಸ್ಥಳದಲ್ಲೇ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಮಂಡಳಿಗೆ ಸಾಕಷ್ಟು ದೂರುಗಳು ಬಂದಿದ್ದು, ಪರೀಕ್ಷೆಯ ಪಾವಿತ್ರ್ಯತೆ ಕಳೆದುಹೋಗಿದೆ, ಇದರಿಂದಾಗಿ ಅಕ್ಟೋಬರ್ 1 ರ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.

ಇದಲ್ಲದೆ, ಅಕ್ಟೋಬರ್ 7 ಮತ್ತು ಅಕ್ಟೋಬರ್ 15 ರಂದು ನಿಗದಿಪಡಿಸಲಾದ ಪರೀಕ್ಷೆಗಳನ್ನು ಮುಂದಿನ ಸೂಚನೆ ಬರುವವರೆಗೆ ಮುಂದೂಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಫೈನಲ್‍ಗೆ ತಲುಪಿ ಒಲಿಂಫಿಕ್ಸ್ ಗೆ ಅರ್ಹತೆ ಪಡೆದ ಲವ್ಲೀನಾ

ಅನೇಕರು ಕೈಬರಹದ ಉತ್ತರ ಪತ್ರಿಕೆಗಳೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದ್ದು, ಈ ಪ್ರಕರಣವನ್ನು ಬಿಹಾರ ಪೊಲೀಸ್‍ನ ಆರ್ಥಿಕ ಅಪರಾಧ ಘಟಕ (ಇಒಯು) ತನಿಖೆ ನಡೆಸುತ್ತಿದೆ. ಇದುವರೆಗೆ 21 ಜಿಲ್ಲೆಗಳಲ್ಲಿ ಒಟ್ಟು 67 ಎ-ïಐಆರ್‍ಗಳನ್ನು ದಾಖಲಿಸಿದೆ ಮತ್ತು ಪ್ರಶ್ನೆ ಪತ್ರಿಕೆಗಳ ಸೋರಿಕೆಯಲ್ಲಿ ಅವರ ಪಾತ್ರಕ್ಕಾಗಿ 148 ಜನರನ್ನು ಬಂಧಿಸಲಾಗಿದೆ.